HLL ಲೈಫ್‌ಕೇರ್ ಅಧಿಕೃತ ಅಧಿಸೂಚನೆಯ ಮೂಲಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಉದ್ಯೋಗಹುಡುಕುತ್ತಿರುವ ಉದ್ಯೋಗಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 03 ರಂದು ನೇರ ಸಂದರ್ಶನಕ್ಕೆ ಹಾಜರಾಗತಕ್ಕದ್ದು.
ಹುದ್ದೆಯ ಅಧಿಸೂಚನೆ:
- ಸಂಸ್ಥೆಯ ಹೆಸರು : HLL ಲೈಫ್‌ಕೇರ್ ಲಿಮಿಟೆಡ್ (HLL Lifecare)
- ಹುದ್ದೆಗಳ ಸಂಖ್ಯೆ: 4
- ಉದ್ಯೋಗ ಸ್ಥಳ: ರಾಜಸ್ಥಾನ , ಉತ್ತರ ಪ್ರದೇಶ
- ಹುದ್ದೆಯ ಹೆಸರು: ಅಧಿಕಾರಿ
ಶೈಕ್ಷಣಿಕ ಅರ್ಹತೆ:
ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಡಿಪ್ಲೊಮಾ, ಪದವಿ, BE/B.Tech, ಪದವಿಯನ್ನು ಪೂರ್ಣಗೊಳಿಸಬೇಕು.
ಇದನ್ನೂ ಓದಿ: ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್; ಹೀಗೆ ಅರ್ಜಿ ಸಲ್ಲಿಸಿ
ವಯಸ್ಸಿನ ಮಿತಿ:
ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು 01-01-2025 40 ವರ್ಷ ಮೀರಬಾರದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತದಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ನೇರ ಸಂದರ್ಶನ ನಡೆಯುವ ಸ್ಥಳದ ವಿವರಗಳು:
- ಜೈಪುರ: ಹೋಟೆಲ್ ರಿಮ್ ವಿಸ್ತಾ, ದೇವಿ ಮಾರ್ಗ, ಬನಿ ಪಾರ್ಕ್, ಜೈಪುರ, ರಾಜಸ್ಥಾನ
- ಉನ್ನಾವ್: ಹೋಟೆಲ್ ಗೀತಾ ಗಾರ್ಡನ್, ಎದುರು. ಪವರ್ ಹೌಸ್, ಮುರ್ತಾಜಾ ನಗರ, ದಹಿ ಚೌಕಿ, ಉನ್ನಾವ್, ಉತ್ತರ ಪ್ರದೇಶ
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ.
ಹೆಚ್ಚಿನ ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ