Headlines

Bigg Boss: ಕಿರಿಕ್ ಶುರುವಾಗಿದ್ದು ಎಲ್ಲಿಂದ, ಎಲ್ಲದಕ್ಕೂ ಮೂಲ ಯಾವುದು?

Bigg Boss: ಕಿರಿಕ್ ಶುರುವಾಗಿದ್ದು ಎಲ್ಲಿಂದ, ಎಲ್ಲದಕ್ಕೂ ಮೂಲ ಯಾವುದು?


ಬಿಗ್ಬಾಸ್ (ಬಿಗ್ ಬಾಸ್) ಮನೆಯಲ್ಲಿ ಈ ವಾರವೆಲ್ಲ ಅತಿಥಿಗಳ ಅಬ್ಬರ ಜೋರಾಗಿತ್ತು. ಈ ಹಿಂದಿನ ಸೀಸನ್‌ಗಳಲ್ಲಿ ವಿಶೇಷವಾಗಿ ಮಾಸ್ಟರ್ ಆನಂದ್, ಶ್ರುತಿ ಅವರಿದ್ದ ಸೀಸನ್ ಈ ರೆಸಾರ್ಟ್ ಅಥವಾ ಹೋಟೆಲ್ ಟಾಸ್ಕ್ ಅನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಆದರೆ ಕಳೆದ ಕೆಲ ಸೀಸನ್‌ಗಳಲ್ಲಿ ಈ ರೆಸಾರ್ಟ್ ಟಾಸ್ಕ್ ಕೇವಲ ಜಗಳ, ಗದ್ದಲ, ಅತಿಥಿಯಾಗಿ ಬಂದವರು ಹಿಂಸೆ ಕೊಡಲು ಬಳಸುತ್ತಿದ್ದಾರೆ. ಈ ಸೀಸನ್‌ನಲ್ಲಿಯೂ ಅದೇ ಸಂಭವಿಸಿದೆ. ಅತಿಥಿಗಳಾಗಿ ಕಳೆದ ಸೀಸನ್ ಸ್ಪರ್ಧಿಗಳಾದ ಮಂಜು, ಮೋಕ್ಷಿತಾ, ರಜತ್, ತ್ರಿವಿಕ್ರಮ್, ಚೈತ್ರಾ ಕುಂದಾಪುರ ಬಂದಿದ್ದರು. ಆದರೆ ಗಿಲ್ಲಿ ಹಾಗೂ ಅತಿಥಿಗಳ ನಡುವೆ ಭಾರಿ ಜಗಳಗಳೇ ನಡೆದಿವೆ.

ಶನಿವಾರದ ಎಪಿಸೋಡ್‌ನಲ್ಲಿ ಈ ವಾರ ಮನೆಯಲ್ಲಿ ನಡೆದ ಜಗಳಗಳೇ ಮುಖ್ಯವಾಗಿ ಚರ್ಚೆಯ ವಿಷಯವಾದವು. ಸುದೀಪ್ ಎಲ್ಲರ ಅಭಿಪ್ರಾಯಗಳನ್ನು ಕೇಳುತ್ತಾ ಬಂದರು. ಮನೆಯಲ್ಲಿ ಎಲ್ಲೂ ಬೆರಳು ತೋರಿಸಿದ್ದು ಗಿಲ್ಲಿಯ ಮೇಲೆ. ಅತಿಥಿಗಳಾಗಿ ಬಂದಿದ್ದ ರಜತ್ ಮತ್ತು ಉಗ್ರಂ ಮಂಜು ಅಂತೂ ಗಿಲ್ಲಿ ವಿರುದ್ಧ ದೂರಿನ ಬಾಣಗಳನ್ನು ಎಸೆದರು. ಮನೆಯ ಕ್ಯಾಪ್ಟನ್ ಅಭಿ, ರಘು, ಸ್ಪಂದನಾ ಅವರು ಸಹ ಗಿಲ್ಲಿ ವಿರುದ್ಧ ದೂರು ನೀಡಿದ್ದಾರೆ.

ಗಿಲ್ಲಿ ಸಹ ತಮ್ಮಿಂದ ಕೆಲವು ತಪ್ಪುಗಳು ಆದವು ಎಂದರು. ಆದರೆ ಅತಿಥಿಗಳು ಸಹ ಉದ್ದೇಶಪೂರ್ವಕವಾಗಿ ತಮ್ಮೊಂದಿಗೆ ಹಾಗೆ ನಡೆದುಕೊಂಡರು. ನನ್ನನ್ನು ಮಾತನಾಡುವಂತೆ ಮಾಡಿದರು. ಕಾವ್ಯ ಸಹ, ಬಂದ ಅತಿಥಿಗಳಿಗೆ ಗಿಲ್ಲಿಯನ್ನು ಕಂಟ್ರೋಲ್ ಮಾಡುವ ಉದ್ದೇಶ ಇದ್ದಂತೆ ಇತ್ತು. ಹಲವು ಬಾರಿ ಗಿಲ್ಲಿಯನ್ನು ಕೆದಕಿ ಕೆದಕಿ ರೇಗುತ್ತಿದ್ದನ್ನು ನೋಡಿದ್ದೆ.

ಇದನ್ನೂ ಓದಿ:ಎಲ್ಲ ಸ್ಪರ್ಧಿಗಳು ಹೊರಕ್ಕೆ: ಖಾಲಿಯಾಗಿರುವ ಬಿಗ್ಬಾಸ್ ಮನೆ ಹೇಗಿದೆ ನೋಡಿ

ಆದರೆ ಇದೆಲ್ಲ ಪ್ರಾರಂಭವಾಗಿದ್ದು ಎಲ್ಲಿ ಎಂಬ ಪ್ರಶ್ನೆ ಬಂದಾಗ ಮತ್ತೆ ಅದು ನಿಂತಿದ್ದು ಗಿಲ್ಲಿಯ ಬಳಿಗೆ. ಸ್ಪರ್ಧಿಗಳು ಮನೆಗೆ ಬಂದ ಬಳಿಕ ಹಾಲ್ ನಲ್ಲಿ ಮಂಜು ಅವರ ಮದುವೆ ಕುರಿತಾಗಿ ಬಿಗ್ ಬಾಸ್ ಶುಭಾಶಯ ಕೋರಿದರು. ಆ ವೇಳೆಯಲ್ಲಿ ಗಿಲ್ಲಿ, ಎಷ್ಟನೇ ಮದುವೆಯದ್ದಾ, ಮೂರನೇಯದಾಗಿ? ಎಂದು ಕೇಳಿದರು. ಅಲ್ಲಿಂದ ಎಲ್ಲವೂ ಶುರುವಾಯ್ತು ಎಂಬ ನಿಷ್ಕರ್ಷೆಗೆ ಸುದೀಪ್ ಸೇರಿ ಎಲ್ಲರೂ ಬಂದರು. ಗಿಲ್ಲಿ ಸಹ ಅದನ್ನು ಒಪ್ಪಿಕೊಂಡರು. ಅಲ್ಲಿ ಶುರುವಾಯ್ತು, ಅದನ್ನು ಸರಿ ಮಾಡಲು ಇನ್ನೊಂದು ಕಾಮಿಡಿ ಮಾಡೋಣ ಎಂದು ಹೋಗಿ ಅದು ಮತ್ತೆ ಕೆಟ್ಟಿತು, ಎರಡನೇ ಜಗಳ ಇನ್ನೂ ಜೋರಾಯ್ತು.

ಸುದೀಪ್ ಅವರು ಗಿಲ್ಲಿಯ ವಿಡಿಯೋ ಸಹ ಮಾಡಿದ್ದಾರೆ. ವಿಡಿಯೋನಲ್ಲಿ ಗಿಲ್ಲಿ, ಅತಿಥಿಗಳಿಗೆ ಸಾಕಷ್ಟು ಟಾಂಗ್ ಕೊಟ್ಟಿದ್ದರು. ಸಾಕಷ್ಟು ಎದುರು ಮಾತನಾಡುತ್ತಿದ್ದರು. ಟಾಸ್ಕ್ನ ನಿಯಮಗಳ ಪ್ರಕಾರ ಗಿಲ್ಲಿ, ಅತಿಥಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಆದರೆ ಗಿಲ್ಲಿ ಅದನ್ನು ಮೀರಿದ್ದರು. ಅತಿಥಿಗಳು ಗಿಲ್ಲಿ ಪ್ರತ್ಯೇಕವಾಗಿ ‘ನೀನು ಆಡುತ್ತಿದ್ದೀಯ, ಇದನ್ನೇ ಚೆನ್ನಾಗಿ ಹೇಳು’ ಎಂದೆಲ್ಲ ಹಿತವಚನ ಹೇಳಿದ್ದರು. ಆದರೆ ಗಿಲ್ಲಿ, ಟಾಂಗ್ ಕೊಡುತ್ತಿದ್ದ, ಕ್ಷಮೆ ಕೇಳುತ್ತಿದ್ದ ಮತ್ತೆ ಟಾಂಗ್ ಕೊಡುತ್ತಿದ್ದ. ಅಂತಿಮವಾಗಿ ಸುದೀಪ್, ಗಿಲ್ಲಿಗೆ ಸೂಕ್ತವಾಗಿ ಬುದ್ಧಿವಾದ ಹೇಳಿದ್ದಾರೆ. ನಾಲಗೆಯಿಂದಲೇ ಇಲ್ಲಿಯವರೆಗೂ ಬಂದಿದ್ದೀಯ. ನಿನಗಾಗಿ ಒಂದು ಹೆಸರು ಗಳಿಸಿದ್ದೀಯ, ಅದರಿಂದಲೇ ಹಾಳಾಗಬೇಡ’ ಎಂದರು. ಗಿಲ್ಲಿ ಸಹ ಸರಿಯೆಂದು ಒಪ್ಪಿಕೊಂಡಿದ್ದಾನೆ. ಮುಂದೇನಾಗುತ್ತದೆ ಕಾದು ನೋಡಬೇಕಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *