Headlines

ಮಂಗಳೂರು: ಶಿಲೆಕಲ್ಲು ಗಣಿಗಾರಿಕೆಗೆ ನಲುಗಿದ ತೆಂಕ ಕಜೆಕಾರು ಗ್ರಾಮದ ಜನರು, ಹೈಕೋರ್ಟ್ಗೆ ಮೊರೆ

ಮಂಗಳೂರು: ಶಿಲೆಕಲ್ಲು ಗಣಿಗಾರಿಕೆಗೆ ನಲುಗಿದ ತೆಂಕ ಕಜೆಕಾರು ಗ್ರಾಮದ ಜನರು, ಹೈಕೋರ್ಟ್ಗೆ ಮೊರೆ


ಮಂಗಳೂರು, ನವೆಂಬರ್ 28: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತೆಂಕ ಕಜೆಕಾರು ಗ್ರಾಮದಲ್ಲಿ ಕಳೆದ ಆರು ತಿಂಗಳ ಹಿಂದೆ ಶಿಲೆಕಲ್ಲು ಗಣಿಗಾರಿಕೆ ಆರಂಭಗೊಂಡಿದ್ದು, ವಿದ್ಯಾರ್ಥಿ ಎಂಟಕ್ಕೂ ಹೆಚ್ಚು ಮನೆಗಳು ಸಂಕಷ್ಟಕ್ಕೆ ಸಿಲುಕಿವೆ. ಗಣಿಗಾರಿಕೆ ಏನೋ ಕ್ರಮವಾಗಿದೆ. ಆದರೆ. ಕೆಲವು ನಿಯಮಗಳು ಗಾಳಿಗೆ ತೂರಿದ್ದಾರೆ ಎಂಬ ಆರೋಪವಿದೆ. ಗಣಿಗಾರಿಕೆ ನಡೆಸುವ ಸ್ಥಳದಿಂದ 500 ಮೀಟರ್ ದೂರದಲ್ಲಿ ಜನವಸತಿ ಪ್ರದೇಶ ಇರಬಾರದು. ಗಣಿಗಾರಿಕೆ ನಡೆಯುವ ಸ್ಥಳವನ್ನು ಮುಚ್ಚಬೇಕು. ಗಣಿಗಾರಿಕೆ ನಡೆಯುವ ಸುತ್ತ ಎಲ್ಲೂ ಅಂಗನವಾಡಿ/ಶಾಲೆ ಇರಬಾರದು ಎಂಬಿತ್ಯಾದಿ ನಿಯಮವಿದೆ. ಆದರೆ ಇಲ್ಲಿ ಗಣಿಗಾರಿಕೆ ನಡೆಯುವ ಕೂಗಳತೆ ದೂರದಲ್ಲೇ ಮನೆಗಳು, ಅಂಗನವಾಡಿ ಇದೆ. ಯಾವುದರಲ್ಲಿ ಗುಡ್ಡಕುಸಿತ ಕೂಡ ಆಗುತ್ತಿದೆ ಎಂಬ ಆರೋಪವಿದೆ. ದಿನದ ಕೆಲವು ಬಾರಿ ಸ್ಟೋಟಕವನ್ನು ಬಳಸಿ ಶಿಲೆಕಲ್ಲನ್ನು ಸಿಡಿಸದಿದ್ದರೆ. ಈ ವೇಳೆ ಹೊರ ಬರುವ ಬಾರೀ ಸದ್ದು ನಿವಾಸಿಗಳಿಗೆ ನಡುಕ ಹುಟ್ಟಿಸಿದ್ರೆ, ವಾಸಿಸುವ ಮನೆಗಳಲ್ಲಿ ಬಿರುಕು ಮೂಡುತ್ತಿದೆ. ದೂಳಿನ ಸಮಸ್ಯೆಯಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ರಸ್ತೆಯಲ್ಲಿ ಹೋಗುವಾಗ ಕಲ್ಲು ಬೀಳುವ ಭಯವಿದೆ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಕಾಡುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಗಣಿ ಇಲಾಖೆಗೆ ಸಾಕಷ್ಟು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಸದ್ಯ ಸಂತ್ರಸ್ತರೆಲ್ಲ ಒಟ್ಟು ಸೇರಿ ಕರ್ನಾಟಕ ಮೊರೆ ಹೋಗಿದ್ದಾರೆ. ಈ ಬಗ್ಗೆ ಖುದ್ದು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಹೀಗಾಗಿ ಗಣಿ ಇಲಾಖೆ ಅಧಿಕಾರಿಗಳು,ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿ ಜಂಟಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಲು ಮುಂದಾಗಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *