Headlines

ಮೊದಲ ಬಾರಿಗೆ ಏಷ್ಯಾದ ಪ್ರಮುಖ ಶಕ್ತಿ ಎನಿಸಿದ ಭಾರತ; ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ 3ನೇ ಸ್ಥಾನ

ಮೊದಲ ಬಾರಿಗೆ ಏಷ್ಯಾದ ಪ್ರಮುಖ ಶಕ್ತಿ ಎನಿಸಿದ ಭಾರತ; ಏಷ್ಯಾ ಪವರ್ ಇಂಡೆಕ್ಸ್​ನಲ್ಲಿ 3ನೇ ಸ್ಥಾನ


ಜನವರಿ, ನವೆಂಬರ್ 28: ಈ ವರ್ಷ ಭಾರತವು ಏಷ್ಯಾದ ಪ್ರಮುಖ ಶಕ್ತಿ ಗುಂಪಿಗೆ ಸೇರ್ಪಡೆಯಾಗಿದೆ. ಲೋವಿ ಇನ್ಸ್ ಟಿಟ್ಯೂಟ್ ಪ್ರತೀ ವರ್ಷ ಬಿಡುಗಡೆ ಮಾಡುವ ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತ ಮೊದಲ ಬಾರಿಗೆ 40 ಅಂಕಗಳ ಗಡಿ ದಾಟಿ ಮೇಜರ್ ಪವರ್ ಎನಿಸಿದೆ. ಈ ವರ್ಷದ ಇಂಡೆಕ್ಸ್‌ನಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಆದರೆ, ಎರಡನೇ ಸ್ಥಾನದಲ್ಲಿರುವ ಚೀನಾ ಮತ್ತು ಅಮೆರಿಕದ ನಡುವಿನ ಅಂತರ ನಿರಂತರವಾಗಿ ಕಡಿಮೆ ಆಗುತ್ತಿದೆ. ಅಮೆರಿಕ ಮತ್ತು ಚೀನಾಕ್ಕೆ ಭಾರತ ತೀರಾ ಕೆಳಗೆ ಇದೆ. ಆದರೂ ಕ್ರಮೇಣವಾಗಿ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದ್ದರು, ಮೊದಲ ಬಾರಿಗೆ ಪ್ರಮುಖ ಶಕ್ತಿ ಎನಿಸಿಕೊಳ್ಳುವ ಮಟ್ಟ ಮುಟ್ಟಿದೆ.

ಲೋವಿ ಇನ್ಸ್ ಟಿಟ್ಯೂಟ್ ಸಂಸ್ಥೆಯು ಆಸ್ಟ್ರೇಲಿಯಾವನ್ನೂ ಸೇರಿಕೊಂಡಂತೆ ಏಷ್ಯಾ-ಪೆಸಿಫಿಕ್ ಭಾಗದ 27 ದೇಶಗಳ ಶಕ್ತಿಯನ್ನು ಅವಲೋಕಿಸಿ ಪ್ರತೀ ವರ್ಷ ಏಷ್ಯಾ ಪವರ್ ಇಂಡೆಕ್ಸ್ ರಚಿಸುತ್ತದೆ. ಮಿಲಿಟರಿ ಸಾಮರ್ಥ್ಯ, ಡಿಫೆನ್ಸ್ ನೆಟ್‌ವರ್ಕ್, ಆರ್ಥಿಕ ಸಾಮರ್ಥ್ಯ, ಸಂಬಂಧಗಳು, ರಾಜತಾಂತ್ರಿಕ ಪ್ರಭಾವ, ಪ್ರಭಾವ, ಪುಟಿತ ಮತ್ತು ಭವಿಷ್ಯದ ಸಂಪನ್ಮೂಲ ಹೀಗೆ 131 ಅಂಶಗಳ ಆಧಾರದ ಮೇಲೆ ಒಂದು ದೇಶದ ಶಕ್ತಿ ಮತ್ತು ಅಳೆಯುವುದಿಲ್ಲ.

ಇದನ್ನೂ ಓದಿ: ತೃತೀಯ ದೇಶಗಳಿಂದ ವಲಸೆ ಬಂದ್ ಆಗಲಿದೆ: ಟ್ರಂಪ್ ಬೆದರಿಕೆ; ಯಾವುದಿದು ಥರ್ಡ್ ವರ್ಲ್ಡ್?

ಅಮೆರಿಕ, ಚೀನಾ ಸೂಪರ್ ಪವರ್ಸ್; ಭಾರತ ಏಕೈಕ ಮೇಜರ್ ಪವರ್

100 ಅಂಕಗಳಲ್ಲಿ ಅಮೆರಿಕ 81.7 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಚೀನಾ 73.7 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. 2024ರಲ್ಲಿ 1 ಅಂಕ ಹೆಚ್ಚು ಇದೆ. ಭಾರತ ಕಳೆದ ವರ್ಷಕ್ಕಿಂತ 0.9 ಹೆಚ್ಚು ಗಳಿಸಿ 40 ಅಂಕದ ಮಟ್ಟ ಮುಟ್ಟಿದೆ. ಮೂರನೇ ಸ್ಥಾನದಲ್ಲಿರುವುದರ ಜೊತೆಗೆ ಏಷ್ಯಾದ ಪ್ರಮುಖ ಶಕ್ತಿ ಎಂಬ ಹಂತಕ್ಕೆ ಹೋಗಿದೆ.

ಲೋವಿ ಇನ್ಸ್ ಟಿಟ್ಯೂಟ್ ಪ್ರಕಾರ ಈ ಇಂಡೆಕ್ಸ್‌ನಲ್ಲಿ 40-70 ಅಂಕ ಹೊಂದಿರುವ ದೇಶಗಳು ಮೇಜರ್ ಪವರ್ ಅಥವಾ ಪ್ರಮುಖ ಶಕ್ತಿಗಳೆನಿಸುತ್ತವೆ. 70ಕ್ಕಿಂತ ಹೆಚ್ಚು ಅಂಕ ಇದ್ದರೆ ಸೂಪರ್ ಪವರ್ ಎನಿಸಿಕೊಳ್ಳುತ್ತವೆ. 10ಕ್ಕಿಂತ ಹೆಚ್ಚು ಅಂಕ ಇದ್ದರೆ ಮಿಡಲ್ ಪವರ್; 10ಕ್ಕಿಂತ ಕಡಿಮೆ ಇದ್ದರೆ ಮೈನರ್ ಪವರ್ ದೇಶಗಳೆಂದು ಸೇವಿಸಲಾಗಿದೆ.

2024ರವರೆಗೂ ಭಾರತವು ಏಷ್ಯಾದಲ್ಲಿ ಮಧ್ಯಮ ಶಕ್ತಿ ಎನಿಸಿತ್ತು. ಈಗ ಅದು ಪ್ರಮುಖ ಶಕ್ತಿಯಾಗಿ ಬೆಳೆದಿದೆ. ಗಮನಿಸಬೇಕಾದ ಸಂಗತಿ ಎಂದರೆ, ಈ ಪಟ್ಟಿಯಲ್ಲಿರುವುದು ಏಷ್ಯಾ ಪ್ರದೇಶದ ಮೇಲೆ ವಿವಿಧ ರೀತಿಯಲ್ಲಿ ಪ್ರಭಾವ ಬೀರುವ ಶಕ್ತಿ ಯಾವ ದೇಶಗಳಲ್ಲಿದೆ. ಅಮೆರಿಕವು ಪಾಶ್ಚಿಮಾತ್ಯ ದೇಶವಾದರೂ ಏಷ್ಯಾದಲ್ಲಿ ದಟ್ಟವಾದ ಪ್ರಭಾವ ಹೊಂದಿದೆ. ಅದು ಹೇಳುವ ಮಾತುಗಳನ್ನು ಕೇಳುವ ದೇಶಗಳು ಹಲವಿವೆ.

ಇದನ್ನೂ ಓದಿ: ಪರಮಾಣು ಶಕ್ತಿ ಉತ್ಪಾದನೆಗೆ ಖಾಸಗಿಯವರಿಗೂ ಅವಕಾಶ ನೀಡಲಿದೆ ಸರ್ಕಾರ; ಮುಂಬರುವ ಅಧಿವೇಶನದಲ್ಲಿ ಮಸೂದೆ

ಲೋವಿ ಇನ್ಸ್ ಟಿಟ್ಯೂಟ್ನ ಈ ಪವರ್ ಇಂಡೆಕ್ಸ್ ಭಾರತದ ಬಗ್ಗೆ ಮತ್ತೊಂದು ಕುತೂಹಲಕಾರಿ ಸಂಗತಿ. ಭಾರತವು ಆರ್ಥಿಕ ಮತ್ತು ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡರೂ, ಅದಕ್ಕಿರುವ ಸಂಪನ್ಮೂಲ ಮತ್ತು ಶಕ್ತಿಗೆ ಪ್ರಾದೇಶಿಕವಾಗಿ ಹೆಚ್ಚು ಪ್ರಭಾವಶಾಲಿ ಎನಿಸಿಲ್ಲ. ಅದರ ಡಿಫೆನ್ಸ್ ನೆಟ್ವರ್ಕ್ ದುರ್ಬಲವಾಗಿದೆ. ಆದರೆ, ಆರ್ಥಿಕ ಸಂಬಂಧ, ಆರ್ಥಿಕ ಸಾಮರ್ಥ್ಯ, ಮಿಲಿಟರಿ ಸಾಮರ್ಥ್ಯ ಮತ್ತು ಸಾಂಸ್ಕೃತಿಕ ಪ್ರಭಾವ ಗಣನೀಯವಾಗಿದೆ ಎಂದು ಈ ವರದಿ ಹೇಳುತ್ತಿದೆ.

ಲೋವಿ ಇನ್‌ಸ್ಟಿಟ್ಯೂಟ್‌ನಿಂದ ಏಷ್ಯಾ ಪವರ್ ಇಂಡೆಕ್ಸ್ 2025 ರಲ್ಲಿ ಭಾರತವು ಪ್ರಮುಖ ಶಕ್ತಿಯ ಮಟ್ಟಕ್ಕೆ ಏರಿದೆ

ಏಷ್ಯಾ ಪವರ್ ಇಂಡೆಕ್ಸ್

ಲೋವಿ ಇನ್ಸ್ ಟಿಟ್ಯೂಟ್ನ 2025 ರ ಏಷ್ಯಾ ಪವರ್ ಇಂಡೆಕ್ಸ್

  1. ಅಮೆರಿಕ: 80.5 ಅಂಕ
  2. ಚೀನಾ: 73.7
  3. ಭಾರತ: 40.0
  4. ಜಪಾನ್: 38.8
  5. ರಷ್ಯಾ: 32.1
  6. ಆಸ್ಟ್ರೇಲಿಯಾ: 31.8
  7. ಸೌತ್ ಕೊರಿಯಾ: 31.5
  8. ಸಿಂಗಾಪುರ: 26.8
  9. ಇಂಡೋನೇಷ್ಯಾ: 22.5
  10. ಮಲೇಷ್ಯಾ: 20.6
  11. ಥಾಯ್ಲೆಂಡ್: 20.1
  12. ವಿಯೆಟ್ನಾಂ: 19.9
  13. ನ್ಯೂಜಿಲೆಂಡ್: 16.8
  14. ತೈವಾನ್: 15.7
  15. ಫಿಲಿಪ್ಪೈನ್ಸ್: 15.2
  16. ಪಾಕಿಸ್ತಾನ: 14.5
  17. ನಾರ್ಥ್ ಕೊರಿಯಾ: 12.8
  18. ಬ್ರೂನೇ: 10.6
  19. ಕಾಂಬೋಡಿಯಾ: 9.5
  20. ಬಾಂಗ್ಲಾದೇಶ: 9.0
  21. ಶ್ರೀಲಂಕಾ: 7.8
  22. ಲಾವೋಸ್: 7.2
  23. ಮಾಯನ್ಮಾರ್: 7.1
  24. ಮಂಗೋಲಿಯಾ: 6.0
  25. ನೇಪಾಳ: 5.0
  26. ತೈಮೂರ್ ಲೆಸ್ಟೆ: 4.8
  27. ಪಪುವಾ ನ್ಯೂಗಿನಿಯಾ: 4.6

ಇದನ್ನೂ ಓದಿ: ವಿರಳ ಭೂ ಖನಿಜ ಹಿಡಿದು ಅಮೆರಿಕವನ್ನೂ ಬಗ್ಗಿಸುತ್ತಿರುವ ಚೀನಾ; 7,280 ಕೋಟಿ ರೂನ ಭಾರತದ ಪ್ಲಾನ್ ಹಿಂದಿದೆ ದೂರದೃಷ್ಟಿ

ಇಲ್ಲಿರುವ ಪಟ್ಟಿಯಲ್ಲಿ ಪಶ್ಚಿಮ ಏಷ್ಯಾ ಮತ್ತು ಸೆಂಟ್ರಲ್ ಏಷ್ಯಾನ್ ದೇಶಗಳು ಒಳಗೊಳ್ಳುತ್ತಿಲ್ಲ ಎಂಬುದು ಗಮನಿಸಬೇಕಾದ ಮತ್ತೊಂದು ವಿಚಾರ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *