ಒಳ ಉಡುಪು (Undergarment) ದೇಹವನ್ನು ಮುಚ್ಚುವುದು ಮಾತ್ರವಲ್ಲದೆ ಖಾಸಗಿ ಅಂಗಗಳ ಆರೋಗ್ಯವನ್ನು ಕಾಯ್ದುಕೊಳ್ಳುವ ವಸ್ತ್ರವೂ ಆಗಿದೆ. ಆದರೆ ಅನೇಕರು ಒಳ ಉಡುಪುಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ. ಹೌದು ಹೆಚ್ಚಿನವರು ಇದರ ಗುಣಮಟ್ಟದ ಬಗ್ಗೆ ಗಮನ ಹರಿಸುವುದಿಲ್ಲ, ಸ್ವಚ್ಛಗೊಳಿಸದೇ ಒಂದೇ ಅಂಡರ್‌ವೇರನ್ನು ಪದೇ ಪದೇ ಹಾಕಿಕೊಳ್ಳುತ್ತಾರೆ. ಹೀಗೆ ಒಂದಷ್ಟು ಬೇಜವಾಬ್ದಾರಿ ತೋರುತ್ತಾರೆ. ಈ ರೀತಿ ಮಾಡುವುದರಿಂದ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಳಉಡುಪಿನ ಸರಿಯಾದ ಆಯ್ಕೆ ಮತ್ತು ಸ್ವಚ್ಛತೆಯ ಬಗ್ಗೆ ಗಮನ ಹರಿಸುವಂತೆ, ಒಂದು ಒಳಉಡುಪನ್ನು ಎಷ್ಟು ಬಾರಿ ಧರಿಸಬೇಕು, ಇತರ ವಸ್ತುಗಳಿಗೆ ಇದ್ದಂತೆ ಇದಕ್ಕೂ ಎಕ್ಸ್‌ಪೈರಿ ಡೇಟ್ (Undergarment Expiry) ಇದ್ಯಾ ಎನ್ನುವುದನ್ನು ತಿಳಿಯುವುದು ಬಹಳ ಮುಖ್ಯವಾಗಿದೆ.
ಅಂಡರ್‌ವೇರ್‌ಗೂ ಇದ್ಯಾ ಎಕ್ಸ್‌ಪೈರಿ ಡೇಟ್?
NYU ಸ್ಕೂಲ್ ಆಫ್ ಮೆಡಿಸಿನ್‌ನ ಪ್ರಾಧ್ಯಾಪಕ ಫಿಲಿಪ್ ಟಿಯರ್ನೊ ಅವರ ಪ್ರಕಾರ, ಯಾವುದೇ ಒಳ ಉಡುಪುಗಳಿಗೆ ಮುಕ್ತಾಯ ದಿನಾಂಕವಿಲ್ಲ. ಆದರೆ ಅದನ್ನು ಕಾಲ ಕಾಲಕ್ಕೆ ಬದಲಾಯಿಸುವುದು ತುಂಬಾನೇ ಮುಖ್ಯ. ಒಳ ಉಡುಪು ಸಡಿಲವಾಗಿದ್ದರೆ ಅಥವಾ ಅದರಲ್ಲಿ ರಂಧ್ರಗಳು ಕಾಣಿಸಿಕೊಂಡರೆ ಅಂತಹ ಒಳ ಉಡುಪನ್ನು ಧರಿಸಬಾರದು. ಇದಲ್ಲದೆ, ನೀವು ನಿಮ್ಮ ಒಳ ಉಡುಪುಗಳನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿರಬೇಕು. ಒಮ್ಮೆ ಧರಿಸಿದ ಒಳ ಉಡುಪು ಉತ್ತಮ ಡಿಟರ್ಜೆಂಟ್ ಮತ್ತು ಡೆಟಾಲ್ ನೀರಿನಿಂದ ತೊಳೆಯಬೇಕು. ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಖಾಸಗಿ ಅಂಗಗಳಲ್ಲಿ ತುರಿಕೆ, ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕೊಳಕಾಗಿದ್ದರೆ, ನಿಮಗೆ ಸೋಂಕು ತಗಲಬಹುದು.
ಇದನ್ನೂ ಓದಿ: ಮಹಿಳೆಯರೇ ನಿಮ್ಮ ಒಳ ಉಡುಪುಗಳ ಮಧ್ಯದಲ್ಲಿ ಈ ಪಾಕೆಟ್ ಯಾಕಿರುತ್ತದೆ? ಇಂತಹ ಒಳ ಉಡುಪು ಖರೀದಿಸಿ
ಇದನ್ನೂ ಓದಿ
ಎಷ್ಟು ಸಮಯಗಳಿಗೊಮ್ಮೆ ಒಳ ಉಡುಪು ಬದಲಾಯಿಸುತ್ತಿರಬೇಕು?
ವರದಿಗಳ ನೀವು ಪ್ರತಿದಿನ ಒಳ ಉಡುಪುಗಳನ್ನು ಬದಲಾಯಿಸಬೇಕು. ಒಮ್ಮೆ ಧರಿಸಿದ ಒಳ ಉಡುಪನ್ನು ತೊಳೆಯದೆ ಧರಿಸಬಾರದು. ಅದೇ ರೀತಿ ಒಂದೇ ಅಂಡರ್‌ವೇರನ್ನು ದೀರ್ಘ ಕಾಲದ ವರೆಗೆ ಬಳಸಬಾರದು. ಏಕೆಂದರೆ ಇದರಿಂದ ಅಲರ್ಜಿ ಮತ್ತು ಸೋಂಕುಗಳು ಹರಡುವ ಸಾಧ್ಯತೆ ಇರುತ್ತದೆ. ತಜ್ಞರು ಹೇಳುವಂತೆ ಪ್ರತಿ 6 ತಿಂಗಳಿಗೊಮ್ಮೆ ಒಳ ಉಡುಪುಗಳನ್ನು ಬದಲಾಯಿಸಬೇಕು. ಅದು ತುಂಬಾ ಉತ್ತಮ ಸ್ಥಿತಿಯಲ್ಲಿದ್ದರೂ ಸಹ ಅದನ್ನು ಬದಲಾಯಿಸಲೇಬೇಕು.
ನಿಮ್ಮ ಒಳ ಉಡುಪು ತುಂಬಾ ಹಳೆಯದಾಗಿದ್ದರೆ ಅಥವಾ ಸಡಿಲವಾಗಿದ್ದರೆ, ಅದನ್ನು ಬಳಸದಿರುವುದು ಉತ್ತಮ. ಇದಲ್ಲದೆ, ನಿಮ್ಮ ಒಳ ಉಡುಪು ತೊಳೆದ ನಂತರವೂ ಅದರಿಂದ ಕೆಟ್ಟ ವಾಸನೆ ಬರುತ್ತಿದ್ದರೆ, ಅಂತಹ ಸಂದರ್ಭದಲ್ಲಿಯೂ ಅವುಗಳನ್ನು ಧರಿಸಬಾರದು. ಒಟ್ಟಾರೆಯಾಗಿ ದೇಹದ ಖಾಸಗಿ ಭಾಗದ ನೈರ್ಮಲ್ಯದ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಒಳಉಡುಪುಗಳನ್ನೇ ಧರಿಸಬೇಕು ಹಾಗೂ 6 ತಿಂಗಳ ನಂತರ ಆ ಉಡುಪನ್ನು ಧರಿಸಬಾರದು. ಜೊತೆಗೆ ರಂಧ್ರಗಳಿದ್ದರೂ ಅಂತಹ ಒಳಉಡುಪುಗಳನ್ನು ಧರಿಸಬಾರದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ