100 ರು. ಗಡಿಗೆ ಟೊಮೆಟೋ ದರ ! – ಬೆಳೆ ಕುಸಿತ, ಪೂರೈಕೆ ಕೊರತೆ

100 ರು. ಗಡಿಗೆ  ಟೊಮೆಟೋ ದರ ! – ಬೆಳೆ ಕುಸಿತ, ಪೂರೈಕೆ ಕೊರತೆ

100 ರು. ಗಡಿಗೆ  ಟೊಮೆಟೋ ದರ ! – ಬೆಳೆ ಕುಸಿತ, ಪೂರೈಕೆ ಕೊರತೆ

ಚಿಕ್ಕಬಳ್ಳಾಪುರ/ಬಂಗಾರಪೇಟೆ : ಕಳೆದ ವರ್ಷ ಒಮ್ಮೆ 100 ರು. ಗಡಿ ದಾಟಿ ಜನರ ಕಿಸೆಗೆ ಬಿಸಿ ಮುಟ್ಟಿಸಿದ್ದ ಟೊಮೆಟೋ, ಈಗ ಮತ್ತೆ ಶತಕದ ಗಡಿ ದಾಟುವ ಲಕ್ಷಣಗಳಿವೆ. ಕಳೆದ 8-10 ದಿನಗಳಿಂದ ಟೊಮೆಟೋ ದರ ಹೆಚ್ಚುತ್ತಲೇ ಇದ್ದು, ಉತ್ತಮ ದರ್ಜೆಯ ಟೊಮೆಟೋ ಕೆ.ಜಿಗೆ ಹಾಪ್‌ಕಾಮ್ಸ್‌ ಹಾಗೂ ಇತರ ಮಾರುಕಟ್ಟೆಗಳಲ್ಲಿ 80 ರು. ಮಾರಾಟವಾಗುತ್ತಿದೆ.

ಇದು ಟೊಮೆಟೋ ಸೀಸನ್‌ ಅಲ್ಲ

ಇದು ಟೊಮೆಟೋ ಸೀಸನ್‌ ಅಲ್ಲ. ಹಾಗಾಗಿ ಬೆಳೆ ಇಳುವರಿ ಕುಸಿತವಾಗಿದೆ. ಇದರಿಂದ ಮಾರುಕಟ್ಟೆಗೆ ಬರುವ ಟೊಮೆಟೋ ಪ್ರಮಾಣ ಕೂಡ ಇಳಿದಿದೆ, ಇದು ದರ ಏರಿಕೆಗೆ ಕಾರಣ. ಇದು ರೈತರಿಗೆ ಸಂತಸ ತಂದಿದ್ದರೆ ಗ್ರಾಹಕರ ಕೈ ಸುಡುತ್ತಿದೆ.

ಟೊಮೆಟೋ ಆವಕ ಇಳಿಕೆ:

ಟೊಮೆಟೋ ಕಳೆದ 2 ವಾರದ ಹಿಂದೆ ಕೇಜಿಗೆ ₹15-20ಕ್ಕೆ ಮಾರಾಟವಾಗುತ್ತಿತ್ತು. ಆದರೆ ಪೂರೈಕೆ ಕಡಿಮೆ ಆಗುತ್ತಿದ್ದಂತೆ ಈಗ ₹50ರಿಂದ ₹90ವರೆಗೆ ಏರಿಕೆ ಕಂಡಿದೆ. ರಾಜ್ಯದ ಪ್ರಮುಖ ಟೊಮೆಟೋ ಮಾರುಕಟ್ಟೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಎಪಿಎಂಸಿಗೆ ಪೂರೈಕೆ ಇಳಿದಿದೆ.

Source link

Leave a Reply

Your email address will not be published. Required fields are marked *