ಧರ್ಮೇಂದ್ರ, ಬಾಲಿವುಡ್‌ನ (ಬಾಲಿವುಡ್) ಸ್ಟಾರ್ ನಟ. ಸಿನಿಮಾಗಳಲ್ಲಿ ನಿಜ ಜೀವನದಲ್ಲಿಯೂ ಬಣ್ಣದ ಬದುಕು ಬದುಕಿದವರು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮಗೆ ಇಷ್ಟ ಬಂದಿದ್ದನ್ನು ಮಾಡುತ್ತಾ ಬದುಕಿದ್ದವರು ಧರ್ಮೇಂದ್ರ. ಸ್ಟಾರ್ ಆಗಿದ್ದ ಸಮಯದಲ್ಲಂತೂ ಅವರ ಜಲ್ವಾ ಬಲು ಜೋರಾಗಿತ್ತು. ಬಾಲಿವುಡ್ ನಲ್ಲಿ ಮಾತ್ರವೇ ಅಲ್ಲದೆ ಹಲವು ಚಿತ್ರರಂಗದಲ್ಲಿ ಅವರಿಗೆ ಗೆಳೆಯರಿದ್ದರು. ರಜನೀಕಾಂತ್ ಸಹ ಧರ್ಮೇಂದ್ರ ಅವರಿಗೆ ಗೆಳೆಯರೇ ಆಗಿದ್ದರು. ಆದರೆ ಧರ್ಮೇಂದ್ರ ಮಾಡಿದ ಕೆಲಸಕ್ಕೆ ಹೆದರಿ ಒಮ್ಮೆ ಸೆಟ್ ಬಿಟ್ಟು ಹೋಗಿಬಿಟ್ಟಿದ್ದರು ರಜನೀಕಾಂತ್.
ರಾಧಿಕಾ ಶರತ್ ಕುಮಾರ್ ತಮಿಳು ಚಿತ್ರರಂಗದ ಖ್ಯಾತ ನಟಿ. ರಜನೀಕಾಂತ್ ಸೇರಿದಂತೆ ಹಲವು ಸ್ಟಾರ್ ನಟರುಗಳೊಂದಿಗೆ ರಾಧಿಕಾ ನಟಿಸಿದ್ದಾರೆ. ಅವರು ಸಂದರ್ಶನದಲ್ಲಿ ಧರ್ಮೇಂದ್ರ ಮತ್ತು ರಜನೀಕಾಂತ್ ಕುರಿತಾಗಿ ಅಪರೂಪದ ಘಟನೆ ಹಂಚಿಕೊಂಡಿದ್ದರು.
ರಜನೀಕಾಂತ್ ಮತ್ತು ರಾಧಿಕಾ ಶರತ್ ಕುಮಾರ್ ಅವರು ತಮಿಳು ಸಿನಿಮಾ ಒಂದರಲ್ಲಿ ನಟಿಸುತ್ತಿದ್ದರಂತೆ. ಸ್ಟುಡಿಯೋ ಒಂದರಲ್ಲಿ ಸಿನಿಮಾದ ಶೂಟಿಂಗ್ ನಡೆದಿತ್ತಂತೆ. ಅದೇ ಸ್ಟುಡಿಯೋದ ಪಕ್ಕದ ಸೆಟ್‌ನಲ್ಲಿ ಧರ್ಮೇಂದ್ರ ಅವರ ಸಿನಿಮಾದ ಶೂಟಿಂಗ್ ನಡೆದಿತ್ತು. ರಾಧಿಕಾ ಅವರು ಹೋಗಿ ಧರ್ಮೇಂದ್ರ ಅವರನ್ನು ಸೆಟ್ ಮಾಡಿ, ತಾವು ಪಕ್ಕದ ಚಿತ್ರೀಕರಣದಲ್ಲಿ ನಟಿಸುತ್ತಿದ್ದಾರೆ, ರಜನೀಕಾಂತ್ ಸಹ ನಟಿಸುತ್ತಿದ್ದಾರೆ ಎಂದು ಹೇಳಿ ಬಂದರಂತೆ.
ಇದನ್ನೂ ಓದಿ:ಚಿರಂಜೀವಿಗೆ ನೋ ಹೇಳಿ ಈಗ ರಜನೀಕಾಂತ್ ಗೆ ಎಸ್ ಎಂದ ಸಾಯಿ ಪಲ್ಲವಿ
ರಜನೀಕಾಂತ್ ಅವರು ಅಂದು ಶೂಟಿಂಗ್ ಮಾಡಲು ಇಷ್ಟು ಉತ್ಸುಕರಾಗಿರಲಿಲ್ಲವಾದ್ದರಿಂದ ಅವರು ನಿಜವಾದ ಹುಲಿಯೊಂದಿಗೆ ಫೈಟ್ ಮಾಡಬೇಕಿತ್ತಂತೆ. ರಾಧಿಕಾರನ್ನು ವಿಲನ್‌ಗಳು ಮರಕ್ಕ ಕಟ್ಟಿ ಹಾಕಿರುವ ಸೀನ್, ರಾಧಿಕಾಗೆ ಹುಲಿ ಕಾವಲು, ರಜನೀಕಾಂತ್ ಹುಲಿಯೊಟ್ಟಿಗೆ ಫೈಟ್ ಮಾಡಿ ರಾಧಿಕಾರನ್ನು ಬಿಡಿಸಿಕೊಳ್ಳಬೇಕು, ಇದು ಸೀನ್. ಚಿತ್ರ ನಡೆಯುವ ವೇಳೆ ಧರ್ಮೇಂದ್ರ ಸೆಟ್‌ಗೆ ಎಂಟ್ರಿ ಕೊಟ್ಟರಂತೆ. ಬಂದವರೇ ಎಲ್ಲರಿಗೂ ಬೇಕಾದ ಶೈಲಿಯಲ್ಲಿ ಹಾಯ್ ಹೇಳಿ, ಕೆಲವರನ್ನು ಗದರಿ, ಕೊನೆಗೆ ಹುಲಿಯ ಬಳಿ ಬಂದವರೇ ಹುಲಿಯ ಮುಖಕ್ಕೆ ಸರಿಯಾಗಿ ಭಾರಿಸಿಬಿಟ್ಟರಂತೆ.
ಧರ್ಮೇಂದ್ರ ಅವರ ಅಗಲವಾದ ಕೈಯಿಂದ ಏಟು ಬಿದ್ದೊಡನೆ ಹುಲಿ, ಬೆಕ್ಕಿನಂತಾಗಿಬಿಟ್ಟಂತೆ. ಆದರೆ ಅದಾದ ಕೆಲವು ಹೊತ್ತಿನಲ್ಲೇ ರಜನೀಕಾಂತ್ ಸೆಟ್ ಬಿಟ್ಟು ಕಾರಿನಲ್ಲಿ ಹೋಗಿ ಬಿಟ್ಟರಂತೆ. ಅವರು ಎಷ್ಟು ಹೊತ್ತಾದರೂ ಬರದ್ದು ನೋಡಿ ನಿರ್ದೇಶಕರು ಹೋಟೆಲ್ ರೂಂಗೆ ಕರೆ ಮಾಡಿದರೆ ರಜನೀಕಾಂತ್ ಸಿಕ್ಕರಂತೆ. ಏಕೆ ಹೋಗಿಬಿಟ್ಟಿರಿ, ಎಂದರೆ, ‘ಧರ್ಮೇಂದ್ರ ಆ ಹುಲಿಗೆ ಹೊಡೆದು ಹೋಗಿಬಿಟ್ಟರು. ಈಗ ಅದರೊಂದಿಗೆ ಫೈಟ್ ಮಾಡಬೇಕಿರುವುದು ನಾನು. ಹೊಡೆತ ತಿಂದ ಹುಲಿ ನನಗೆ ಏನಾದರೂ ಮಾಡಿದರೆ, ಆ ಹುಲಿ ಸ್ವಲ್ಪ ಸಮಾಧಾನ ಆಗಲಿ ಆಮೇಲೆ ನಾನು ಬರುತ್ತೇನೆ’ ಎಂದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ