ಮನೆಯ ಮುಂದೆ ಆಟವಾಡುವ ನಿಮ್ಮ ಮಕ್ಕಳ ಬಗ್ಗೆ ಎಚ್ಚರ
ನೆಲಮಂಗಲ, ನವೆಂಬರ್ 30: ಮನೆಯ ಆವರಣ ಅಥವಾ ರಸ್ತೆಗಳಲ್ಲಿ ಆಟವಾಡುವ ಮಕ್ಕಳ ಮೇಲೆ ವಾಹನ ಹರಿದ ಸಾಕಷ್ಟು ಘಟನೆಗಳು ಈ ಹಿಂದೆಯೂ ಬೆಳಕಿಗೆ ಬಂದಿದ್ದು, ಅಂಥದ್ದೇ ಭೀಕರ ಘಟನೆ ನೆಲಮಂಗಲದಲ್ಲೂ (ನೆಲಮಂಗಲ) ನಡೆದಿದೆ. ಮನೆಯ ಮುಂದೆ ರಸ್ತೆ ಮೇಲೆ ಆಟವಾಡುತ್ತಿದ್ದ ಮಗುವಿನ ಮೇಲೆ ಕಾರು ಹರಿದ (ಕಾರು ಮಗುವಿನ ಮೇಲೆ ಓಡುತ್ತದೆ) ಘಟನೆ ನೆಲಮಂಗಲದಲ್ಲಿ ನಡೆದಿದೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದ್ದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಸಿಟಿಯಲ್ಲಿ ಭಯಾನಕ ದೃಶ್ಯ ಸೆರೆ
ನೆಲಮಂಗಲದ ಟಿ ಬಿ ಸ್ಟಾಪ್ ಬಳಿಯ ಸುಭಾಷ್ ನಗರದ ತಿರುವಿನಲ್ಲಿ ವೇಗವಾಗಿ ಬಂದ ಮಾರುತಿ ಎಂಟ್ರಿಕಾ ಕಾರು ನಿಯಂತ್ರಣ ತಪ್ಪಿ ಮನೆಯ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ದಕ್ಷಿತ್ ಎಂಬ ಮಗುವಿನ ಮೇಲೆ ಹರಿದಿದ್ದು, ಸಿಸಿಟಿವಿಯಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಮಗುವಿನ ಚೀರಾಟದ ಮನೆಮಂದಿ ಮತ್ತು ನೆರೆಹೊರೆಯವರು ಕಂಗಾ ನಂತರ, ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಿಸಿದ್ದಾರೆ.
ಇದನ್ನೂ ಓದಿ 11 ತಿಂಗಳ ಮಗು ದುರಂತ ಅಂತ್ಯ: ಚನ್ನಪಟ್ಟಣದಲ್ಲೊಂದು ಮನಕಲಕುವ ಘಟನೆ
ಚಾಲಕ ಬೇಜವಬ್ದಾರಿಯಿಂದ ಕಾರು ಚಲಾಯಿಸಿದ್ದೇ ಈ ಘಟನೆಗೆ ಖಾರಣ ಎಂಬ ಆರೋಪ ಕೇಳಿ ಬಂದಿದೆ. ದಕ್ಷಿತ್ನ ತಲೆ, ಮುಖ ಮತ್ತು ಬೆನ್ನಿನ ಭಾಗಕ್ಕೆ ಗಾಯಗಳಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಚ್ಚರಿಯೆಂಬಂತೆ ಮಗು ಸಾವಿನ ಅಂಚಿನಿಂದ ಪಾರಾಗಿದೆ ಎಂದು ವೈದ್ಯರು ನಿರ್ಧರಿಸಿದ್ದಾರೆ. ಈ ಅಪಘಾತದ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.