ಸಿದ್ದರಾಮಯ್ಯ-ಡಿಕೆಶಿ ನಡುವೆ ಸಿಎಂ ಕುರ್ಚಿ ಫೈಟ್​: ಸೋಶಿಯಲ್​ ಮೀಡಿಯಾಗಳಲ್ಲಿ ಮೀಮ್ಸ್​ಗಳದ್ದೇ ಹವಾ!

ಸಿದ್ದರಾಮಯ್ಯ-ಡಿಕೆಶಿ ನಡುವೆ ಸಿಎಂ ಕುರ್ಚಿ ಫೈಟ್​: ಸೋಶಿಯಲ್​ ಮೀಡಿಯಾಗಳಲ್ಲಿ ಮೀಮ್ಸ್​ಗಳದ್ದೇ ಹವಾ!


ಬೆಂಗಳೂರು, ನವೆಂಬರ್ 28: ಸಿಎಂ ಸ್ಥಾನದ ವಿಚಾರವಾಗಿ ರಾಜ್ಯ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ತಿಕ್ಕಾಟ ತಾರಕಕ್ಕೇರಿದೆ. ಇಬ್ಬರು ನಾಯಕರ ಬೆಂಬಲಿಗರು ಸೇರಿ ಸ್ವಾಮೀಜಿಗಳೂ ಅಖಾಡಕ್ಕಿಳಿದಿದ್ದಾರೆ. ಜಾತಿವಾರು ಸಂಘ ಸಂಸ್ಥೆಗಳೂ ತಮ್ಮ ನಾಯಕರ ಪರ ಧ್ವನಿ ಎತ್ತುತ್ತಿವೆ. ಈ ಎಲ್ಲದರ ನಡುವೆ ರಾಜ್ಯ ಕಾಂಗ್ರೆಸ್ ನಾಯಕರ ನಡುವಿನ ಪಟ್ಟದ ಫೈಟ್ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಎಬ್ಬಿಸಿದೆ. ಈ ಕುರಿತು ನೂರಾರು ಮೀಮ್ಸ್‌ಗಳು ಹರಿದಾಡತೊಡಗಿವೆ. ಅಂತಹ ವಿಡಿಯೋಗಳು ಒಂದರಲ್ಲಿ ಈ ಕುರ್ಚಿ ಗುದ್ದಾಟವನ್ನು ಬಹಳ ವ್ಯಂಗ್ಯವಾಗಿ ಬಿಂಬಿಸಲಾಗಿದೆ.

ಮೀಮ್ಸ್ ನಲ್ಲಿ ಏನಿದೆ?

ಅಣ್ಣ ಎರಡೂವರೆ ವರ್ಷ ಮುಗಿದರೂ ನಿನಗೆ ಕುರ್ಚಿ ಬಿಡುವ ತರ ಕಾಣುತ್ತಿಲ್ಲ. ನಾನೇ ಹೋಗಿ ಸಿಎಂ ಕುರ್ಚಿಯನ್ನು ಎತ್ತಿಕೊಂಡು ಬರುತ್ತೇನೆ ಎಂದು ಡಿ.ಕೆ. ಸುರೇಶ್ ಹೇಳುತ್ತಾರೆ. ಇದಕ್ಕೆ ಡಿ.ಕೆ. ಶಿವಕುಮಾರ್ ಕೂಡ ಆಯ್ತು ಎನ್ನುತ್ತಾರೆ. ಆದರೆ ಅವರ ನಡುವಿನ ಸಂಭಾಷಣೆಯನ್ನು ಕೇಳುವ ಸಚಿವ ಜಮೀರ್ ಅಹ್ಮದ್ ಖಾನ್, ನಮ್ಮ ಸಿದ್ದರಾಮಯ್ಯ ಅವರ ಕುರ್ಚಿಗೆ ಕಣ್ಣು ಹಾಕ್ತೀರ ಎಂದು ತಮ್ಮಲ್ಲೇ ಹೇಳಿಕೊಳ್ಳುತ್ತಾರೆ. ಜೊತೆಗೆ ಸಿಎಂ ಕುರ್ಚಿಗೆ ಗಮ್ ಹಾಕಿ, ಈಗ ಹೇಗೆ ಕುರ್ಚಿ ಕಿತ್ಕೋತೀರಾ ನೋಡುತ್ತೇನೆ. ರಾಹುಲ್ ಸಾಬ್ ಬಂದರೂ ಕುರ್ಚಿ ಬಿಡಲ್ಲ ಎನ್ನುತ್ತಾರೆ. ಬಳಿಕ ಆ ಕುರ್ಚಿ ಮೇಲೆ ಬಂದು ಕುಳಿತುಕೊಳ್ಳುವ ಸಿದ್ದರಾಮಯ್ಯ, ಜಮೀರ್ ಏನೋ ಅಂತಕೊಂಡ ರೀತಿ ಆಗುತ್ತಿದೆಯಲ್ಲ ಎನ್ನುತ್ತಾರೆ. ಇದಕ್ಕೆ ಉತ್ತರಿಸುವ ಜಮೀರ್, ಮುಖ್ಯಮಂತ್ರಿ ಕುರ್ಚಿ ಅಲ್ವಾ ಸರ್. ಅದಕ್ಕೂ ನಿಮ್ಮ ಬಿಟ್ಟಿರಲು ಆಗ್ತಿಲ್ಲ ಅನ್ನಿಸುತ್ತೆ ಅಂತಾರೆ. ಈ ವೇಳೆಗೆ ಅಲ್ಲಿಗೆ ಡಿಕೆ ಸಹೋದರರು ಬರಲಿದ್ದಾರೆ, ಡಿಕೆಶಿ ಸಿದ್ದರಾಮಯ್ಯನವರೇ ಎನ್ನುತ್ತಾರೆ. ಆಗ ಬನ್ನಿ ಬನ್ನಿ ಎನ್ನುತ್ತಾ ಸಿದ್ದರಾಮಯ್ಯ ಕುರ್ಚಿಯಿಂದ ಎದ್ದೇಳುವಾಗ, ಕುರ್ಚಿಯೂ ಅವರ ಜೊತೆಗೇ ಬರುತ್ತೆ. ಈ ದೃಶ್ಯವನ್ನು ಕಂಡು ಡಿಕೆಶಿ ಸಹೋದರರು ಗಾಬರಿಯಾದರೆ, ಜಮೀರ್ ಮಾತ್ರ ಹಸನ್ಮುಖಿಯಾಗುತ್ತಾರೆ.

ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತ ತಲುಪಿದ ಸಿಎಂ ಕುರ್ಚಿ ಕದನ: ಪದತ್ಯಾಗನಾ? ಪಟ್ಟಾಭಿಷೇಕನಾ?

ಇಂತಹ ಹಲವಾರು ಮೀಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅಧಿಕಾರಕ್ಕಾಗಿ ಕತ್ತಿ ಹಿಡಿದು ಮತ್ತೊಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ರಾಹುಲ್ ಗಾಂಧಿ ಸಮಾಧಾನ ಮಾಡುವ ರೀತಿಯಲ್ಲಿ ಬಿಂಬಿಸಲಾಗಿದೆ. ಸಿನಿಮಾ ದೃಶ್ಯವನ್ನು ಆ ಪಾತ್ರಗಳಿಗೆ ಇವರ ಹೆಸರನ್ನು ಉಲ್ಲೇಖಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *