ಮೈಸೂರಲ್ಲಿ ಹುಲಿ ಕಾಟ ಆಯ್ತು, ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಕಾಟ

ಮೈಸೂರಲ್ಲಿ ಹುಲಿ ಕಾಟ ಆಯ್ತು, ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಕಾಟ


ಮೈಸೂರಲ್ಲಿ ಹುಲಿ ಕಾಟ ಆಯ್ತು, ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಕಾಟ

ಚಿಕ್ಕಬಳ್ಳಾಪುರ, ಡಿಸೆಂಬರ್ 1: ಕಳೆದ ಹಲವು ದಿನಗಳಿಂದ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹುಲಿ, ಚಿರತೆ (ಚಿರತೆ) ದಾಳಿಗಳು ಹೆಚ್ಚಿವೆ. ಅದರಂತೆಯೇ ಚಿಕ್ಕಬಳ್ಳಾಪುರ ನಗರ ಹೊರವಲಯದ ಬಳಿ ಚಿರತೆಗಳ ಹಿಂದೆ ಕಾಣಿಸಿಕೊಂಡಿದೆ. ಈ ಚಿರತೆಗಳು ಗ್ರಾಮದಲ್ಲಿನ ಹಸು, ನಾಯಿಗಳನ್ನು ಬೇಟೆಯಾಡುತ್ತಿದ್ದರೆ, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಸಾಕು ಪ್ರಾಣಿಗಳನ್ನು ತಿಂದು ತೇಗುತ್ತಿರುವ ಚಿರತೆಗಳು

ನಂದಿಬೆಟ್ಟ, ಸ್ಕಂದಗಿರಿ ಸೇರಿ ಹಲವು ಬೆಟ್ಟಗುಡ್ಡಗಳಿಂದ ಕೂಡಿರುವ ಈ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ಭಾನುವಾರ (ನ.30) ತಿಪ್ಪೇನಹಳ್ಳಿ ಗ್ರಾಮದ ಕಲ್ಲು ಬಂಡೆಗಳ ಮೇಲೆ ಚಿರತೆಗಳು ಕಾಣಿಸುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸುಮಾರು ದಿನಗಳಿಂದ ಚಿರತೆಗಳು ಹಿಂಡು ಬೀಡುಬಿಟ್ಟಿದ್ದು, ಪ್ರತಿದಿನ ಒಂದೊಂದು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಕಳೆದ ಕೆಲವು ದಿನಗಳ ಹಿಂದೆ ಮುದ್ದೇನಹಳ್ಳಿಯ ವಿಟಿಯು ಕಾಲೇಜು ಕ್ಯಾಂಪಸ್, ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆಗಳು ಕಾಣಿಸಿವೆ ಎಂದು ತಿಳಿದು ಬಂದಿದೆ. ಚಿರತೆಗಳು ನಗರದ ಹಲವೆಡೆ ನಾಯಿಗಳು, ಹಸು, ನವಿಲುಗಳನ್ನು ಬೇಟೆಯಾಡಿದ್ದು, ಇದರಿಂದ ರೈತರು ತಮ್ಮ ತೋಟಗಳಿಗೆ ಹೋಗಲೂ ಹಿಂದೇಟು ಹಾಕುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆಗಳು ಮನುಷ್ಯರನ್ನು ಕಂಡರೆ ಭಯ ಬೀಳುತ್ತವೆ. ಯಾರೂ ಹೆದರುವ ಅವಶ್ಯಕತೆಯಿಲ್ಲ. ಚಿರತೆಗಳು ಏನು ಮಾಡಬೇಡಿ, ನಮಗೆ ತಿಳಿಸಿದರೆ ಅವರಿಗೆ ತಿಳಿಸಿ.

ಇದನ್ನೂ ಓದಿ ಚಿಕ್ಕಮಗಳೂರು: ಮಕ್ಕಳ ಮೇಲೆ ದಾಳಿ ಮಾಡಿದ್ದ ಚಿರತೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿ

ಮಕ್ಕಳ ಮೇಲೆ ಚಿರತೆ ದಾಳಿ

ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಸೇರಿದಂತೆ ಹಲವು ಜಾಗಗಳಲ್ಲಿ ಚಿರತೆಗಳು ಕಾಣಸಿಗುತ್ತಿವೆ. ಚಿಕ್ಕಮಗಳೂರಿನ ತರೀಕೆರೆ ಅರಣ್ಯ ಪ್ರದೇಶದಲ್ಲಿ ಚಿರತೆ ಮಕ್ಕಳ ಮೇಲೆ ದಾಳಿ ಮಾಡಿತ್ತು. ಬಾಲಕಿಯನ್ನು ಬಲಿ ಪಡೆದು ಮತ್ತೊಬ್ಬ ಬಾಲಕನ ಮೇಲೆ ದಾಳಿ ಚಿರತೆಯನ್ನು ಜೀವಂತ ಅಥವಾ ಜೀವ ರಹಿತವಾಗಿ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿತ್ತು. ಈ ವೇಳೆ ಸೆರೆ ಹಿಡಿಯಲು ತೆರಳಿದ್ದ ಸಿಬ್ಬಂದಿ ಮೇಲೆ ಚಿರತೆ ದಾಳಿಗೆ ಯತ್ನಿಸಿದ್ದು, ಗುಂಡು ಹಾರಿಸಿ ಚಿರತೆಯನ್ನು ಹತ್ಯೆ ಮಾಡಲಾಗಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 8:44 am, ಸೋಮ, 1 ಡಿಸೆಂಬರ್ 25



Source link

Leave a Reply

Your email address will not be published. Required fields are marked *