Headlines

ಎಲೆಕ್ಟ್ರಿಕ್ ಬಸ್‌ ಕಂಪನಿಗಳಿಗೆ ಬಿಎಂಟಿಸಿಯಿಂದ ಬರೋಬ್ಬರಿ 25 ಕೋಟಿ ರೂ. ದಂಡ!

ಎಲೆಕ್ಟ್ರಿಕ್ ಬಸ್‌ ಕಂಪನಿಗಳಿಗೆ ಬಿಎಂಟಿಸಿಯಿಂದ ಬರೋಬ್ಬರಿ 25 ಕೋಟಿ ರೂ. ದಂಡ!


ಇಲೆಕ್ಟಿಕ್ ಬಸ್‌ ಕಂಪನಿಗಳಿಗೆ ಬಿಎಂಟಿಸಿಯಿಂದ ಬರೋಬ್ಬರಿ 25 ಕೋಟಿ ದಂಡ

ಬೆಂಗಳೂರು, ನವೆಂಬರ್ 28: ಬೆಂಗಳೂರು (ಬೆಂಗಳೂರು) ಹೆಚ್ಚಿನ ದಿನದಿಂದ ದಿನಕ್ಕೆ ಬಿಎಂಟಿಸಿಯ ಎಲಿಕ್ಟಿಕ್ ಬಸ್ಸುಗಳಿಂದ ಆಕ್ಸಿಡೆಂಟ್, ಬ್ರೇಕ್ ಡೌನ್ ಮುಂತಾದ ಸಮಸ್ಯೆಗಳು ಉಂಟಾಗುತ್ತಿವೆ, ಪ್ರಯಾಣಿಕರಿಂದ ಹಲವು ಆರೋಪಗಳು ಕೇಳಿ ಬಂದಿವೆ. ಇದೇ ಕಾರಣಕ್ಕೆ ಬಿಎಂಟಿಸಿ ನಿಗಮ ಇಟಿಕ್ಲಿಕ್ ಕಂಪನಿಗಳಿಗೆ ಬರೋಬ್ಬರಿ 25 ಕೋಟಿ ರೂಪಾಯಿ ದಂಡ ಹಾಕಲು ಮುಂದಾಗಿದೆ.

ನಾಲ್ಕು ಖಾಸಗಿ ಸಂಸ್ಥೆಗಳಿಗೆ ದಂಡ ಹಾಕಿದ BMTC

ಎಲಿಟಿಕ್ ಬಸ್‌ಗಳಿಂದ ಆಕ್ಸಿಡೆಂಟ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬ್ರೇಕ್ ಡೌನ್, ಬ್ಯಾಟರಿ ಡೌನ್ ಸಮಸ್ಯೆಗಳಿಂದ ನಡುರೋಡಲ್ಲಿ ಬಸ್ಸುಗಳು ಕೆಟ್ಟು ನಿಲ್ಲುತ್ತವೆ, ಇದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಒಪ್ಪಂದದಂತೆ ಕಾರ್ಯನಿರ್ವಹಿಸುವ ನಾಲ್ಕು ಖಾಸಗಿ ಸಂಸ್ಥೆಗಳಿಗೆ 25 ಕೋಟಿಗೂ ಹೆಚ್ಚು ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.ಇದೀಗ ಇವಿ ಬಸ್ ಚಾಲಕರಿಗೆ ಬಿಎಂಟಿಸಿಯೇ ತರಬೇತಿ ನೀಡುತ್ತಿದೆ, ವೇತನ ಪಾವತಿಗೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಎನ್‌ಟಿಪಿಸಿ ವಿದ್ಯುತ್‌ ವ್ಯಾಪಾರ ನಿಗಮಕ್ಕೆ 9.80 ಕೋಟಿ ರೂ. ದಂಡ, ಸ್ವಿಚ್‌ ಮೊಬಿಲಿಟಿ ಸಂಸ್ಥೆಗೆ 3 ಕೋಟಿ ರೂ. ದಂಡ ವಿಧಿಸಿದ ಬಿಎಂಟಿಸಿ, ಟಿಎಂಎಲ್‌ ಸ್ಮಾರ್ಟ್‌ ಸಿಟಿ ಮೊಬಿಲಿಟಿ ಸೊಲ್ಯೂಷನ್ಸ್‌ ಲಿಮಿಟೆಡ್‌ಗೆ 11.99 ಕೋಟಿ ರೂ. ಓಎಚ್‌ಎಂ ಗ್ಲೋಬಲ್‌ ಮೊಬಿಲಿಟಿ ಪ್ರೈವೆಟ್ ಲಿಮಿಟೆಡ್‌ಗೆ 67 ಲಕ್ಷ ರೂ. ದಂಡ ಹಾಕಿದೆ ಎಂದು ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ.

ಇವಿ ಬಸ್ ನಲ್ಲಿ ಸಂಚಾರ ಮಾಡಿದರೆ ಭಯ ಆಗುತ್ತದೆ ಎಂದ ಪ್ರಯಾಣಿಕರು

ಈ ಇಲಿಟಿಕ್ ಬಸ್‌ಗಳು ಜಿಸಿಸಿ (ಒಟ್ಟು ವೆಚ್ಚದ ಗುತ್ತಿಗೆ) ಮಾಡೆಲ್ ಅಡಿಯಲ್ಲಿ ಸಂಚಾರ ಮಾಡುತ್ತಿವೆ. 12 ವರ್ಷಗಳ ಅವಧಿಗೆ ಜಿಸಿಸಿಗೆ ಗುತ್ತಿಗೆ ನೀಡಲಾಗುತ್ತಿದ್ದು, ಒಂದು ಕಿ.ಮೀ. ನಾನ್ ಎಸ್‌ಸಿಗೆ 41 ರೂ., ಎಸ್‌ಸಿ ಬಸ್‌ಗೆ 65 ರೂ.ವರೆಗೆ ಬಿಎಂಟಿಸಿ ನಿಗಮ ಇಲೆಕ್ಟಿಕ್ ಬಸ್ ಕಂಪನಿಗೆ ಹಣ ನೀಡುತ್ತಿದೆ, ಬಿಎಂಟಿಸಿ ನಿಗಮದಿಂದ ಕಂಡಕ್ಟರ್ ಮತ್ತು ಎಲಿಕಲ್ ಬಸ್ ಕಂಪನಿಗಳಿಂದ ಡ್ರೈವರ್ ನೇಮಕ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಬೆಂಗಳೂರು ಓದಿ: ಬಿಎಂಟಿಸಿ ಚಾಲಕರ ಹೃದಯ ಹಿಂಡುತ್ತಿದೆಯೇ ಅಧಿಕಾರಿಗಳ ಒತ್ತಡ?

ಈ ಬಗ್ಗೆ ಮಾತನಾಡಿದ ಬಿಎಂಟಿಸಿಯ ಇಟಿಕ್ಸ್ ಬಸ್ ಪ್ರಯಾಣಿಕರೊಬ್ಬರು, ಹೆಣ್ಣೂರಿನಿಂದ ಹೆಬ್ಬಾಳಕ್ಕೆ ಪ್ರಯಾಣಿಸುವ ಬಸ್ಸಿನಲ್ಲಿ ಪ್ರಯಾಣಿಸುವಾಗ ಬೆಂಕಿ ಕಾಣಿಸಿಕೊಂಡಿತ್ತು. ಅದೃಶವಶಾತ್ ಮಳೆ ಬರುತ್ತಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಬಿಎಂಟಿಸಿ ನಿಗಮ ಅಗತ್ಯ ಬಸ್‌ಗಳ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ತುಂಬಾ ವೇಗವಾಗಿ ಮತ್ತು ರ್ಯಾಶ್ ಡ್ರೈವಿಂಗ್ ಮಾಡ್ತಾರೆ. ಯಾವುದೇ ಇಲಿಟಿಕ್ ಬಸ್‌ನಲ್ಲಿ ಸಂಚಾರ ಮಾಡಲು ಭಯವಾಗುತ್ತದೆ. ಯಾವಾಗ ಬ್ಲ್ಯಾಸ್ಟ್ ಆಗತ್ತದೋ ಎನ್ನಿಸುತ್ತದೆ ಎಂದು ಹಳಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *