16

Image Credit : Gemini
ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್
ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ಬಜೆಟ್ ಫ್ರೆಂಡ್ಲಿ ಆಫರ್ ನೀಡಿದೆ. ಸೆಕೆಂಡರಿ ಸಿಮ್ ಆಕ್ಟಿವ್ ಆಗಿಟ್ಟುಕೊಳ್ಳಲು ಈ ಪ್ಲಾನ್ ಜೇಬಿಗೆ ಹಿತಕರವಾಗಿಲಿದೆ. ಹಲವರಿಗೆ ಸೆಕೆಂಡರಿ ಸಿಮ್ ಆಕ್ಟಿವ್ ಮಾಡಿಟ್ಟುಕೊಳ್ಳಲು ಪ್ರತಿ ತಿಂಗಳು ರೀಚಾರ್ಜ್ ಮಾಡುವುದು ದೊಡ್ಡ ಹೊರೆಯಾಗಿದೆ. ಈ ಸಮಸ್ಯೆಯನ್ನು ಕೊನೆಗೊಳಿಸಲು ಏರ್‌ಟೆಲ್ 365 ದಿನಗಳ ವ್ಯಾಲಿಡಿಟಿಯೊಂದಿಗೆ ಕೈಗೆಟುಕುವ ಪ್ಲಾನ್‌ಗಳನ್ನು ನೀಡುತ್ತಿದೆ.
26
Image Credit : Gemini
TRAI ನಿಯಮ
ಇತ್ತೀಚೆಗೆ TRAI ನಿಯಮಗಳ ಪ್ರಕಾರ, ಏರ್‌ಟೆಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೀರ್ಘಾವಧಿಯ ಯೋಜನೆಗಳನ್ನು ನೀಡಲು ಸೂಚಿಸಲಾಗಿದೆ. ಅದರಂತೆ ಏರ್‌ಟೆಲ್ ಎರಡು ಪ್ರಮುಖ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಯಾರಿಗೆ ಈ ಪ್ಲಾನ್ ಲಾಭ ಅಂತ ನೋಡೋದಾದ್ರೆ
* ಇನ್‌ಕಮಿಂಗ್ ಮತ್ತು ಔಟ್ ಗೋಯಿಂಗ್ ಕಾಲ್‌ಗಳಿಗೆ ಮಾತ್ರ ಸಿಮ್ ಬಳಸುವ ಗ್ರಾಹಕರಿಕೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ
* ಹೆಚ್ಚು ಡೇಟಾ ಬಳಸದ ಗ್ರಾಹಕರು
* ಒಮ್ಮೆ ರೀಚಾರ್ಜ್ ಮಾಡಿಸಿದ್ರೆ ಒಂದು ವರ್ಷ ಚಿಂತೆ ಇರಲ್ಲ
36
Image Credit : Gemini
Airtel Rs.1849 Recharge Plan
ಏರ್‌ಟೆಲ್ ರೂ 1849 ರೀಚಾರ್ಜ್ ಪ್ಲಾನ್. ಇದು ಅತ್ಯಂತ ಕಡಿಮೆ ಬೆಲೆಯ ವರ್ಷದ ಪ್ಲಾನ್ ಆಗಿದೆ. ಈ ಪ್ಲಾನ್ ಯಾವೆಲ್ಲಾ ಪ್ರಯೋಜನಗಳನ್ನು ಹೊಂದಿದೆ ಎಂಬುದರ ಮಾಹಿತಿ ಇಲ್ಲಿದೆ
ವ್ಯಾಲಿಡಿಟಿ: 365 ದಿನ (1 ವರ್ಷ)
- ಕರೆ: ಯಾವುದೇ ನೆಟ್‌ವರ್ಕ್‌ಗೆ ಅನ್‌ಲಿಮಿಟಿಟೆಡ್ ಕಾಲ್ ಮಾಡಬಹುದು. ರೋಮಿಂಗ್ ಶುಲ್ಕಗಳಿಲ್ಲ.
- SMS: ಒಟ್ಟು 3,600 ಉಚಿತ SMS.
- ಹೆಚ್ಚುವರಿ ಆಫರ್: ಉಚಿತ ಹಲೋ ಟ್ಯೂನ್ಸ್
ಈ ಯೋಜನೆಯಲ್ಲಿ ಯಾವುದೇ ‘ಡೇಟಾ’ ಸೇರಿಸಲಾಗಿಲ್ಲ. ನಿಮಗೆ ಇಂಟರ್ನೆಟ್ ಸೇವೆ ಅಗತ್ಯವಿದ್ದರೆ, ನೀವು ಪ್ರತ್ಯೇಕ ಡೇಟಾ ಆಡ್-ಆನ್ ಅನ್ನು ಖರೀದಿಸಬಹುದು. ಈ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿದೆ.
46
Image Credit : x
Airtel Rs.2249 Recharge Plan
ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಸ್ವಲ್ಪ ಡೇಟಾ ಬೇಕು ಎಂದು ಬಯಸುವ ಗ್ರಾಹಕರಿಗೆ ಈ ಪ್ಲಾನ್ ಒಳ್ಳೆಯ ಆಯ್ಕೆಯಾಗಲಿದೆ. ಕೆಲವರು ವಾಟ್ಸಪ್ ಮಾತ್ರ ಬಳಕೆ ಮಾಡುತ್ತಿರುತ್ತಾರೆ. ಈ ವರ್ಗದ ಬಳಕೆದಾರರು ಈ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು.
- ವ್ಯಾಲಿಡಿಟಿ: 365 ದಿನಗಳು.
- ಕರೆಗಳು: ಅನಿಯಮಿತ ಉಚಿತ ಕರೆಗಳು.
- ಡೇಟಾ: ಈ ಯೋಜನೆಯು ಒಟ್ಟು 30GB ಹೈ-ಸ್ಪೀಡ್ ಡೇಟಾ ನೀಡುತ್ತದೆ. ಈ ಡೇಟಾವನ್ನು ವರ್ಷದ ಯಾವುದೇ ಸಮಯದಲ್ಲಿ ಬಳಸಬಹುದು.
- SMS: 3,600 ಉಚಿತ SMS.
- ಹೆಚ್ಚುವರಿ ಕೊಡುಗೆ: ಉಚಿತ ಹಲೋ ಟ್ಯೂನ್ಸ್.
56
Image Credit : pinterest
ಭಾರತೀಯ ದೂರಸಂಪರ್ಕ ಉದ್ಯಮ
TRAI ಬಿಡುಗಡೆ ಮಾಡಿದ ಅಕ್ಟೋಬರ್ 2025 ರ ವರದಿಯ ಪ್ರಕಾರ, ಭಾರತದ ದೂರಸಂಪರ್ಕ ಮಾರುಕಟ್ಟೆ ಬೆಳೆಯುತ್ತಲೇ ಇದೆ. ಭಾರತದಲ್ಲಿ ಒಟ್ಟು ದೂರವಾಣಿ ಚಂದಾದಾರರ ಸಂಖ್ಯೆ 123.1 ಕೋಟಿ ತಲುಪಿದೆ. ಇವರಲ್ಲಿ 1.184 ಬಿಲಿಯನ್ ಜನರು ಮೊಬೈಲ್ ಬಳಕೆದಾರರು. ಪ್ಯಾನ್-ಇಂಡಿಯಾ ಸಂಪರ್ಕವು ವಿಸ್ತರಿಸುತ್ತಿರುವುದರಿಂದ ಮೊಬೈಲ್ ಬಳಕೆದಾರರ ಸಂಖ್ಯೆಯು 0.19% ರಷ್ಟು ಹೆಚ್ಚಾಗಿದೆ ಎಂಬುದು ಗಮನಾರ್ಹ.
ಇದನ್ನೂ ಓದಿ: December Price: ವರ್ಷದ ಕೊನೆ ತಿಂಗಳ ಮೊದಲ ದಿನದಂದು LPG ಸಿಲಿಂಡರ್ ದರದಲ್ಲಿ ಬದಲಾವಣೆ
66
Image Credit : Gemini
ಏರ್‌ಟೆಲ್
ನೀವು ನಿಮ್ಮ ಏರ್‌ಟೆಲ್ ಸಿಮ್ ಅನ್ನು ಮುಖ್ಯವಾಗಿ ಕೇವಲ ಕರೆಗಳಿಗೆ ಬಳಸುತ್ತಿದ್ದರೆ, ರೂ. 1849 ಯೋಜನೆ ಉತ್ತಮ ಆಯ್ಕೆಯಾಗಿದೆ. ತಿಂಗಳಿಗೆ ಕೇವಲ ರೂ. 154 ನಲ್ಲಿ ನಿಮ್ಮ ಸಿಮ್ ಇಡೀ ವರ್ಷ ಸಕ್ರಿಯವಾಗಿರುತ್ತದೆ. ಹಾಗಾಗಿ ಈ ಎರಡು ಆಫರ್‌ಗಳು ಕೀ ಪ್ಯಾಡ್ ಬಳಕೆದಾರರ ಜೇಬಿಗೆ ಹಿತಕರವಾಗಲಿದೆ.
ಇದನ್ನೂ ಓದಿ: 3 ಸರ್ಕಾರಿ ವಿಮಾ ಕಂಪನಿ ವಿಲೀನಕ್ಕೆ ಕೇಂದ್ರ ಚಿಂತನೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.