ನಾಲಿಗೆ ಹರಿಬಿಟ್ಟ SDPI ನಾಯಕನಿಗೆ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ ಖಡಕ್​​ ಕೌಂಟರ್​​

ನಾಲಿಗೆ ಹರಿಬಿಟ್ಟ SDPI ನಾಯಕನಿಗೆ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್​ ಖಡಕ್​​ ಕೌಂಟರ್​​


SDPI ನಾಯಕನಿಗೆ ಯತ್ನಾಳ್ ಖಡಕ್ ಕೌಂಟರ್

ರಾಮನಗರ/ ವಿಜಯಪುರ, ನವೆಂಬರ್ 28: ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ SDPI ನಾಯಕ ಮೌಲಾನಾ ನೂರುದ್ದೀನ್ ನಾಲಿಗೆ ಹರಿಬಿಟ್ಟಿರುವ ವಿಡಿಯೋವೊಂದು ವೈರಲ್ ಆಗಿದೆ. ರಾಮನಗರದ ರೈಲ್ವೇ ಸ್ಪೇಷನ್ ಸರ್ಕಲ್ ಬಳಿ ನಡೆದ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮೌಲಾನಾ ನೂರುದ್ದೀನ್, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧವೂ ವಾಗ್ದಾಳಿ ನಡೆಸಿದರು.

ಮೌಲಾನಾ ನೂರುದ್ದೀನ್ ಹೇಳಿದ್ದೇನು?

ಬಸನಗೌಡ ಪಾಟೀಲ್ ಯತ್ನಾಳ್ ಒಬ್ಬ ಭಯೋತ್ಪಾದಕ ಎಂದಿರುವ ಮೌಲಾನಾ ನೂರುದ್ದೀನ್, ಪ್ರತಾಪ್ ಸಿಂಹ ಬಗ್ಗೆಯೂ ಆಕ್ಷೇಪಾರ್ಹ ಪದ ಬಳಕೆ ಮಾಡಲಾಗಿದೆ. ಜೊತೆಗೆ, ಟಿಪ್ಪು ಸುಲ್ತಾನ್ ಇಲ್ಲದಿದ್ದರೆ ಪ್ರತಾಪ್ ಸಿಂಹ ಬ್ರಿಟಿಷರ ನಾಯಿ ತೊಳೆಯಬೇಕಿತ್ತು.

ಯತ್ನಾಳ್ ಖಡಕ್ ಕೌಂಟರ್

ಮೌಲಾನಾ ನೂರುದ್ದೀನ್ ಹೇಳಿಕೆಗೆ ಇತ್ತ ಶಾಸಕ ಯತ್ನಾಳ್‌ರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ತೀಕ್ಷ್ಣವಾಗಿ ಹೇಳಿಕೆ ನೀಡಿರುವ ಶಾಸಕರು, ಟಿಪ್ಪು ಪರವರು ದೇಶದ್ರೋಹಿಗಳು ಎಂದು ವಾಗ್ದಾಳಿಯಲ್ಲಿ ತಿಳಿಸಿದ್ದಾರೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಹಿಂದೂಗಳ ಕೊಲೆಯಾಗಿದೆ. ಅದೆಲ್ಲ ಇತಿಹಾಸದಲ್ಲಿ ದಾಖಲಾಗಿದೆ, ಸಾಕ್ಷಿಯಾಗಿದೆ. ಕರ್ನಾಟಕ ಹಾಗೂ ಕೇರಳ ಸೇರಿ 3,500 ದೇವಸ್ಥಾನಗಳನ್ನ ಟಿಪ್ಪು ನಾಶ ಮಾಡಿದ್ದಾನೆ. ಲಕ್ಷಾಂತರ ಕೊಡವ ಸಮಾಜದವರ ನೆರಮೇಧ ನಡೆಸಿದ್ದಾನೆ. ಹೀಗಾಗಿ ನಮಗೆ ಟಿಪ್ಪು ಆದರ್ಶವಲ್ಲ, ಆತ ಹಿಂದೂ ಧರ್ಮದ ದ್ರೋಹಿಯಾಗಿದ್ದ. ಇಸ್ಲಾಮೀಕರಣ ಮಾಡಲು ಬಯಸಿದ್ದ, ಆದರೆ ಅದು ಆಗಲಿಲ್ಲ. ಅಂತವನಿಂದ ನಾವು ಆದರ್ಶ ಕಲಿಯಬೇಕಿಲ್ಲ.

ಇದನ್ನೂ ಓದಿ: ಅಧಿಕಾರ ಹಂಚಿಕೆ ಕಿತ್ತಾಟದಲ್ಲಿ ಬಿದ್ದೋಯ್ತು ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ

ಇದೇ ವೇಳೆ ದೆಹಲಿಯಲ್ಲಿ ನಡೆದ ಸ್ಫೋಟದ ವಿಚಾರವನ್ನೂ ಪ್ರಸ್ತಾಪಿಸಿರುವ ಯತ್ನಾಳ್ ಇಲ್ಲಿ ಶಾಂತಿ ಸಭೆ ಮಾಡಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುತ್ತಾರೆ. ಅವರಿಗೆ ಏನಾದರೂ ಆದರೆ ಸಿದ್ದರಾಮಯ್ಯ ಮೊದಲು ಮಾತನಾಡುತ್ತಾರೆ. ಮುಸ್ಲಿಮರ ನಿಷ್ಠೆ ದೇಶಕ್ಕಲ್ಲ, ಬದಲಿಗೆ ಅವರ ಧರ್ಮಕ್ಕೆ ಎಂದು ಅಂಬೇಡ್ಕರ್ ಅಂದೇ ಹೇಳಿದ್ದರು ಎಂದು ಯತ್ನಾಳ ವಾಗ್ದಾಳಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 11:32 am, ಶುಕ್ರ, 28 ನವೆಂಬರ್ 25



Source link

Leave a Reply

Your email address will not be published. Required fields are marked *