Devil: ದರ್ಶನ್‌ ಇದುವರೆಗೆ ಮಾಡಿರದ ಪಾತ್ರ ಮಾಡಿದ್ದಾರೆ: ಡೆವಿಲ್‌ನ ಆ ಸೀಕ್ರೆಟ್ ಬಿಚ್ಚಿಟ್ಟ ಮಿಲನ ಪ್ರಕಾಶ್! | Milana Prakash Reveals The Darshans Devil Film Secret Gvd

Devil: ದರ್ಶನ್‌ ಇದುವರೆಗೆ ಮಾಡಿರದ ಪಾತ್ರ ಮಾಡಿದ್ದಾರೆ: ಡೆವಿಲ್‌ನ ಆ ಸೀಕ್ರೆಟ್ ಬಿಚ್ಚಿಟ್ಟ ಮಿಲನ ಪ್ರಕಾಶ್! | Milana Prakash Reveals The Darshans Devil Film Secret Gvd


16

ವಿಭಿನ್ನ ಪಾತ್ರದಲ್ಲಿ ದರ್ಶನ್‌

Image Credit : Asianet News

ವಿಭಿನ್ನ ಪಾತ್ರದಲ್ಲಿ ದರ್ಶನ್‌

‘ದರ್ಶನ್‌ ಇದುವರೆಗೆ ಮಾಡಿರದ ಪಾತ್ರವನ್ನು ‘ಡೆವಿಲ್‌’ ಸಿನಿಮಾದಲ್ಲಿ ಮಾಡಿದ್ದಾರೆ. ಪ್ರೇಕ್ಷಕರು ಇಲ್ಲಿ ದರ್ಶನ್‌ ಅವರನ್ನು ವಿಭಿನ್ನ ಪಾತ್ರದಲ್ಲಿ ನೋಡಬಹುದು. ದರ್ಶನ್‌ ಅವರಿಗೇ ಇದೊಂದು ವಿಶಿಷ್ಟ ಸಿನಿಮಾ ಆಗಲಿದೆ’. ಹೀಗೆ ಹೇಳಿದ್ದು ಮಿಲನ ಪ್ರಕಾಶ್‌.

26

ಡಿ.11ರಂದು ಡೆವಿಲ್‌ ಬಿಡುಗಡೆ

Image Credit : Asianet News

ಡಿ.11ರಂದು ಡೆವಿಲ್‌ ಬಿಡುಗಡೆ

ಅವರು ನಿರ್ದೇಶಿಸಿರುವ ‘ಡೆವಿಲ್‌’ ಸಿನಿಮಾ ಡಿ.11ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಅದಕ್ಕಾಗಿ ಅಂತಿಮ ಹಂತದ ತಯಾರಿಯಲ್ಲಿದೆ. ಈ ಕುರಿತು ಮಾಹಿತಿ ನೀಡುವ ಪ್ರಕಾಶ್‌, ಇದೊಂದು ಮಾಸ್‌ ಎಂಟರ್‌ಟೇನರ್‌. ಅದ್ದೂರಿ ತಾರಾಗಣವಿದೆ.

36

ಪ್ರಮುಖ ಪಾತ್ರದಲ್ಲಿ ಮಹೇಶ್‌ ಮಂಜ್ರೇಕರ್‌

Image Credit : youtube

ಪ್ರಮುಖ ಪಾತ್ರದಲ್ಲಿ ಮಹೇಶ್‌ ಮಂಜ್ರೇಕರ್‌

ಬಾಲಿವುಡ್‌ ನಟ ಮಹೇಶ್‌ ಮಂಜ್ರೇಕರ್‌ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಶೂಟಿಂಗ್‌ ಇದ್ದಾಗ ದರ್ಶನ್‌ ಅವರು ಬೆನ್ನು ನೋವಿದ್ದರೂ ಸತತ 24 ಗಂಟೆ ಶೂಟಿಂಗ್‌ನಲ್ಲಿ ಪಾಲ್ಗೊಂಡು ತುಂಬಾ ಸಹಕಾರ ನೀಡಿದ್ದಾರೆ. ಅದ್ದೂರಿ ಲೊಕೇಷನ್‌ಗಳಲ್ಲಿ ಶೂಟಿಂಗ್‌ ಮಾಡಿದ್ದೇವೆ.

46

ಮುಂದಿನ ವಾರ ಟ್ರೇಲರ್‌ ಬಿಡುಗಡೆ

Image Credit : Asianet News

ಮುಂದಿನ ವಾರ ಟ್ರೇಲರ್‌ ಬಿಡುಗಡೆ

ಆಕರ್ಷಕ ಸೆಟ್‌ಗಳನ್ನು ಹಾಕಿದ್ದೇವೆ. ದರ್ಶನ್‌ ಅವರು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಭರದಿಂದ ಸಾಗುತ್ತಿದೆ. ಮುಂದಿನ ವಾರ ಚಿತ್ರದ ಟ್ರೇಲರ್‌ ಬಿಡುಗಡೆಯಾಗುವ ಸಾಧ್ಯತೆ ಇದೆ.

56

ದೊಡ್ಡ ಬಜೆಟ್‌ನ ಸಿನಿಮಾ

Image Credit : Asianet News

ದೊಡ್ಡ ಬಜೆಟ್‌ನ ಸಿನಿಮಾ

ಚಿತ್ರತಂಡ ಭರದ ಪ್ರಚಾರಕ್ಕೆ ಸಿದ್ಧವಾಗಿದೆ. ಈ ದೊಡ್ಡ ಬಜೆಟ್‌ನ ಸಿನಿಮಾಗೆ ಚಿತ್ರಮಂದಿರಗಳು ಕಾಯುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ. ವಿಶೇಷವಾಗಿ ದರ್ಶನ್‌ ಅವರು ಪತ್ರಿಕೆಗಳನ್ನು ಗಮನಿಸುತ್ತಿದ್ದು, ಡೆವಿಲ್‌ ಬಿಡುಗಡೆಗೆ ಕಾಯುತ್ತಿದ್ದಾರೆ ಎನ್ನಲಾಗಿದೆ.

66

ನಾಯಕಿಯಾಗಿ ರಚನಾ ರೈ

Image Credit : Asianet News

ನಾಯಕಿಯಾಗಿ ರಚನಾ ರೈ

ಹೊಸ ಗೆಟಪ್‌ನಲ್ಲಿ ಇರುವುದರಿಂದ ಈ ಗೆಟಪ್‌ ಅನ್ನು ಜನ ಹೇಗೆ ಸ್ವೀಕರಿಸುತ್ತಿದ್ದಾರೆ ಎಂಬ ಕುತೂಹಲದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಚನಾ ರೈ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ಹುಲಿ ಕಾರ್ತಿಕ್‌ ಪ್ರಮುಖ ಪಾತ್ರದಲ್ಲಿ ಅಭಿಯಿಸಿದ್ದಾರೆ. ಉಳಿದ ತಾರಾಗಣ ಇನ್ನಷ್ಟೇ ಘೋಷಣೆಯಾಗಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.



Source link

Leave a Reply

Your email address will not be published. Required fields are marked *