ಬೆಂಗಳೂರು, ಡಿಸೆಂಬರ್ 01: ರಕ್ಷಣಾ ವ್ಯವಸ್ಥೆಗೆ ನೆರವಾಗಬಲ್ಲ ದೇಶದ ಮೊತ್ತ ಮೊದಲ ‘ಸ್ವದೇಶಿ ರಕ್ಷಣಾ ಕೃತಕ ಬುದ್ಧಿಮತ್ತೆ ಕರ್ನಾಟಕ ಮೂಲದ ಸ್ಟಾರ್ಟ್ಆಪ್ ಕಂಪನಿ ನ್ಯೂರಾಲಿಕ್ಸ್ ಎಐ ಸ್ಥಾಪಿಸಿದೆ. ದೆಹಲಿಯ ಮಾಣಿಕ್ ಶಾ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ‘ಚಾಣಕ್ಯ ಡಿಫೆನ್ಸ್’ ಸಂವಾದದಲ್ಲಿ ಭಾರತದ ಮೊದಲ ಸಂಪೂರ್ಣ ‘ಸ್ವದೇಶೀ ರಕ್ಷಣಾ ಎಐ-ಎಸ್-ಎ-ಸರ್ವಿಸ್’ (ALAAS) ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬಿಡುಗಡೆ ಮಾಡಿದ್ದಾರೆ.
‘ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ’
ಕನ್ನಡಿಗರೇ ಸ್ಥಾಪಿಸಿದ್ದ ನ್ಯೂರಾಲಿಕ್ಸ್ ಡೀಪ್ ಟೆಕ್ ಕಂಪನಿ ರಕ್ಷಣಾ ಸಚಿವಾಲಯದ IDEX ADITY 2.0 ಉಪಕ್ರಮದಡಿ ಭಾರತೀಯ ಸೇನೆಗಾಗಿ ಈ ಐ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಸ್ವದೇಶಿ ಆವಿಷ್ಕಾರದ ಮೂಲಕ ಮುಂದಿನ ತಲೆಮಾರಿನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶ ಹೊಂದಿರೋದಾಗಿ ನ್ಯೂರಾಲಿಕ್ಸ್ ಎಐ ಸಹ-ಸ್ಥಾಪಕರಾದ ವಿಕ್ರಂ ಜಯರಾಂ ಹೇಳಿದ್ದಾರೆ. ಸ್ವದೇಶಿ ರಕ್ಷಣಾ ಎಐ ಅಭಿವೃದ್ಧಿಯು ದೇಶದ ಸೈನ್ಯವನ್ನು ಬಲಪಡಿಸಿದೆ.’ಆತ್ಮನಿರ್ಭರ ಭಾರತ’ದ ಹಾದಿಗೆ ಇದು ಮತ್ತಷ್ಟು ಶಕ್ತಿ ನೀಡಿದೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಇಂಟರ್ನೆಟ್ ಇಲ್ಲದೆಯೇ ನಿಮ್ಮ ಫೋನ್ನಲ್ಲಿ ಲೈವ್ ಟಿವಿಯನ್ನು ವೀಕ್ಷಿಸಬಹುದು; ಹೇಗೆ ಗೊತ್ತೇ?
ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಲು ಹಾಗೂ ರಾಷ್ಟ್ರ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ರಕ್ಷಣಾ ಸಚಿವಾಲಯವು IDEX ADITY 2.0 ಮೂಲಕ ದೇಶದ ಸ್ಟಾರ್ಟ್ಅಪ್ಗಳು ಮತ್ತು ಆವಿಷ್ಕಾರ ಮಾಡುವವರಿಗೆ ಅವಕಾಶ ನೀಡುತ್ತಿದೆ. ಈ ಅವಕಾಶವನ್ನು ತಂತ್ರಾಂಶ, ನ್ಯೂರಾಲಿಕ್ಸ್ ಎಐ ‘ಸ್ವದೇಶೀ ರಕ್ಷಣಾ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ’ವನ್ನು ಅಳವಡಿಸಲಾಗಿದೆ. ಇದು ಕನ್ನಡಿಗರ ಹೆಮ್ಮೆಯ ವಿಷಯ. ಈ ತಂತ್ರಜ್ಞಾನವನ್ನು ಸ್ವದೇಶಿ ಲಾರ್ಜ್ ಲ್ಯಾವೆಜ್ ಮಾದರಿ (LLM) ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಕಮಾಂಡ್ ಸಪೋರ್ಟ್, ಡಾಕ್ಯುಮೆಂಟ್ ಇಂಟೆಲಿಜೆನ್ಸ್, ಸ್ಪೀಚ್ ಇಂಟರ್ಫೇಸ್,ಆಪರೇಷನಲ್ ಎನಾಲಿಟಿಕ್ಸ್, ವಿದೇಶಿ ಕ್ಲೌಡ್ ಸೇವೆಗಳು, ಇಂಟರ್ನೆಟ್ ಸಂಪರ್ಕ, ಡೇಟಾ ಇಂಟಿಗ್ರೇಶನ್ ಮುಂತಾದವುಗಳಲ್ಲಿ ಈ ಐ ತಂತ್ರಜ್ಞಾನ ಸಹಾಯ ಮಾಡುತ್ತದೆ. ಜೊತೆಗೆ, ಆಮದು ತಂತ್ರಜ್ಞಾನಗಳ ಅವಲಂಬನೆಯನ್ನು ಇದು ಕಡಿಮೆ ಮಾಡುತ್ತದೆ ಎಂದು ನ್ಯೂರಾಲಿಕ್ಸ್ ಪ್ರಕಟಣೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 11:58 am, ಸೋಮ, 1 ಡಿಸೆಂಬರ್ 25