Headlines

ಮದುವೆ ಆಗ್ತೀಯ ಎಂದ ತ್ರಿವಿಕ್ರಮ್: ರಕ್ಷಿತಾ ಹೇಳಿದ್ದೇನು?

ಮದುವೆ ಆಗ್ತೀಯ ಎಂದ ತ್ರಿವಿಕ್ರಮ್: ರಕ್ಷಿತಾ ಹೇಳಿದ್ದೇನು?


ಬಿಗ್ಬಾಸ್ (ಬಿಗ್ ಬಾಸ್) ಮನೆಗೆ ಅತಿಥಿಗಳು ಬಂದಿದ್ದಾರೆ. ಉಗ್ರಂ ಮಂಜು, ಮೋಕ್ಷಿತಾ, ತ್ರಿವಿಕ್ರಮ್, ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಅತಿಥಿಗಳಾಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಬಂದ ಅತಿಥಿಗಳನ್ನು ಮನರಂಜಿಸುವುದು ಮನೆ ಸದಸ್ಯರ ಕೆಲಸ ಆಗಿದೆ. ಮನೆ ಸದಸ್ಯರಿಗೆ ಅವರ ಸೇವೆಯ ಆಧಾರದಲ್ಲಿ ಪಾಯಿಂಟ್‌ಗಳು ಸಿಗುತ್ತಿವೆ. ಮೊದಲ ದಿನ ಅತಿಥಿಗಳಿಗೆ ಮನೆ ಸದಸ್ಯರಿಗೂ ಸಾಕಷ್ಟು ವಿಷಯಗಳಲ್ಲಿ ಮನಸ್ಥಾಪಿಸಲಾಗುತ್ತದೆ. ಆದರೆ ಎರಡನೇ ದಿನ ಎಲ್ಲವೂ ಸರಿ ಹೋಗಿ ಎಲ್ಲವೂ ಸುಗಮವಾಗಿ ನಡೆಯುತ್ತಿದೆ.

ಅತಿಥಿಗಳಿಗೆ ಅವಕಾಶ ಸಿಕ್ಕಾಗೆಲ್ಲ ಮನೆ ಮಂದಿಯನ್ನು ಗೋಳು ಹೊಯ್ದುಕೊಂಡಿದ್ದಾರೆ. ಗೋಳು ಹೊಯ್ದುಕೊಳ್ಳುತ್ತಿದ್ದಾರೆ. ಆದರೆ ನಿನ್ನೆಯ ಎಪಿಸೋಡ್ ನಲ್ಲಿ ಅಷ್ಟೇನೂ ಜಗಳಗಳು ನಡೆಯಲಿಲ್ಲ. ಆದರೆ ಕೆಲವು ವಿಷಯಗಳು ಗಮನ ಸೆಳೆದವು. ನಿನ್ನೆ ಎಪಿಸೋಡ್‌ನಲ್ಲಿ ರಕ್ಷಿತಾ ಶೆಟ್ಟಿ ಅವರು ತಾವು ಮದುವೆ ಆಗುವ ಹುಡುಗನ ಬಗ್ಗೆ ಅತಿಥಿಗಳಾಗಿದ್ದು ಮಾತನಾಡಿದ್ದು ವಿಶೇಷವಾಗಿತ್ತು. ತಾವು ಮದುವೆ ಆಗುವ ಹುಡುಗ ರೈತ ಆಗಿರಬೇಕು ಎಂದು ರಕ್ಷಿತಾ ಹೇಳಿದರು. ಆದರೆ ಅವನು ನನಗೆ ವ್ಲಾಗ್ ಮಾಡಲು ಅವಕಾಶ ಕೊಡಬೇಕು, ವ್ಲಾಗ್ ಮಾಡಲು ಅವಕಾಶ ಕೊಡಲಿಲ್ಲ ಎಂದರೆ ಅವನು ಬಿಟ್ಟು ಹೋಗಬಹುದು’ ಎಂದು ರಕ್ಷಿತಾ ಹೇಳಿದರು.

ನೀವು ವ್ಲಾಗ್ ಮಾಡಿದರೆ ಅವನ ಕೆಲಸಕ್ಕೆ ಡಿಸ್ಟರ್ಬ್ ಆಗೋಲ್ಲವಾ? ಎಂಬ ಪ್ರಶ್ನೆಗೆ ಅವನು ಪಾಡಿಗೆ ಕೆಲಸ ಮಾಡಿಕೊಳ್ಳಲಿ ನಾನು ವ್ಲಾಕಿಂಗ್ ಮಾಡಿಕೊಂಡಿರುತ್ತೇನೆ ನಾನು ಅವನಿಗೆ ಡಿಸ್ಟರ್ಬ್ ಪ್ರಶಸ್ತಿ ನೀಡಿದ್ದೇನೆ ರಕ್ಷಿತಾ. ಅದೆಲ್ಲ ಆದ ಬಳಿಕ ಮನೆ ಮಹಿಳೆಯರು ಫ್ಯಾಷನ್ ಶೋ ಮಾಡಲು ಸಜ್ಜಾಗಿದ್ದರು. ಈ ವೇಳೆ ತ್ರಿವಿಕ್ರಮ್, ‘ರಕ್ಷಿತಾ ನಾನು ನಿನಗೆ ವ್ಲಾಗ್ ಮಾಡಲು ಅವಕಾಶ ಮಾಡಿಕೊಡುತ್ತೇನೆ. ವ್ಲಾಗಿಂಗ್ ಬೇಡ ಅನ್ನೊಲ್ಲ’ ಎಂದರು.

ಇದನ್ನೂ ಓದಿ:ಬಿಗ್ಬಾಸ್ ವೇದಿಕೆ ಮೇಲೆ ಪ್ರಿಯಾ ಸುದೀಪ್: ಸೊಸೆಯ ಬಗ್ಗೆ ಕಿಚ್ಚನ ತಂದೆಯ ಭಾವುಕ ಮಾತು

ಅದು ರಕ್ಷಿತಾಗೆ ಸರಿಯಾಗಿ ಕೇಳಲಿಲ್ಲ. ಆ ಬಳಿಕ ತ್ರಿವಿಕ್ರಮ್, ‘ರಕ್ಷಿತಾ ನನ್ನನ್ನು ಮದುವೆ ಆಗಿ, ನಾನು ನಿಮಗೆ ಅವಕಾಶ ಮಾಡಿಕೊಡುತ್ತೇನೆ’ ಎಂದರು. ಆಗ ರಕ್ಷಿತಾ, ಮುಗ್ದವಾಗಿ, ‘ಹೌದ, ಒಳ್ಳೆಯದು, ನೀವು ನನ್ನ ಮದುವೆಗೆ ಬರಬೇಕು’ ಎಂದು ಹೇಳಿದರು. ರಕ್ಷಿತಾರ ಉತ್ತರ ಕೇಳಿ ಅತಿಥಿಗಳೆಲ್ಲ ಬಿದ್ದು ಬಿದ್ದು ನಕ್ಕರು. ತ್ರಿವಿಕ್ರಮ್ ಸಹ ಜೋರಾಗಿ ನಕ್ಕರು.

ರಕ್ಷಿತಾ, ಬಿಗ್ ಬಾಸ್ ಮನೆಯಲ್ಲಿ ಬಹಳ ಚಿಕ್ಕ ವಯಸ್ಸಿನವರು. ಹೊರಗೆ ಅವರು ತಮ್ಮ ಅಡುಗೆ ವ್ಲಾಗ್ ಇನ್ನಿತರೆ ವ್ಲಾಗ್ಗಳಿಂದ ಜನಪ್ರಿಯರಾಗಿದ್ದಾರೆ. ಅವರು ಕರ್ನಾಟಕ ಮೂಲದವರಾಗಿದ್ದರು ಮುಂಬೈನಲ್ಲಿ ಇಲ್ಲ ಕನ್ನಡ ಸರಿಯಾಗಿ ಬಾರದು. ಆದರೆ ಕಷ್ಟಪಟ್ಟು ಕನ್ನಡ ಮಾತನಾಡುತ್ತಾರೆ. ಇದು ವೀಕ್ಷಕರಿಗೆ ಇಷ್ಟವಾಗಿದೆ. ಜೊತೆಗೆ, ರಕ್ಷಿತಾ ಬಹಳ ಚೆನ್ನಾಗಿ ಬಿಗ್ ಬಾಸ್ ಮನೆಯಲ್ಲಿ ಆಡುತ್ತಿದ್ದಾರೆ. ಸರಿಯನ್ನು ಸರಿಯೆಂದು, ತಪ್ಪನ್ನು ತಪ್ಪೆಂದು ಹೇಳುತ್ತಿದ್ದಾರೆ. ರಕ್ಷಿತಾರ ಈ ಗುಣವೂ ಸಹ ವೀಕ್ಷಿಸಲು ಇಷ್ಟವಾಗಿದೆ. ಜೊತೆಗೆ ಅವರು ಮುಗ್ಧವಾಗಿ ಆಡುವ ಮಾತುಗಳು ಸಹ ಜನರಿಗೆ ಇಷ್ಟವಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *