Headlines

ಮನೆಗಳ್ಳತನ ತಡೆಗೆ ಎಐ ಆಯ್ತು, ಈಗ ಮಹಿಳೆಯರು ಮಕ್ಕಳ ರಕ್ಷಣೆಗೆ ಸುರಕ್ಷಾ ಆ್ಯಪ್: ತುಮಕೂರಿನಲ್ಲಿ ವಿಭಿನ್ನ ಪ್ರಯತ್ನ

ಮನೆಗಳ್ಳತನ ತಡೆಗೆ ಎಐ ಆಯ್ತು, ಈಗ ಮಹಿಳೆಯರು ಮಕ್ಕಳ ರಕ್ಷಣೆಗೆ ಸುರಕ್ಷಾ ಆ್ಯಪ್: ತುಮಕೂರಿನಲ್ಲಿ ವಿಭಿನ್ನ ಪ್ರಯತ್ನ


ತುಮಕೂರು, ಡಿಸೆಂಬರ್ 1: ತುಮಕೂರಿನಲ್ಲಿ (ತುಮಕೂರು) ಮಹಿಳೆಯರ ಸುರಕ್ಷತೆಯನ್ನು ಇನ್ನಷ್ಟು ಖಚಿತಪಡಿಸಿಕೊಳ್ಳಲು ಮುಂದಾಗಿದ್ದಾರೆ. ಬೆಂಗಳೂರಿನ ನಂತರ ಇದೀಗ ತುಮಕೂರಿನಲ್ಲೂ ಸುರಕ್ಷಾ ಆಯಪ್ (SOS) ಆಯಪ್ ಅಧಿಕೃತವಾಗಿ ಪ್ರಾರಂಭಿಸಿದ್ದು, ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಬಳಸಬಹುದಾದ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯು ರೂಪುಗೊಂಡಿದೆ. ಕೆಲಸಕ್ಕೆ ತೆರಳುವ ಮಹಿಳೆಯರು, ಕಾಲೇಜು ಯುವತಿಯರು ಹಾಗೂ ನಿರ್ಜನ ಪ್ರದೇಶಗಳಲ್ಲಿ ಸಂಚರಿಸುವ ಸಂದರ್ಭ ಎದುರಾಗುವ ಆತಂಕ, ಅಸಹಜ ಘಟನೆಗಳು ಮತ್ತು ಪುಂಡರ ಕಾಟಕ್ಕೆ ಈಗ ಭದ್ರತಾ ತಾಂತ್ರಿಕ ಅಸ್ತ್ರವಾಗಿದೆ.

ಸುರಕ್ಷಾ ಆಯಪ್ ಹೇಗೆ ಕೆಲಸ ಮಾಡುತ್ತೆ?

ಯಾವುದೇ ತುರ್ತು ಸಂದರ್ಭಗಳಲ್ಲಿ ಮಹಿಳೆಯರು ಸುರಕ್ಷಾ ಆಯಪ್ ಪ್ಯಾನಿಕ್ ಬಟನ್ ಒತ್ತಿದರೆ ತಕ್ಷಣವೇ ಎಚ್ಚರಿಕೆ ಸಂದೇಶ ಬರುತ್ತದೆ. ಇದು ಸ್ಮಾರ್ಟ್ ಸಿಟಿ ಕಚೇರಿ ಮುಖಾಂತರವಾಗಿ ಕಂಟ್ರೋಲ್ ರೂಮ್‌ಗೆ ತಲುಪುತ್ತದೆ. ಆ ಬಳಿಕ ಜಿಪಿಎಸ್ ಆಧಾರದ ಮೇಲೆ ಮಹಿಳೆಯಿರುವ ಸ್ಥಳವನ್ನು ನಿಖರವಾಗಿ ಪತ್ತೆಹಚ್ಚಿ, ಅತೀ ಸಮೀಪದ ಗಸ್ತು ಸಿಬ್ಬಂದಿಗೆ ಮಾಹಿತಿ ಇದೆ. ಅವರು ತಕ್ಷಣ ಸ್ಥಳಕ್ಕೆ ನೆರವಿಗೆ ಧಾವಿಸುತ್ತಾರೆ.

ಜಿಲ್ಲೆಯಾದ್ಯಂತ ಮಹಿಳೆಯರ ರಕ್ಷಣೆಗಾಗಿ ಈ ಆಯಪ್ ಅಭಿವೃದ್ಧಿ ಪಡಿಸಲಾಗಿದೆ. SOS ಆ್ಯಪ್‌ನಲ್ಲಿ ಪ್ಯಾನಿಕ್ ಬಟನ್ ಒತ್ತುವ ಮೂಲಕ ತ್ವರಿತ ಸ್ಪಂದನೆ ನೀಡಲು ಸ್ಪಾರ್ಟ್ ಸಿಟಿ ಕಚೇರಿಯಲ್ಲಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮಹಿಳಾ ಭದ್ರತೆಯನ್ನು ಪ್ರಾಮುಖ್ಯವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರದ ಯೋಜನೆಡಿ ಸ್ಪಾರ್ಟ್ ಸಿಟಿ ಮೂಲಕ ಈ ಆಯಪ್‌ಗೆ ಗೃಹ ನಿರ್ವಾಹಕರು ನೀಡಿ ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲಾಗಿದೆ. ತುಮಕೂರು ನಗರದಲ್ಲಿ ರಾತ್ರಿ ವೇಳೆ, ಒಂಟಿ ರಸ್ತೆಗಳಲ್ಲಿ ಅಥವಾ ಅಸುರಕ್ಷಿತ ಪರಿಸ್ಥಿತಿಯಲ್ಲಿ ಸಂಚರಿಸುವ ಮಹಿಳೆಯರಿಗೆ ಈಗ SOS ಆಯಪ್ ನೆರವಾಗಲಿದೆ.

ಇದನ್ನೂ ಓದಿ: ಮನೆಗಳ್ಳತನ ತಡೆಗೆ ತುಮಕೂರು ಪೊಲೀಸರ ಮಾಸ್ಟರ್ ಪ್ಲ್ಯಾನ್: ತಂತ್ರಜ್ಞಾನ ಬಳಸಿ ಹೊಸ ವ್ಯವಸ್ಥೆ ಜಾರಿ

ಒಟ್ಟಾರೆ ತುಮಕೂರು ಪೊಲೀಸರು ಈ ಹೊಸ ಪ್ರಯತ್ನಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಮಹಿಳೆಯರ ರಕ್ಷಣೆಗೆ ಈ ಆಯಪ್ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಗಮನಿಸಬೇಕಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *