ಕೋಲಾರ: ಕ್ಷುಲ್ಲಕ ಕಾರಣಕ್ಕೆ ಸಹೋದರರ ಕಾಳಗ; ಅಣ್ಣನನ್ನೇ ಹತ್ಯೆಗೈದ ತಮ್ಮ

ಕೋಲಾರ: ಕ್ಷುಲ್ಲಕ ಕಾರಣಕ್ಕೆ ಸಹೋದರರ ಕಾಳಗ; ಅಣ್ಣನನ್ನೇ ಹತ್ಯೆಗೈದ ತಮ್ಮ


ಕೋಲಾರ, ನವೆಂಬರ್ 28: ಟೀ ಅಂಗಡಿ ಎದುರೇ ಲಾಂಗು ಹಿಡಿದು ಒಡಹುಟ್ಟಿದ ಅಣ್ಣನನ್ನೇ (ಸಹೋದರ) ತಮ್ಮ ಕೊಲೆ (ಕೊಲ್ಲಲು) ಇಂತಹ ಘಟನೆ ಕೋಲಾರದ ಮಿಲ್ಲತ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮಚ್ಚಿನಿಂದ ಕೊಚ್ಚಿ ಸಲ್ಮಾನ್ ಮೊಹಮ್ಮದ್ನನ್ನು ಸಾಜಿದ್ ಕೊಲೆಗೈದಿದ್ದಾನೆ. ಸದ್ಯ ಆರೋಪಿ ಸಾಜಿದ್ ನನ್ನು ಬಂಧಿಸಿದ್ದು, ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ಕಳೆದ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಸಾಜಿದ್ ಎಂಬಾತ ತನ್ನ ಒಡಹುಟ್ಟಿದ ಅಣ್ಣ ಸಲ್ಮಾನ್ ಎಂಬಾತನನ್ನು ಮಚ್ಚಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆಯ ದೃಶ್ಯಗಳು ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಟಾಟಾ ಸುಮೋ ಕಾರ್ನಲ್ಲಿದ್ದ ಸಾಜಿದ್ ತನ್ನ ಅಣ್ಣನೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಈ ವೇಳೆ ಕಾರ್ ನಿಂದ ಒಂದು ಉದ್ದದ ಲಾಂಗ್ ತೆಗೆದು ಏಕಾಏಕಿ ಹಲ್ಲೆ ಮಾಡಿ, ನಂತರ ಕಾರ್ ಹತ್ತಿ ಅಲ್ಲಿಂದ ತೆರಳುತ್ತಾನೆ. ಕೂಡಲೇ ಹಲ್ಲೆಗೊಳಗಾದ ಸಲ್ಮಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರ ರಕ್ತಸ್ರಾವದಿಂದ ಕಾಣಿಸಿಕೊಂಡಿದ್ದ. ಕೂಡಲೇ ಸ್ಥಳಕ್ಕೆ ಬಂದ ಗಲ್ ಪೇಟೆ ಪೊಲೀಸರು ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಸಾಜಿದ್ ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಪತಿಗೇ ಚಟ್ಟ ಕಟ್ಟಿದ ಪತ್ನಿ: ಕೊಲೆ ಪ್ಲ್ಯಾನ್ ಕೇಳಿದ್ರೆ ಶಾಕ್ ಆಗ್ತೀರ!

ಕೋಲಾರದ ಪ್ರಶಾಂತ್ ನಗರದ ನಿವಾಸಿಗಳಾದ ಜಾಫರ್ ಹಾಗೂ ಫರಾನಾ ದಂಪತಿಗೆ ಮೂರು ಜನ ಗಂಡು ಮಕ್ಕಳು. ಮೊದಲನೆಯವನು ಸಾಧಿಕ್, ಎರಡನೆಯವನು ಸಲ್ಮಾನ್, ಮೂರನೇಯವನು ಸಾಜಿದ್. ಮೂರು ಜನಕ್ಕೆ ಇನ್ನು ಮದುವೆಯಾಗಿಲ್ಲ. ತಂದೆ ಜಾಫರ್ ಹತ್ತು ವರ್ಷಗಳೇ ಕಳೆದಿವೆ. ಆದರೆ ಮೂರು ಜನರನ್ನು ತಾಯಿಯೇ ಕೂಲಿ ನಾಲಿ ಮಾಡಿ ಸಾಕಿದ್ದಾರೆ. ಮೊದಲನೆಯವ ಸಾಧಿಕ್ ಹಾಗೂ ಮೂರನೇಯವ ಸಾಜಿದ್ ಕುಟುಂಬದೊಂದಿಗೆ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ, ಆದರೆ ಕೊಲೆಯಾದ ಸಲ್ಮಾನ್, ಅವರ ತಾಯಿ ಶೋಕಿಲಾಲ, ಮಾದಕ ವಸ್ತುಗಳಿಗೆ ದಾಸನಾಗಿ ಹೋಗಿದ್ದಳು.

ಈ ಮೊದಲು ಕೂಡ ಕೊಲೆ ಪ್ರಕರಣವೊಂದರ ಆರೋಪಿ. ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ.27 ರಂದು ಕೂಡ ಕೋರ್ಟ್ ವಿಚಾರಣೆ ಇತ್ತು. ಈ ವೇಳೆ ಲಾಯರ್‌ಗೆ ಹಣ ಕೊಡುವ ವಿಚಾರದಲ್ಲೇ ಸಲ್ಮಾನ್ ಹಾಗೂ ಸಾಜಿದ್ ನಡುವೆ ಜಗಳವಾಗಿದೆ. ಇದಾದ ನಂತರ ಸಲ್ಮಾನ್ ಮನೆಗೆ ಹೋಗಿ ತಾಯಿಯೊಂದಿಗೆ ಗಲಾಟೆ ಮಾಡಿ ಬಂದಿದ್ದ. ಈ ಎಲ್ಲಾ ವಿಷಯ ತಿಳಿದುಕೊಂಡಿದ್ದ ಸಾಜಿದ್ ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಟೀ ಅಂಗಡಿಯ ಬಳಿ ಕುಳಿತಿದ್ದ ಸಲ್ಮಾನ್ ಜೊತೆಗೆ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಸಾಜಿದ್, ಲಾಂಗ್ ನಿಂದ ಅಣ್ಣನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ: ಸರ್ಕಾರಿ ನೌಕರರೇ ಮದುವೆ ಆಗುವ ಯುವತಿಯರೇ ಜೋಕೆ: ಪತಿಯ ವರದಕ್ಷಿಣೆ ಟಾರ್ಚರ್ ಗೆ ನಾಲೆಗೆ ಹಾರಿದ ಮಹಿಳೆ

ಒಟ್ಟಾರೆ ಪಡೆದ ದುಶ್ಚಟಗಳು, ಸಹವಾಸಗಳು, ಮಾಡಬಾರದನ್ನು ಮಾಡಿಸಿ ಕೊನೆಗೆ ನಮ್ಮವರೇ ನಮ್ಮವರನ್ನು ಹತ್ಯೆ ಮಾಡುವ ಸ್ಥಿತಿ ತಲುಪಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *