ಇನ್‌ಸ್ಟಾಗ್ರಾಮ್‌ನಲ್ಲಿ ಖಾಸಗಿ ವಿಡಿಯೋ ಹಾಕಿ ಸ್ನೇಹಿತನ ಮೇಲೆ ದೂರಿದ ಜೋಡಿ

ಇನ್‌ಸ್ಟಾಗ್ರಾಮ್‌ನಲ್ಲಿ ಖಾಸಗಿ ವಿಡಿಯೋ ಹಾಕಿ ಸ್ನೇಹಿತನ ಮೇಲೆ ದೂರಿದ ಜೋಡಿ


ಸೋಶಿಯಲ್ ಮೀಡಿಯಾದ ಸೋಗಿನಲ್ಲಿ, ಜೋಡಿಗಳಿಬ್ಬರ ದೈಹಿಕ ಸಂಪರ್ಕದ ವಿಡಿಯೋ ಇನ್ಸ್ಟಾಮ್ (Instagram) ನಲ್ಲಿ ಸೋರಿಕೆಯಾಗಿದೆ. ಇದೀಗ ಈ ಜೋಡಿಗಳು ಪೇಚಿಗೆ ಸಿಲುಕಿವೆ. ಸೋಫಿಕ್ ಎಸ್ಕೆ ಮತ್ತು ಡಸ್ತು ಸೋನಾಲಿ ಎಂಬ ಇನ್ಸ್ಟಾಗ್ರಾಮ್ ಕ್ರಿಯೆಟರ್ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಈ ವೀಡಿಯೊವನ್ನು ಅವರು ಹಂಚಿಕೊಂಡಿದ್ದಾರೆ, ಸ್ನೇಹಿತನ ಮೇಲೆ ದೂರಿದ್ದಾರೆ ಎಂದು ಹೇಳಲಾಗಿದೆ. ಇನ್ಸ್ಟಾಗ್ರಾಮ್ ಕಾಂಟೆಂಟ್ ಕ್ರಿಯೆಟರ್ಗಳಾಗಿರುವ ಬಂಗಾಳಿಯ ಸೋಫಿಕ್ ಎಸ್ಕೆ ಮತ್ತು ದುಸ್ತು ಸೋನಾಲಿ ಸುಮಾರು ಫಾಲೋವರ್ಸ್ ಇದರಲ್ಲಿ ಸೋಫಿಕ್ ಎಸ್‌ಕೆ 5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ದುಸ್ತು ಸೋನಾಲಿ ಜತೆ ಸೇರಿ ಹಲವು ವೈರಲ್ ಕಾಂಟೆಂಟ್‌ಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದ ಬೇರೆ ಬೇರೆ ವೇದಿಕೆಯಲ್ಲೂ ಇವರು ಟ್ರೆಂಡ್ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ದುಸ್ತು ಸೋನಾಲಿ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ 312,000 ಅನುಯಾಯಿಗಳನ್ನು ಹೊಂದಿದ್ದು, ಇಲ್ಲಿಯವರೆಗೆ ಇನ್‌ಸ್ಟಾದಲ್ಲಿ 130 ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ದುಸ್ತು ಸೋನಾಲಿ ಹಂಚಿಕೊಳ್ಳುವ ಎಲ್ಲ ವಿಡಿಯೋದಲ್ಲೂ ಸೋಫಿಕ್ ಎಸ್‌ಕೆ ಕಾಣಿಸಿಕೊಳ್ಳುತ್ತಾರೆ. ಇನ್ನು ಸೋಫಿಕ್ ಎಸ್‌ಕೆ ಮತ್ತು ದುಸ್ತು ಸೋನಾಲಿ ಅವರ ಖಾಸಗಿ ವಿಡಿಯೋ ಉದ್ದೇಶಪೂರಕವಾಗಿ ಅವರೇ ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದೀಗ ಈ ವಿಡಿಯೋ ಎಲ್ಲ ಕಡೆ ವೈರಲ್ ಆದ್ಮೇಲೆ, ತಮ್ಮ ಸ್ನೇಹಿತನ ಮೇಲೆ ದೂರಿದ್ದಾರೆ.

ಸೋಫಿಕ್ ಎಸ್‌ಕೆ ಮತ್ತು ದುಸ್ತು ಸೋನಾಲಿ ತಮ್ಮ ಖಾಸಗಿ ವಿಡಿಯೋವನ್ನು ವೈರಲ್ ಸ್ನೇಹಿತನ ಮೇಲೆ ಸೈಬರ್ ಅಪರಾಧ ಘಟಕ ಮತ್ತು ಇತರ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಹೇಳಿದ್ದಾರೆ. ಆತನ ಸಹೋದರಿ ಮತ್ತು ಆಕೆಯ ಪತಿ ಸೇರಿದಂತೆ ಆತನ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಆ ವೀಡಿಯೊ ತನ್ನ ಜೀವನವನ್ನು ಹಾಳುಮಾಡಿದೆ. ಹೊರಗೆ ಮುಖ ತೋರಿಸುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ರಸ್ತೆ ಗುಂಡಿಯಿಂದ ಕೈ-ಕಾಲು ಮುರಿದುಕೊಂಡ ಬೈಕ್ ಸವಾರ, 6 ಲಕ್ಷ ರೂ. ಆಸ್ಪತ್ರೆ ಬಿಲ್

ಸೋಶಿಯಲ್ ಮೀಡಿಯಾದಲ್ಲಿ ಸೋಫಿಕ್ ಎಸ್‌ಕೆ ಹೀಗೆ ಹೇಳಿದ್ದಾರೆ. “ಈ ನನ್ನ ಬಳಿಯೂ ಇರಲಿಲ್ಲ. ನನ್ನ ಗೆಳತಿ ದುಸ್ತು ಸೋನಾಲಿ ಬಳಿ ಇತ್ತು. ನಮ್ಮ ಫೋನ್‌ನ ಪಾಸ್‌ವರ್ಡ್‌ಗಳನ್ನು ತಿಳಿದ ಸ್ನೇಹಿತ ಇದನ್ನು ವೀಡಿಯೊ ಮಾಡಿದ್ದಾರೆ. ಅವರು ನಂಬಿಕೆ ದ್ರೋಹ ಮಾಡಿದ್ದಾರೆ. ಫೋನ್‌ನಿಂದ ವೀಡಿಯೊ ತೆಗೆದು ನಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ನಮ್ಮ ಕೋಪಕ್ಕೆ ಅವರು ಹೀಗೆ ಮಾಡಿದ್ದಾರೆ” ಎಂದು ಹೇಳಿದರು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 2:54 pm, ಶುಕ್ರ, 28 ನವೆಂಬರ್ 25



Source link

Leave a Reply

Your email address will not be published. Required fields are marked *