ಹೈಕಮಾಂಡ್​ನಿಂದ ಬಂತು ಸಂದೇಶ: ಡಿಕೆಶಿ ದೆಹಲಿ ಟೂರ್ ಕ್ಯಾನ್ಸಲ್, ಸಿಎಂ ಜತೆ ಬ್ರೇಕ್ ಫಾಸ್ಟ್ ಮೀಟಿಂಗ್​ಗೆ ಹಾಜರ್

ಹೈಕಮಾಂಡ್​ನಿಂದ ಬಂತು ಸಂದೇಶ: ಡಿಕೆಶಿ ದೆಹಲಿ ಟೂರ್ ಕ್ಯಾನ್ಸಲ್, ಸಿಎಂ ಜತೆ ಬ್ರೇಕ್ ಫಾಸ್ಟ್ ಮೀಟಿಂಗ್​ಗೆ ಹಾಜರ್


ಬೆಂಗಳೂರು, (ನವೆಂಬರ್ 28): ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ (ಸಿದ್ದರಾಮಯ್ಯ) ಹಾಗೂ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಂತಿದೆ. ನಾಳೆ(ನವೆಂಬರ್ 29) ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಸಭೆ ನಡೆಯಲಿದೆ, ಕರ್ನಾಟಕ ಕುರ್ಚಿ ಕಾಳಗಕ್ಕೆ ತೆರೆ ಬೀಳಲಿದೆ. ಆದರೆ, ದೆಹಲಿಯಲ್ಲಿ ಸಭೆ ನಡೆಯೋ ಮುನ್ನವೇ ರಾಜ್ಯದಲ್ಲಿ ಮಹತ್ವದ ಬೆಳವಣಿಗೆ, ಸಿಎಂ ಡಿಸಿಎಂ ನಾಳೆ (ನವೆಂಬರ್ 29) ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲಿದ್ದಾರೆ. ಕೆಸಿ ವೇಣುಗೋಪಾಲ್ ಅವರು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಕರೆಸಿ ಇಬ್ಬರು ಇಬ್ಬರು ಮಾತುಕತೆ ನಡೆಸಿ ಗೊಂದಲ ಬಗೆಹರಿಸಿಕೊಳ್ಳಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇತ್ತ ಬೆಂಗಳೂರಿನ ನಾಳೆ (ನವೆಂಬರ್ 29) ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬ್ರೇಕ್’ ಫಾಸ್ಟ್ ಮೀಟಿಂಗ್ ಫಿಕ್ಸ್ ಆಗಿದ್ದು, ನಾಯಕರ ಸಭೆ ತೀವ್ರ ಕುತೂಹಲ ಮೂಡಿಸಿದೆ.

ಹೈಕಮಾಂಡ್ ಸೂಚನೆ ಒಪ್ಪಿದ ಸಿಎಂ

ಹೈಕಮಾಂಡ್ ನಿಂದ ಬಂದ ಸಂದೇಶದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಹೈಕಮಾಂಡ್ ನಾಯಕರು ದೆಹಲಿಗೆ ಕರೆದರೆ ಹೋಗುತ್ತೇವೆ. ನೀವಿಬ್ಬರೂ ಭೇಟಿ ಮಾಡಿ ಎಂದು ಹೈಕಮಾಂಡ್‌ನವರು ಹೇಳಿದ್ದಾರೆ. ಹೈಕಮಾಂಡ್‌ನವರು ನನಗೂ ಹಾಗೂ ಡಿಕೆಗೂ ಕರೆ ಮಾಡಿ ಹೇಳಿದ್ದಾರೆ. ಹೀಗಾಗಿ ನಾಳೆ ಚರ್ಚೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತ ತಲುಪಿದ ಸಿಎಂ ಕುರ್ಚಿ ಕದನ: ಪದತ್ಯಾಗನಾ? ಪಟ್ಟಾಭಿಷೇಕನಾ?

ಸಿಎಂ, ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್

ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿದ್ದು, ಇಬ್ಬರೂ ಮಾತುಕತೆ ಮೂಲಕ ಗೊಂದಲ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಪರಸ್ಪರ ಮಾತುಕತೆ ನಡೆಸಿ ನಿರ್ಣಯವನ್ನು ತಮಗೆ ತಿಳಿಸಿ ಎಂದು ಹೇಳಿದ್ದಾರೆ. ಈ ಡಿಕೆ ಶಿವಕುಮಾರ್ ಇಂದು ಸಂಜೆ ದೆಹಲಿ ಪ್ರವಾಸ ರದ್ದು ಮಾಡಿದ್ದು, ಹೈಕಮಾಂಡ್ ಸೂಚನೆಯಂತೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರಿಗೆ ಕರೆ ಮಾಡಿ ನಾಳೆ ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ಬರಲಿದೆ. ಹೌದು ನಾಳೆ (ನವೆಂಬರ್ 29) ಬೆಳಗ್ಗೆ 9.30ಕ್ಕೆ ಸಿಎಂ ನಿವಾಸ ಕಾವೇರಿಗೆ ತೆರಳಿ ಸಿದ್ದರಾಮಯ್ಯನವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಹೀಗಾಗಿ ಉಭಯ ನಾಯಕರ ಸಭೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ದೆಹಲಿ ಪ್ರವಾಸ ರದ್ದುಗೊಳಿಸಿದ ಡಿಕೆಶಿ

ಹೌದು…ಸಹೋದರ ಡಿಕೆ ಸುರೇಶ್ ಅವರು ದೆಹಲಿಗೆ ತಲುಪಿದಾಗ ಇತ್ತ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಲು 7.40ರ ವಿಮಾನದ ಟಿಕೆಟ್ ಬುಕ್ ಮಾಡಿದ್ದಾರೆ. ಆದರೆ, ಹೈಕಮಾಂಡ್, ಇಬ್ಬರು ಮಾತುಕತೆ ನಡೆಸಿ ಬಳಿಕ ದೆಹಲಿಗೆ ಬರುವಂತೆ ಸೂಚನೆ ನೀಡಲಾಗಿದೆ. ಹೀಗಾಗಿ ಇನ್ನೇನು ಫ್ಲೈಟ್ ಹತ್ತಬೇಕಿದ್ದ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ರದ್ದುಗೊಳಿಸಬೇಕಾಯ್ತು.

ಡಿಕೆ ಶಿವಕುಮಾರ್ ಅವರು ಇಂದು ದೆಹಲಿಗೆ ತೆರಳಲು ಸಜ್ಜಾಗಿದ್ದರು. ಎರಡು ಏರ್ ಟಿಕೆಟ್ ಸಹ ಬುಕ್ ಮಾಡಲಾಗಿತ್ತು. ಮೊದಲು ಸಂಜೆ 7 ಗಂಟೆ ವಿಮಾನಕ್ಕೆ ಟಿಕೆಟ್ ಬುಕ್ ಆಗಿದೆ. ಆದರೆ, ಕೊನೆ ಕ್ಷಣದಲ್ಲಿ 7 ಗಂಟೆ ಫ್ಲೈಟ್ ಟಿಕೆಟ್ ಕ್ಯಾನ್ಸಲ್ ಆಗುತ್ತಿದೆ. ಬಳಿಕ ಸಂಜೆ 7.40ರ ಏರ್ ಇಂಡಿಯಾ ಫ್ಲೈಟ್ ಟಿಕೆಟ್ ಬುಕ್ ಮಾಡಲಾಗಿತ್ತು. ಯಾವಾಗ ಹೈಕಮಾಂಡ್ ನಿಂದ ಫೋನ್ ಬಂತೋ ಆಗ ಡಿಕೆಶಿ ದೆಹಲಿ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಸಿದ್ದರಾಮಯ್ಯನವರಿಗೆ ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡಲು ತಮ್ಮ ನಿವಾಸಕ್ಕೆ ಬರುವುದಾಗಿ ಹೇಳಿದ್ದಾರೆ.

ಸಂಧಾನಕ್ಕೆ ಮೀನಮೇಷ ಎಣಿಸ್ತಿದ್ಯಾ ಹೈಕಮಾಂಡ್?

ರಾಜ್ಯ ಕಾಂಗ್ರೆಸ್‌ನಲ್ಲಿ ಪಟ್ಟದಾಟದ ಗುದ್ದಾಟ ಕಾವೇರಿದೆ. ಸಿಎಂ ಡಿಸಿಎಂ ಮಧ್ಯೆ ಪೋಸ್ಟ್ ವಾರ್ ಬೀದಿಗೆ ಬಂದಿದೆ. ಹೀಗಿದ್ದರೂ ಹೈಕಮಾಂಡ್ ಇಬ್ಬರ ನಡುವೆ ಸಂಧಾನ ಮಾಡದೇ ಮೀನಮೇಷ ಎನಿಸುತ್ತಿರುವುದ್ಯಾಕೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒಂದು ವಾರದಲ್ಲಿ ಎರಡು ಬಾರಿ ರಾಜ್ಯಕ್ಕೆ ಬಂದು ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಿನ್ನೆ ಸಂಜೆ ಕೂಡ ನಡೆದಿದ್ದು, ಅಲ್ಲಿ ಪಟ್ಟದ ವಿಚಾರವಾಗಲಿ, ರಾಜ್ಯದ ವಿದ್ಯಾಮಾನದ ಬಗ್ಗೆಯಾಗಲಿ ಚರ್ಚೆಯಾಗಿಲ್ಲ. ಇದೀಗ ಸೋನಿಯಾ ಗಾಂಧಿ ವಿದೇಶದಿಂದ ಇವತ್ತು ರಾತ್ರಿ ವಾಪಸ್ ಬರ್ತಿದ್ದಾರೆ. ಸೋನಿಯಾ ಗಾಂಧಿ ಅಭಿಪ್ರಾಯ ಪಡೆದು ಭಾನುವಾರ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಕೆ.ಸಿ.ವೇಣುಗೋಪಾಲ್ ಚರ್ಚೆ ನಡೆಸಲಿದ್ದಾರೆ. ಈ ಸಭೆಯ ಬಳಿಕ ರಾಜ್ಯ ನಾಯಕರಿಗೆ ಬರುವಂತೆ ವರಿಷ್ಠರು ಸೂಚನೆ ನೀಡುವ ಸಾಧ್ಯತೆ ಇದೆ. ಅಲ್ಲಿಗೆ ಈ ಪಟ್ಟದಾಟದ ಮೀಟಿಂಗ್ ಮುಂದಿನ ವಾರಕ್ಕೆ ಹೋದಂತೆ ಕಾಣ್ತಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *