Headlines

ಮನೆಯ ಮೇಲೆ ಹನುಮಧ್ವಜ ಯಾಕೆ ಹಾಕಬೇಕು ಗೊತ್ತೇ? ಇಲ್ಲಿದೆ ಅಧ್ಯಾತ್ಮಿಕ ಕಾರಣ

ಮನೆಯ ಮೇಲೆ ಹನುಮಧ್ವಜ ಯಾಕೆ ಹಾಕಬೇಕು ಗೊತ್ತೇ? ಇಲ್ಲಿದೆ ಅಧ್ಯಾತ್ಮಿಕ ಕಾರಣ


ನಂಬಿಕೆಯು ಮನುಷ್ಯನ ಜೀವನದಲ್ಲಿ ಧನಾತ್ಮಕ ಅದೃಷ್ಟ ಮತ್ತು ಭಗವಂತನ ಕೃಪೆಯನ್ನು ತರುತ್ತದೆ. ನಮ್ಮ ಮನೆ, ವಾಹನಗಳು, ಆಚಾರ-ವಿಚಾರಗಳು, ಕುಟುಂಬ ಮತ್ತು ವೃತ್ತಿ ಹೀಗೆ ಎಲ್ಲದರಲ್ಲೂ ನಂಬಿಕೆ ಕಾಣುತ್ತದೆ. ಮನೆಯ ಮೇಲೆ ಹನುಮಧ್ವಜವನ್ನು ಇಡುವುದು ಒಂದು ಪ್ರಮುಖ ನಂಬಿಕೆಯಾಗಿದೆ. ಇದು ಕಟ್ಟಿದ ಮನೆ ಇರಲಿ, ಬಾಡಿಗೆ ಮನೆ ಇರಲಿ, ಅಥವಾ ಅಪಾರ್ಟ್‌ಮೆಂಟ್ ಆಗಿರಲಿ, ಹನುಮಧ್ವಜವು ಆ ಮನೆಗೆ ಸರ್ವಶ್ರೇಷ್ಠ ಶುಭವನ್ನು ತರುತ್ತದೆ. ತ್ರಿಕಾಲದಲ್ಲಿಯೂ, ವಿಶೇಷವಾಗಿ ಬ್ರಾಹ್ಮೀ ಕಾಲ ಮತ್ತು ದೈವಿಕ ಕಾಲದಲ್ಲಿ, ದೇವರ ಲಹರಿಗಳು ಭೂಮಿಯ ಮೇಲೆ ಸಂಚರಿಸುತ್ತವೆ. ಈ ಸಮಯದಲ್ಲಿ ಮನೆಯಲ್ಲಿ ಹನುಮಧ್ವಜ ಇದ್ದರೆ, ಅದು ಮನೆಗೆ ಪರಿಪೂರ್ಣ ರಕ್ಷಣೆಯನ್ನು ನೀಡುತ್ತದೆ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನ ರಥಕ್ಕೆ ಹನುಮನ ಬಾವುಟವಿದ್ದ ಕಾರಣ ಯುದ್ಧದ ಅಂತ್ಯದವರೆಗೂ ರಥವು ಯಾವುದೇ ಹಾನಿಯಾಗದೆ ಉಳಿಯಿತು ಎಂಬುದಕ್ಕೆ ಒಂದು ಉದಾಹರಣೆಯಾಗಿ ಹೇಳಬಹುದು. ಧರ್ಮನಿರತರಿಗೆ ಹನುಮನ ರಕ್ಷಣೆ ಸದಾ ಇರುತ್ತದೆ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಕಾರ್ಯಕ್ರಮವನ್ನು ಡಾ ಬಸವರಾಜ ಗುರೂಜಿ ವಿವರಿಸಿದ್ದಾರೆ.



Source link

Leave a Reply

Your email address will not be published. Required fields are marked *