ರಾಜ್‌ಕೋಟ್, ನವೆಂಬರ್ 28: ಸಾಮಾನ್ಯವಾಗಿ ತಮ್ಮ ಮನೆಯ ನಾಯಿ ಕಚ್ಚಿದರೆ ಕ್ಷಮೆ ಕೇಳುವುದು ಒಳ್ಳೆಯ ವ್ಯಕ್ತಿಯ ಲಕ್ಷಣ, ಆದರೆ ಇಲ್ಲೊಬ್ಬ ಮಹಿಳೆ ನಾಯಿ ಕಚ್ಚಿಸಿಕೊಂಡವಳಿಗೆ ಪೆಟ್ಟು ಕೊಟ್ಟಿರುವ ವಿಡಿಯೋ ವೈರಲ್ ಆಗಿದೆ. ಈ ರಾಜ್‌ಕೋಟ್‌ನಲ್ಲಿ ಘಟನೆ ನಡೆದಿದೆ. ಇದು ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಘಟನೆ ಇದಾಗಿದೆ. ಮಹಿಳೆಯೊಬ್ಬರು ಮೊದಲು ಬಂದು ಮನೆಯ ಬಾಗಿಲು ತೆರೆಯುತ್ತಾರೆ. ಅದೇ ಸಮಯಕ್ಕೆ ಮತ್ತೊಬ್ಬ ಮಹಿಳೆ ಲಿಫ್ಟ್ ಬಳಿ ಬರುತ್ತಾರೆ ಅದೇ ಸಮಯಕ್ಕೆ ಬಾಲಕನೊಬ್ಬ ನಾಯಿಯ ಜತೆ ಬರುತ್ತಾನೆ. ಆಗ ನಾಯಿ ಮಹಿಳೆ ಮೇಲೆ ದಾಳಿ ಮಾಡುತ್ತೆ, ಆಗ ಮಹಿಳೆ ಬಾಲಕನಿಗೆ ಬೈದಾಗ ಅಲ್ಲಿ ಇದ್ದ ಬಾಲಕನ ತಾಯಿ ನಾಯಿ ಕಚ್ಚಿಸಿಕೊಂಡವಳ ಕಪಾಳಕ್ಕೆ ಬಾರಿಸುವುದನ್ನು ವಿಡಿಯೋದಲ್ಲಿ ನೋಡಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ