ಆಪ್ಟಿಕಲ್ ಇಲ್ಯೂಷನ್ ಚಿತ್ರ ಕ್ರೆಡಿಟ್ ಮೂಲ: ರೆಡ್ಡಿಟ್
ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಭ್ರಮೆ) ಹಾಗೂ ಬ್ರೈನ್ ಟೀಸರ್ನಂತಹ (ಮೆದುಳಿನ ಟೀಸರ್) ಒಗಟಿನ ಚಿತ್ರಗಳನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಆದರೆ ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಎಷ್ಟಿದೆ ಇಲ್ಲೊಂದು ಕಠಿಣ ಸವಾಲು ಇದೆ. ಬಂಡೆಗಳೇ ತುಂಬಿ ಕೊಂಡಿರುವ ಈ ಬೆಟ್ಟದ ಮೇಲೆ ಕುರಿಯೊಂದು ಅಡಗಿ ಕುಳಿತಿದೆ. ನೀವು ಒಗಟು ಬಿಡಿಸೋದ್ರಲ್ಲಿ ಪಂಟರಾಗಿದ್ರೆ ಕೇವಲ ಹತ್ತರಿಂದ ಮೂವತ್ತು ಸೆಕೆಂಡುಗಳ ಒಳಗೆ ಈ ಪ್ರಾಣಿಯನ್ನು ಪತ್ತೆ ಹಚ್ಚಬೇಕು. ಈ ಒಗಟು ಬಿಡಿಸಲು ನೀವು ರೆಡಿ ಇದ್ದೀರಾ.
ಈ ಚಿತ್ರದಲ್ಲಿ ಏನಿದೆ ಎಂದು ಒಮ್ಮೆ ನೋಡಿ

ಫೈಂಡ್ ದಿ ಸ್ನೈಪರ್ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ತುಂಬಾನೇ ಟ್ರಿಕ್ಕಿಯಾಗಿದೆ. ಈ ಚಿತ್ರದಲ್ಲಿ ದೊಡ್ಡದಾದ ಕಲ್ಲು ಬಂಡೆಗಳಿಂದ ಆವೃತ್ತವಾದ ಬೆಟ್ಟದ ಇಳಿಜಾರನ್ನು ನೋಡಬಹುದು. ಆದರೆ ಈ ಬೆಟ್ಟದಲ್ಲಿ ದೊಡ್ಡ ಕೊಂಬಿನ ಕುರಿಯೊಂದು ಅಡಗಿದೆ. ಅದನ್ನು ಗುರುತಿಸುವ ಸವಾಲು ನಿಮ್ಮ ಮುಂದಿದೆ. 10 ರಿಂದ 30 ಸೆಕೆಂಡುಗಳಲ್ಲಿ ನೀವು ಕುರಿಯನ್ನು ಗುರುತಿಸಿದರೆ ನಿಮ್ಮ ಮೆದುಳು ಚುರುಕಾಗಿದೆ ಎಂದರ್ಥ.
ಪೋಸ್ಟ್ ವೈರಲ್ ಇಲ್ಲಿದೆ ನೋಡಿ
ಫೈಂಡ್ ದಿ ಸ್ನೈಪರ್ನಲ್ಲಿ ಬಿಗಾರ್ನ್ ಶೀಪ್ ಬೈಯು/ಚಾಲೋನ್9 ಅನ್ನು ಹುಡುಕಿ
ಇದನ್ನೂ ಓದಿ:ನಿಮ್ಮ ಕಣ್ಣಿಗೊಂದು ಸವಾಲ್; ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಬಲ್ಲಿರಾ
ಕುರಿಯನ್ನು ಹುಡುಕಲು ಸಾಧ್ಯವಾಯಿತೇ?
ಬಂಡೆ ಕಲ್ಲಿನಿಂದ ಆವೃತ್ತವಾದ ಈ ಭೂಪ್ರದೇಶದಲ್ಲಿ ಜಾಣತನದಿಂದ ಅಡಗಿರುವ ದೊಡ್ಡ ಕೊಂಬಿನ ಕುರಿಯನ್ನು ಗುರುತಿಸುವುದು ಕಷ್ಟಕರ. ಈ ಕುರಿಯ ಮೈ ಬಣ್ಣವು ಈ ಪ್ರದೇಶದಲ್ಲಿ ಬೆರೆತು ಹೋಗಿದೆ. ಕಣ್ಣು ಅಗಲಿಸಿ ಎಷ್ಟು ಹುಡುಕಿದರೂ ಕುರಿ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ, ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಈ ಚಿತ್ರದಲ್ಲಿ ಅಡಗಿರುವ ಕುರಿಯನ್ನು ನಾವು ಈ ಕೆಳಗಿನ ಚಿತ್ರವನ್ನು ಗುರುತಿಸಿ ನಿಮಗೆ ಈ ಪ್ರಾಣಿ ಕಾಣುವಂತೆ ಮಾಡಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ