Headlines

ನೀತಾ ಅಂಬಾನಿ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಸಿಬ್ಬಂದಿ

ನೀತಾ ಅಂಬಾನಿ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಸಿಬ್ಬಂದಿ


ನೀತಾ ಅಂಬಾನಿ (ನೀತಾ ಅಂಬಾನಿ) ದೇಶದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರು, ಅದರೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿ ಅವರು ಮುಂದು, ತಮ್ಮ ಮನೆಯವರು ಹಾಗೂ ಕಂಪನಿಯ ಕೆಲಸಗಾರರನ್ನು ಮನೆಯವರಂತೆ ನಡೆಸಿಕೊಳ್ಳುತ್ತಾರೆ. ಅಂಬಾನಿ ಮನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಅವರ ಸಿಬ್ಬಂದಿಗಳಿಗೆ ಮೊದಲು ಆಹ್ವಾನ. ಈಗ ಇಲ್ಲೊಂದು ವೈರಲ್ ಆಗಿರುವ ಪೋಸ್ಟ್ ಕೂಡ ಅಂತಹದೇ. ರಿಲಯನ್ಸ್ ಫೌಂಡೇಶನ್ ನ ಅಧ್ಯಕ್ಷರಾಗಿರುವ ನೀತಾ ಅಂಬಾನಿ ಸಿಬ್ಬಂದಿಯೊಬ್ಬರ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ಈಗ ಈ ಪೋಸ್ಟ್ ಎಲ್ಲ ಕಡೆ ವೈರಲ್ ಆಗುತ್ತಿದೆ. ಈ ಪೋಸ್ಟ್ ಅನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಹಿಂದೆಯೂ ನೀತಾ ಅಂಬಾನಿ ಇಂತಹ ವಿಚಾರದಲ್ಲಿ ಭಾರೀ ಸುದ್ದಿಯಾಗಿದ್ದರು.

ಇನ್ಸ್ಟಾಗ್ರಾಮ್ನಲ್ಲಿ ಅಂಬಾನಿ ಫ್ಯಾಮಿಲಿಯ ಅಭಿಮಾನಿಗಳು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ, ನೀತಾ ಅಂಬಾನಿ ಮತ್ತು ಅವರ ಸಿಬ್ಬಂದಿ ಸದಸ್ಯರು ಚಾಕೊಲೇಟ್ ಕೇಕ್ ಇರಿಸಲಾದ ಮೇಜಿನ ಹಿಂದೆ ನಿಂತಿರುವದನ್ನು ನೋಡಬಹುದು. ಸಿಬ್ಬಂದಿ ನೀತಾ ಅಂಬಾನಿಯ ಸಮ್ಮುಖದಲ್ಲೇ ಕೇಕ್ ಕಟ್ ಮಾಡುತ್ತಾರೆ. ಈ ವೇಳೆ ನೀತಾ ಅಂಬಾನಿ ಸಿಬ್ಬಂದಿಯ ಖುಷಿಯನ್ನು ಕಣ್ತುಂಬಿಕೊಳ್ಳುವುದು ಈ ವಿಡಿಯೋದಲ್ಲಿ ನೋಡಬಹುದು. ಈ ಪೋಸ್ಟ್ ಅನ್ನು ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಿಬ್ಬಂದಿಗೂ ಟ್ಯಾಗ್ ಮಾಡಲಾಗಿದೆ. ಪೋಸ್ಟ್ ನೋಡಿ ಸಿಬ್ಬಂದಿ ಹೀಗೆ ಕಮೆಂಟ್ ಮಾಡಿದ್ದಾರೆ. “ನನಗೆ ತುಂಬಾ ಸಂತೋಷವಾಗಿದೆ. ನನ್ನ ಹುಟ್ಟುಹಬ್ಬದ ದಿನ ಮೇಡಂ ಬಂದಿರುವುದಕ್ಕೆ ಧನ್ಯವಾದಗಳು ಮೇಡಂ, ಈ ದಿನವನ್ನು ತುಂಬಾ ವಿಶೇಷ ಮಾಡಿದ್ದಕ್ಕೆ ಧನ್ಯವಾದಗಳು” ಎಂದು ಹೇಳಿದರು.

ಇದನ್ನೂ ಓದಿ: ಮಕ್ಕಳಿಗಾಗಿ ಬಸ್ಸಿನಲ್ಲಿ ಆಟಿಕೆ ಸ್ಟೀರಿಂಗ್ ಅಳವಡಿಸಿದ ಬಸ್ ಚಾಲಕ

ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ಈ ಹಿಂದೆಯೂ ಅವರು ತಮ್ಮ ಸಿಬ್ಬಂದಿಗಳು ಹಾಗೂ ಅವರ ಹುಟ್ಟುಹಬ್ಬವನ್ನು ಸಿಬ್ಬಂದಿಗಳೊಂದಿಗೆ ಆಚರಿಸಿಕೊಂಡ ಎಷ್ಟೋ ವಿಡಿಯೋಗಳು ವೈರಲ್ ಆಗಿವೆ. ಇನ್ನು ಈ ವಿಡಿಯೋವನ್ನು ನೋಡಿ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ. ನೀತಾ ಅಂಬಾನಿ ತಮ್ಮ ಸಿಬ್ಬಂದಿಯನ್ನು ತುಂಬಾ ಗೌರವಿಸುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಅವರು ತುಂಬ ಆತ್ಮೀಯವಾಗಿ ಕಂಪನಿಯನ್ನು ಕಾಣುತ್ತಾರೆ. ಯಾವುದೇ ಸಂಭ್ರಮ ಇದ್ರು ಅವರಿಗೆ ಹೆಚ್ಚು ಪ್ರಾಮುಖ್ಯತೆ ಇದೆ ಎಂದು ಕಮೆಂಟ್ ಮಾಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:17 am, ಸೋಮ, 1 ಡಿಸೆಂಬರ್ 25





Source link

Leave a Reply

Your email address will not be published. Required fields are marked *