ಪೃಥ್ವಿರಾಜ್ ಸುಕುಮಾರನ್ (ಪೃಥ್ವಿರಾಜ್ ಸುಕುಮಾರನ್), ಮಲಯಾಳಂನ ಸ್ಟಾರ್ ನಟ ಅವರು ಪ್ಯಾನ್ ಇಂಡಿಯಾ ನಟರೂ ಹೌದು. ಪೃಥ್ವಿರಾಜ್ ಸುಕುಮಾರನ್ ಅವರು ಮಲೆಯಾಳಂ ಮಾತ್ರವೇ ಅಲ್ಲದೆ ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು, ರಾಜಮೌಳಿ ಸೇರಿದಂತೆ ಹಲವು ನಿರ್ದೇಶಕರಿಂದ ಭಾರಿ ಹೊಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ವಿಶ್ವ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿರುವ ‘ವಾರಣಾಸಿ’ ಸಿನಿಮಾದ ವಿಲನ್ ಸಹ ಆಗಿದ್ದಾರೆ ಪೃಥ್ವಿರಾಜ್. ಆದರೆ ಮಲೆಯಾಳಂ ಚಿತ್ರರಂಗದಲ್ಲಿ ಪೃಥ್ವಿರಾಜ್ ವಿರುದ್ಧ ಕೆಲವರು ಕುತಂತ್ರ ಮಾಡುತ್ತಿದ್ದಾರೆ, ಪೃಥ್ವಿರಾಜ್ ವೃತ್ತಿಯನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾದ, ಈ ಕುರಿತು ಪೃಥ್ವಿರಾಜ್ ಅವರ ತಾಯಿಯೇ ಆರೋಪ ಮಾಡಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ ನಟನೆಯ ‘ವಿಲಾಯತ್ ಬುದ್ಧ’ ಹೆಸರಿನ ಸಿನಿಮಾ ಕೆಲವೇ ದಿನಗಳಲ್ಲಿ ಹಿಂದಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ಚಿತ್ರಮಂದಿರಗಳಿಗೆ ಬಿಡುಗಡೆ ಆಗುವ ಮುನ್ನವೇ ಸಿನಿಮಾದ ಮೇಲೆ ಸೈಬರ್ ಅಟ್ಯಾಕ್ ಮಾಡಿದ್ದರೂ, ಪೈರಸಿ ಬಿಡುಗಡೆಯಾಗಿದೆ. ಪರಿಣಾಮಕಾರಿ ಸಿನಿಮಾಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈ ಬಗ್ಗೆ ಮಾತನಾಡಿರುವ ಪೃಥ್ವಿರಾಜ್ ಸುಕುಮಾರನ್ ಅವರ ತಾಯಿ, ಮಲಯಾಳಂ ಚಿತ್ರರಂಗದ ಖ್ಯಾತ ನಟಿಯೂ ಆಗಿದ್ದ ಮಲ್ಲಿಕಾ ಸುಕುಮಾರನ್, ‘ಇದು ನನ್ನ ಮಗನ ವೃತ್ತಿಯನ್ನು ಅಂತ್ಯಗೊಳಿಸಲು ವ್ಯವಸ್ಥಿತ ಕುತಂತ್ರದ ಭಾಗ’.
ಪೃಥ್ವಿರಾಜ್ ಅವರ ಮೇಲೆ ಹಾಗೂ ಅವರ ಸಿನಿಮಾಗಳ ಮೇಲೆ ಸೈಬರ್ ದಾಳಿ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ, ಮಾಧ್ಯಮಗಳಲ್ಲಿ ಮಾತನಾಡಿರುವ ಮಲ್ಲಿಕಾ ಸುಕುಮಾರನ್, ‘ಚಿತ್ರರಂಗದಲ್ಲಿ ನನ್ನ ಮಗನನ್ನು ತುಳಿಯುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ, ಈ ಸೈಬರ್ ದಾಳಿಯೂ ಸಹ ಅದರ ಭಾಗವೇ ಆಗಿದೆ. ಆದರೆ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಬೆಂಬಲವಾಗಿ ಯಾವ ನಟ ಅಥವಾ ಸಿನಿಮಾದ ಸಂಘಗಳು ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:Eko: ಮಲಯಾಳಂ ಸಿನಿಮಾ ಮೂಲಕ ಮತ್ತೊಮ್ಮೆ ಯಶಸ್ಸು ಕಂಡ ರಾಜ್ ಬಿ. ಶೆಟ್ಟಿ
‘ನನ್ನ ಮಗನನ್ನು ಚಿತ್ರರಂಗದಿಂದ ತೆಗೆದು ಹಾಕುವುದು, ಅವನು ನಟ ಎಂಬ ಗುರುತನ್ನು ಅಳಿಸಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅಂಥಹ ಗುಂಪುಗಳೇ ಮಾಡಿರುವ ವ್ಯವಸ್ಥಿತ ದಾಳಿ ಈ ಸೈಬರ್ ದಾಳಿಯಾಗಿದೆ. ಈ ಹಿಂದೆಯೂ ಇಂಥಹ ಕೆಲವು ಉದ್ದೇಶಪೂರ್ವಕ ದಾಳಿಗಳು ನನ್ನ ಮಗನ ಮೇಲೆ, ಅವನ ಸಿನಿಮಾಗಳ ಮೇಲೆ ಆಗಿವೆ. ಆಗಲೂ ಸಹ ಯಾರೂ ಸಹ ಆತನ ಬೆಂಬಲಕ್ಕೆ ಬಂದಿಲ್ಲ’ ಎಂದು ಪೃಥ್ವಿರಾಜ್ ಸುಕುಮಾರನ್ ತಾಯಿ ಹೇಳಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ ಸಂಭಾವ್ಯ ನಟರಾಗಿ ಮಲಯಾಳಂನಲ್ಲಿ ಅನೇಕ ಚಿತ್ರರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪೃಥ್ವಿರಾಜ್ ಯಾವುದೇ ವಿವಾದವನ್ನು ಮೈಮೇಲೆ ಎಳೆದುಕೊಂಡವರಲ್ಲ. ಆದರೆ ಅವರು ನಿರ್ದೇಶಿಸಿದ ‘ಲುಸಿಫರ್ 2’ ಸಿನಿಮಾದ ವಿರುದ್ಧ ಟ್ರೋಲ್ ಮಾಡಲಾಯ್ತು, ಕ್ಷಮೆಗೆ ಒತ್ತಾಯಿಸಿದರು, ದೂರು ಸಹ ನೀಡಲಾಯ್ತು. ಅವರ ನಟನೆಯ ‘ಆಡುಜೀವಿತಂ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಸಿಗಲಿಲ್ಲ. ಬಳಿಕ ಅವರ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿ ಕಾರಿಗೆ ಪ್ರಕರಣ ದಾಖಲಿಸಿದರು. ಈಗ ಸಿನಿಮಾ ವಿರುದ್ಧವೇ ದಾಳಿ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ