ಬೇಕಾದಷ್ಟು ಹಣ, ಆಸ್ತಿ, ಶ್ರೀಮಂತಿಕೆ ಇದ್ರೆ ಮಾತ್ರ ಜೀವನದಲ್ಲಿ ಸಂತೋಷವಾಗಿರಲು ಸಾಧ್ಯ, ಇದ್ಯಾವುದು ಇಲ್ಲದಿದ್ದರೆ ಸಂತೋಷವಾಗಿರಲು ಸಾಧ್ಯವೇ ಇಲ್ಲವೆಂದು ಅಂದುಕೊಳ್ಳುತ್ತಾರೆ. ಆದರೆ ಆಚಾರ್ಯ ಚಾಣಕ್ಯರ (ಆಚಾರ್ಯ ಚಾಣಕ್ಯ) ಪ್ರಕಾರ ಈ ಮೂರು ಸಂಗತಿಗಳನ್ನು ಹೊಂದಿರುವ ವ್ಯಕ್ತಿಗಳೇ ಈ ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರಂತೆ, ಅವರು ಭೂಮಿಯ ಮೇಲೆ ಸ್ವರ್ಗ ಸುಖವನ್ನು ಕಾಣುತ್ತಾರಂತೆ. ಅಷ್ಟಕ್ಕೂ ಅದೃಷ್ಟವಂತ ವ್ಯಕ್ತಿಗಳು ಯಾರೆಂಬುದನ್ನು ನೋಡೋಣ ಬನ್ನಿ.
ಈ ವ್ಯಕ್ತಿಗಳು ಭೂಮಿಯ ಮೇಲಿನ ನಿಜವಾದ ಅದೃಷ್ಟವಂತರಂತೆ:
ಸದ್ಗುಣಶೀಲ ಹೊಂದಿರುವ ಆರೈಕೆ: ಆಚಾರ್ಯ ಚಾಣಕ್ಯರ ಪ್ರಕಾರ, ಸದ್ಗುಣಶೀಲರನ್ನು ಹೊಂದಿರುವ ಪೋಷಕರ ಅತ್ಯಂತ ಅದೃಷ್ಟವಂತರು. ಏಕೆಂದರೆ ಇಂತಹ ಮಕ್ಕಳನ್ನು ಹೆತ್ತವರನ್ನು ಖುಷಿಯಾಗಿ ನೋಡಿಕೊಳ್ಳುತ್ತಾರೆ. ಅವರ ಮೇಲೆ ಅಪಾರವಾದ ಗೌರವವನ್ನೂ ಹೊಂದಿರುತ್ತಾರೆ. ಇಂತಹ ನೋವಿನಲ್ಲಿ ಕೊರಗುವುದಿಲ್ಲ, ಅವರು ಭೂಮಿಯ ಮೇಲೆ ಸ್ವರ್ಗದ ಸಂತೋಷವನ್ನು ಅನುಭವಿಸುತ್ತಾರೆ ಎನ್ನುತ್ತಾರೆ ಚಾಣಕ್ಯ.
ಯೋಗ್ಯ ಹೆಂಡತಿಯನ್ನು ಪಡೆದವರು: ಚಾಣಕ್ಯ ಹೇಳುವಂತೆ ಹೆಂಡತಿ ಕೇವಲ ಜೀವನ ಸಂಗಾತಿಯಲ್ಲ, ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿಯ ಅಡಿಪಾಯ. ತನ್ನ ಗಂಡನನ್ನು ಸೇವಿಸುವ, ಬೆಂಬಲಿಸುವ, ಗೌರವದಿಂದ ನಡೆಸಿಕೊಳ್ಳುವ, ಗಂಡನ ಹೆಜ್ಜೆಯಲ್ಲೂ ಜೊತೆಯಾಗಿ ನಿಲ್ಲುವ ಹೆಂಡತಿಯನ್ನು ಪಡೆದ ವ್ಯಕ್ತಿ ಯ ಜೀವನವು ಸಂತೋಷದಿಂದ ತುಂಬಿರುತ್ತಾನೆ.
ಇದನ್ನೂ ಓದಿ: ಈ ಅಮೂಲ್ಯ ಸಂಗತಿಗಳನ್ನು ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವಿಲ್ಲ
ಸಂತೃಪ್ತ ಜೀವನ ನಡೆಸುವವರು: ಯಾವುದಕ್ಕೂ ದುರಾಸೆ ಪಡದೆ, ಇತರರ ಬಗ್ಗೆ ಅಸೂಯೆ ಪಡೆದೆ, ತನ್ನಲ್ಲಿ ಏನಿದೆಯೋ ಖುಷಿ ಕಾಣುತ್ತಾ ಸಂತೃಪ್ತ ಜೀವನ ನಡೆಸುವ ವ್ಯಕ್ತಿ ಯಾವಾಗಲೂ ಸಂತೋಷದಿಂದ ಇರುತ್ತಾರೆ, ಆತ ಜೀವನದ ಬಗ್ಗೆ ಕೇಳಿಸಿಕೊಳ್ಳುವುದಿಲ್ಲ. ಆದ್ದರಿಂದ ಇರುವುದರಲ್ಲಿಯೇ ತೃಪ್ತಿಪಡಬೇಕು ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ