4 ವರ್ಷದಿಂದ ನಂಬಿಸಿ, ಗೊತ್ತೇ ಆಗದಂತೆ 35 ಕೋಟಿ ರೂ ಎಗರಿಸಿಯೇ ಬಿಟ್ಟರು ಷೇರುಲೋಕದ ಖದೀಮರು

4 ವರ್ಷದಿಂದ ನಂಬಿಸಿ, ಗೊತ್ತೇ ಆಗದಂತೆ 35 ಕೋಟಿ ರೂ ಎಗರಿಸಿಯೇ ಬಿಟ್ಟರು ಷೇರುಲೋಕದ ಖದೀಮರು


4 ವರ್ಷದಿಂದ ನಂಬಿಸಿ, ಗೊತ್ತೇ ಆಗದಂತೆ 35 ಕೋಟಿ ರೂ ಎಗರಿಸಿಯೇ ಬಿಟ್ಟರು ಷೇರುಲೋಕದ ಖದೀಮರು

ಮುಂಬೈ, ನವೆಂಬರ್ 28: ಹಣ ಇದ್ದವರನ್ನು ಯಾಮಾರಿಸಲು ಧೂರ್ತರು ಹೊಂಚು ಹಾಕುತ್ತಲೇ ಇರುತ್ತಾರೆ. ಷೇರು ಮಾರುಕಟ್ಟೆಯಷೇರು ಮಾರುಕಟ್ಟೆ) ಗಂಧಗಾಳಿಯೇ ಇಲ್ಲದ ವ್ಯಕ್ತಿಯೊಬ್ಬರನ್ನು ಬ್ರೋಕರೇಜ್ ಕಂಪನಿಯ ಉದ್ಯೋಗಿಗಳು ಯಾಮಾರಿಸಿ 35 ಕೋಟಿ ರೂಪಾಯಿ ಪಂಗನಾಮ ಹಾಕಿದ ಸುದ್ದಿ ಬೆಳಕಿಗೆ ಬಂದಿದೆ. ವಂಚನೆಗೊಳಗಾದ ವ್ಯಕ್ತಿ ಮುಂಬೈನ 72 ವರ್ಷದ ಭರತ್ ಹರಕ್ ಚಂದ್ ಶಾ. ಇವರು ಹಾಗೂ ಪತ್ನಿ ಮುಂಬೈನ ಪ್ಯಾರೆಲ್‌ನಲ್ಲಿ ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ಬಾಡಿಗೆಗೆ ಗೆಸ್ಟ್ ಹೌಸ್ ಸೇವೆ ಒದಗಿಸುತ್ತಾರೆ.

ಭರತ್ ಷಾ ಅವರಿಗೆ 1984 ರಲ್ಲಿ ಪ್ರಕಟಿಸಿದ ಅವರ ತಂದೆ ಕಡೆಯಿಂದ ಹಲವು ಕೋಟಿ ರೂ ಮೌಲ್ಯದ ಷೇರುಗಳನ್ನು ಪಡೆದಿದ್ದಾರೆ. ಆದರೆ, ಷೇರು ಮಾರುಕಟ್ಟೆಯ ಗಂಧಗಾಳಿ ಇಲ್ಲದ ಕಾರಣ ಇವರು ಯಾವಾಗಲೂ ಟ್ರೇಡಿಂಗ್ ಮಾಡಿದವರಲ್ಲ. ಷೇರುಗಳನ್ನು ಮಾರಿದವರಲ್ಲ, ಖರೀದಿಸಿದವರಲ್ಲ. ಇಷ್ಟೇ ಆಗಿದ್ದರೆ ಷೇರುಗಳು ಇವರ ಪೋರ್ಟ್ ಫೋಲಿಯೋದಲ್ಲಿ ಹಾಗೆಯೇ ಉಳಿದುಹೋಗುತ್ತದೆ. ಆದರೆ, 2020ರಲ್ಲಿ ಗ್ಲೋಬ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್ ಎನ್ನುವ ಬ್ರೋಕರ್ ಸಂಸ್ಥೆಯಲ್ಲಿ ಡೀಮ್ಯಾಟ್ ಅಕೌಂಟ್ ತೆರೆದ ನಂತರ ಇವರಿಗೆ ವಂಚನೆ ಶುರುವಾಯಿತು.

ಇದನ್ನೂ ಓದಿ: ತೃತೀಯ ದೇಶಗಳಿಂದ ವಲಸೆ ಬಂದ್ ಆಗಲಿದೆ: ಟ್ರಂಪ್ ಬೆದರಿಕೆ; ಯಾವುದಿದು ಥರ್ಡ್ ವರ್ಲ್ಡ್?

ಸ್ನೇಹಿತರೊಬ್ಬರ ಸಲಹೆ ಗ್ಲೋಬ್ ಕ್ಯಾಪಿಟಲ್ ಮಾರುಕಟ್ಟೆ ಸಂಸ್ಥೆಯಲ್ಲಿ ಭರತ್ ಹರಕ್ ಚಂದ್ ಷಾ ಹಾಗೂ ಅವರ ಪತ್ನಿ ಡಿಮ್ಯಾಟ್ ಅಕೌಂಟ್‌ಗಳನ್ನು ತೆರೆಯುತ್ತಾರೆ. ತಮ್ಮ ಅಪ್ಪನಿಂದ ಬಂದ ಷೇರುಗಳನ್ನು ಈ ಹೊಸ ಡೀಮ್ಯಾಟ್ ಖಾತೆಗಳಿಗೆ ವರ್ಗಾವಣೆ ಮಾಡುತ್ತಾರೆ. ಇಲ್ಲಿಂದ ಬ್ರೋಕರೇಜ್ ಕಂಪನಿಯ ಪ್ರತಿನಿಧಿಗಳು ಆಟ ಆರಂಭಿಸುತ್ತಾರೆ. ಟ್ರೇಡಿಂಗ್ ಖೆಡ್ಡಾಗೆ ಬೀಳುತ್ತಾರೆ.

ಟ್ರೇಡಿಂಗ್ ಮಾಡಲು ಹೊಸ ಹೂಡಿಕೆ ಬೇಕಾಗಿಲ್ಲ. ಇರುವ ಷೇರುಗಳನ್ನೇ ಅಡಮಾನವಾಗಿ ಇಟ್ಟು ಟ್ರೆಡ್ ಮಾಡಬಹುದು ಎಂದು ಹೇಳಿ ನಂಬಿಸಿ 72 ವರ್ಷದ ಷಾ ಅವರಿಗೆ ಎರಡು ಪರ್ಸನಲ್ ಗೈಡ್‌ಗಳನ್ನು ಕಂಪನಿಯು ನೀಡುತ್ತದೆ. ಅಕ್ಷಯ್ ಬಾರಿಯಾ ಮತ್ತು ಕರಣ್ ಸಿರೋಯಾ ಎಂಬ ಈ ಇಬ್ಬರು ಉದ್ಯೋಗಿಗಳು ಷಾ ಅವರ ಪೋರ್ಟ್ ಫೋಲಿಯೋ ಕಾರ್ಯ ನಿಯೋಜಿತಗೊಂಡಿದ್ದಾರೆ.

ಈ ಇಬ್ಬರು ಯುವಕರು ನಿತ್ಯವೂ ಷಾ ದಂಪತಿಗೆ ಕರೆ ಮಾಡಿ ಯಾವ ಆರ್ಡರ್‌ಗಳನ್ನು ಪ್ಲೇಸ್ ಮಾಡಿ ಎಂಬಿತ್ಯಾದಿ ಸೂಚನೆಗಳನ್ನು ನೀಡುತ್ತಿರುತ್ತಾರೆ. ಮನೆಗೆ ಭೇಟಿ ಕೊಡುತ್ತಾರೆ. ನಿಧಾನವಾಗಿ ಷಾ ಅವರ ನಂಬಿಕೆಯನ್ನು ಗಳಿಸುತ್ತಾ ಹೋಗುತ್ತಾರೆ. ಆ ಹುಡುಗರು ಕೇಳಿದಾಗೆಲ್ಲಾ ಒಟಿಪಿ, ಎಸ್ಸೆಮ್ಮೆಸ್, ಇಮೇಲ್ ಇತ್ಯಾದಿಗಳಿಗೆ ಪ್ರತಿಕ್ರಿಯಿಸುತ್ತಾ ಮಾಹಿತಿ ಕೊಡುತ್ತಾ ಹೋಗುತ್ತಾರೆ. ಭರತ್ ಹರಕ್‌ಚಂದ್ ಷಾ ಹಾಗೂ ಅವರ ಪತ್ನಿಯ ಅಕೌಂಟ್‌ಗಳ ಪೂರ್ಣ ನಿಯಂತ್ರಣವನ್ನು ಆ ಇಬ್ಬರು ಯುವಕರು ಹೊಂದಿರುತ್ತಾರೆ.

ಇದನ್ನೂ ಓದಿ: ಐಟಿಆರ್ ಸಲ್ಲಿಸಿ ತಿಂಗಳಾದರೂ ರೀಫಂಡ್ ಬಂದಿಲ್ಲವಾ? ಇಲ್ಲಿ ಪರಿಶೀಲಿಸಲಾಗಿದೆ…

ಟ್ರೇಡಿಂಗ್‌ನಿಂದ ಉತ್ತಮ ಲಾಭ ಬರುತ್ತಿದೆ ಎಂದು ಕಾಣುವಂಥ ಸ್ಟೇಟ್‌ಮೆಂಟ್‌ಗಳನ್ನು ಕಾಲಕಾಲಕ್ಕೆ ನೀಡುತ್ತಿದ್ದಾರೆ. ಇದರಿಂದ ಭರತ್ ಷಾ ಅವರಿಗೆ ಯಾವುದೇ ಅನುಮಾನ ಬರುವುದಿಲ್ಲ. 4 ವರ್ಷಗಳ ಕಾಲ ಇದು ಮುಂದುವರಿದಿತ್ತು. ಆದರೆ, 2024ರ ಜುಲೈನಲ್ಲಿ ಷಾ ಅವರಿಗೆ ಶಾಕ್ ಸಿಗುತ್ತದೆ. ಗ್ಲೋಬ್ ಕ್ಯಾಪಿಟಲ್ ನ ರಿಸ್ಕ್ ಮ್ಯಾನೇಜ್ಮೆಂಟ್ ವಿಭಾಗದಿಂದ ಷಾ ಅವರಿಗೆ ಕರೆ ಬಂದು 35 ಕೋಟಿ ರೂ.

ಶಾಕ್ ಆದ ಷಾ ಅವರು ಕಂಪನಿಗೆ ಖುದ್ದಾಗಿ ಭೇಟಿ ನೀಡಿ ವಿಚಾರಿಸಿದಾಗ, ಅವರ ಪತ್ನಿಯ ಅಕೌಂಟ್‌ನಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಟ್ರೇಡಿಂಗ್ ನಡೆದಿದೆ. ಇದರಿಂದ ಭಾರೀ ನಷ್ಟ ಉಂಟಾಗಿದೆ. ಇದನ್ನು ಭರಿಸಲು ಷಾ ಅವರು ತಮ್ಮ ಉಳಿದ ಕೆಲ ಷೇರುಗಳನ್ನು ಮಾರುತ್ತಾರೆ. ಬಾಕಿ ಇರುವ ಷೇರುಗಳನ್ನು ಅವರು ಬೇರೆ ಬ್ರೋಕರೇಜ್ ಕಂಪನಿಗೆ ಟ್ರಾನ್ಸ್‌ಫರ್ ಮಾಡುತ್ತಾರೆ.

ಇದನ್ನೂ ಓದಿ: ಇದೇ ಮೊದಲ ಬಾರಿಗೆ 86,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಷೇರು ಮಾರುಕಟ್ಟೆಯ ಪಾಸಿಟಿವ್ ಓಟಕ್ಕೆ ಕಾರಣಗಳು

ಗ್ಲೋಬ್ ಕ್ಯಾಪಿಟಲ್ ಕಂಪನಿ ಮೇಲೆ ಕೇಸ್ ಹಾಕಿದ ವೃದ್ಧ

ಗ್ಲೋಬ್ ವೆಬ್ ಸೈಟ್ ನಿಂದ ತಮ್ಮ ಅಕೌಂಟ್ ಗಳ ಟ್ರೇಡಿಂಗ್ ಸ್ಟೇಟ್ ಮೆಂಟ್ ಅನ್ನು ಡೌನ್ ಲೋಡ್ ಮಾಡಿ ನೋಡಿದಾಗ ತಮಗೆ ಹಿಂದೆ ನೀಡಲಾಗಿದ್ದ ಸ್ಟೇಟ್ ಮೆಂಟ್ ಗಳೆಲ್ಲಾ ಬೋಗಸ್ ಎಂಬುದು ಭರತ್ ಷಾ ಅವರಿಗೆ ಮನವರಿಕೆಯಾಗುತ್ತದೆ. ಮುಂಬೈನ ವಾನರಾಯ್ ಪೊಲೀಸ್ ಠಾಣೆಯಲ್ಲಿ ಅವರು ಎಫ್ ಐಆರ್ ದಾಖಲಿಸಿದ್ದಾರೆ. ಮುಂಬೈನ ಆರ್ಥಿಕ ಅಪರಾಧಗಳ ವಿಭಾಗವು ಈಗ ತನಿಖೆ ನಡೆಸುತ್ತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *