5 ಪಾಲಿಕೆಗಳಿಂದ ಜಿಬಿಎ ಆರ್ಥಿಕ ದಿವಾಳಿ! ಅಂಕಿಅಂಶ ಸಹಿತ ಕಾರಣ ಬಿಚ್ಚಿಟ್ಟ ಬಿಜೆಪಿ ಮುಖಂಡ, ಸಿಎಂಗೆ ಪತ್ರ

5 ಪಾಲಿಕೆಗಳಿಂದ ಜಿಬಿಎ ಆರ್ಥಿಕ ದಿವಾಳಿ! ಅಂಕಿಅಂಶ ಸಹಿತ ಕಾರಣ ಬಿಚ್ಚಿಟ್ಟ ಬಿಜೆಪಿ ಮುಖಂಡ, ಸಿಎಂಗೆ ಪತ್ರ


ಜಿಬಿಎ, ಬಿಜೆಪಿ ಮುಖಂಡ ಬರೆದ ಪತ್ರದ ಪ್ರತಿ

ಬೆಂಗಳೂರು, ಡಿಸೆಂಬರ್ 1: ಐದು ಮಹಾನಗರ ಪಾಲಿಕೆಗಳ ರಚನೆಯಿಂದಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಿವಾಳಿಯಾಗುವ ಸಾಧ್ಯತೆ ಇದೆ ಎಂದು ಬೆಂಗಳೂರಿನ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಜೊತೆಗೆ, ಯಾವ ರೀತಿಯಲ್ಲಿ ಜಿಬಿಎಗೆ ನಷ್ಟ ಆಗಲಿದೆ ಎಂಬ ಅಂಕಿಅಂಶ ಸಮೇತ ಮಾಹಿತಿ ನೀಡಿ ವಿವರಿಸಿದ್ದಾರೆ.

ಜಿಬಿಎ ದಿವಾಳಿಯಾಗಲು ಹೇಗೆ ಸಾಧ್ಯ? ಕಾರಣ ಏನು?

ಪತ್ರದಲ್ಲಿ ಎನ್.ಆರ್. ರಮೇಶ್ ಅವರು ತಿಳಿಸುವಂತೆ, ಐದು ಪಾಲಿಕೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿ ಸಂಖ್ಯೆ ಹೆಚ್ಚಾಗಬೇಕಿದೆ. 5 ಪಾಲಿಕೆಗಳಿಗೆ ಕನಿಷ್ಠ 6326 ಅಧಿಕಾರಿ ಹಾಗೂ ಸಿಬ್ಬಂದಿ ಅಗತ್ಯವಿದೆ. ಬಿಬಿಎಂಪಿಯಲ್ಲಿ ಇದ್ದ ಅಧಿಕಾರಿ ಮತ್ತು ಸಿಬ್ಬಂದಿ ಸಂಖ್ಯೆ 2818. ಅವರಿಗೆ ಪ್ರತಿ ತಿಂಗಳು 100 ಕೋಟಿ ರೂ. ವೆಚ್ಚ ಆಗುತ್ತಿತ್ತು. ಆದರೆ ಈಗ 6326 ಅಧಿಕಾರಿ ಹಾಗೂ ಸಿಬ್ಬಂದಿಯ ವೇತನ, ಇಎಸ್‌ಐ, ಪಿಎಫ್ ಸೇರಿದಂತೆ ಕನಿಷ್ಠ 250 ಕೋಟಿ ರೂ. ಖರ್ಚು ಆಗುತ್ತದೆ. ಪ್ರತಿ ಮಾಪಾಲಿಕೆಗೂ 17 ಇಲಾಖೆಗಳು ಇರಲಿ. ಈ ಎಲ್ಲಾ ಇಲಾಖೆಗಳಿಗೆ ಎಲ್ಲಾ ಪಾಲಿಕೆ ಸಿಬ್ಬಂದಿ ನೇಮಿಸಬೇಕು. ಇದರಿಂದ ಆರ್ಥಿಕ ನಷ್ಟ ಎದುರಾಗಿ, ದಿವಾಳಿಯಾಗಬೇಕಾಯಿತು.

ಇಂತಹ ಭಾರೀ ಪ್ರಮಾಣದ ಪಾಲಿಕೆಗಳ ಆದಾಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದ ಪರಿಸ್ಥಿತಿ. ಇಂತಹ ಸ್ಥಿತಿಯಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ದಿವಾಳಿಯಾಗಬಹುದು ಎಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಎನ್.ಆರ್. ರಮೇಶ್ ತಿಳಿಸಿದ್ದಾರೆ.

ಭಾರೀ ಪ್ರಮಾಣದ ಉತ್ಪನ್ನಗಳ ಅಭಿವೃದ್ಧಿ ವೆಚ್ಚ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ತುರ್ತು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಎನ್ ಆರ್ ರಮೇಶ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಹಾನಗರ ಪಾಲಿಕೆಗಳಲ್ಲಿ ಇನ್ನು ಇರಲ್ಲ ಆರೋಗ್ಯಾಧಿಕಾರಿ ಹುದ್ದೆ: ಕಾರಣ ಇಲ್ಲಿದೆ

ಪೂರ್ವಾಪರ ಯೋಚಿಸದೆಯೇ, ನಿಮ್ಮ ಸರ್ಕಾರದ ಸ್ವಹಿತಾಸಕ್ತಿಗಾಗಿ ಅಖಂಡ ಬೆಂಗಳೂರನ್ನು 05 ತುಂಡು ತುಂಡುಗಳಾಗಿ ವಿಭಜಿಸಲಾಯಿತು ಹಾಗೂ ಈ ಹಿಂದಿನ 198 ವಾರ್ಡುಗಳು ಅಥವಾ ಪಟ್ಟಣ ಪಂಚಾಯಿತಿಯ ಸಣ್ಣ ಪ್ರಮಾಣದ 369 ವಾರ್ಡುಗಳನ್ನು ವಿಂಗಡಿಸಲಾಗಿದೆ ದೇಶದ ಮಾಹಿತಿ ರಾಜಧಾನಿ ಬೆಂಗಳೂರು ಮಹಾನಗರದ 05 ಪಾಲಿಕೆಗಳು ಎಲ್ಲಾ ರೀತಿಯಿಂದಲೂ ದಿವಾಳಿಯ ಅಂಚಿನಲ್ಲಿ ಸಾಗುತ್ತಿದೆ. ಇದರಿಂದ ವಿಶ್ವದ ಮುಂದೆ ನಗೆಪಾಟಲಿಗೀಡಾಗುವ ಪರಿಸ್ಥಿತಿಗೆ ನಾಡಪ್ರಭು ಕೆಂಪೇಗೌಡರಿಂದ ನಿರ್ಮಿಸಲಾಗಿರುವ ಬೆಂಗಳೂರು ಮಹಾನಗರವನ್ನು ದೂಡಿರುವ ತಮ್ಮ ಸರ್ಕಾರವನ್ನು, ಪಕ್ಷವನ್ನು ಕನ್ನಡಿಗರು ಎಂದೆಂದಿಗೂ ಕ್ಷಮಿಸಲಾರರು ಎಂಬ ಮಹಾಸತ್ಯವನ್ನು ತಮಗೆ ತಿಳಿಸುತ್ತೇನೆ ಎಂದು ಪತ್ರದಲ್ಲಿ ಎನ್ ಆರ್ ರಮೇಶ್ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *