ಬೆಂಗಳೂರು,ಡಿ.1: ಬೆಂಗಳೂರಿನ ವಾತಾವರಣದಲ್ಲಿ (ಬೆಂಗಳೂರು ಹವಾಮಾನ) ಭಾರೀ ಬದಲಾವಣೆಗಳು ಆಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶನಿವಾರ ಬೆಂಗಳೂರಿನ ವಾತಾವರಣದಲ್ಲಿ ದೊಡ್ಡ ಬದಲಾವಣೆಯಾಗಿದೆ. ಬೆಂಗಳೂರು ಫ್ರಿಡ್ಜ್ ಒಳಗಿದೆ ಎಂಬ ಶೀರ್ಷಿಕೆಯ ಪೋಸ್ಟ್ ವೊಂದು ವೈರಲ್ ಆಗಿದೆ. ಇದೀಗ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವೈರಲ್ ಆಗಿದೆ. ಬೆಂಗಳೂರಿನ ಈ ಮಂಜಿನ ವಾತಾವರಣ ಎಲ್ಲರ ಗಮನ ಸೆಳೆದಿದೆ. ತಂಪಾದ ಗಾಳಿ, ಶಾಂತವಾದ ಪ್ರಕೃತಿ ಎಲ್ಲರನ್ನು ಆಕರ್ಷಿಸಿತು. ಇನ್ನು ಈ ವಿಡಿಯೋದಲ್ಲಿ ಪ್ರಶಾಂತವಾದ ಪ್ರಕೃತಿ, ಆಕಾಶದಲ್ಲಿ ಮಂಜುಗಳು ನಿಧಾನವಾಗಿ ಚಲಿಸುತ್ತಿರುವುದನ್ನು ನೋಡಬಹುದು. ಈ ವಿಡಿಯೋವನ್ನು ನೋಡಿದಾಗ ಮಂಜುಗಳು ಭೂಮಿಯ ಮೇಲೆ ಬೀಳುವಂತೆ ಭಾಸವಾಗುತ್ತದೆ.
ಹುಳಿಮಾವು, ಜಯ ನಗರ, ನೈಸ್ ರಸ್ತೆ, ಸಿಲ್ಕ್ ಬೋರ್ಡ್, ಬನಶಂಕರಿ, ಮಡಿವಾಳ ಮತ್ತು ಜೆಪಿ ನಗರದಂತಹ ಸ್ಥಳಗಳಲ್ಲಿ ಈ ದೃಶ್ಯ ಕಂಡು ಬಂದಿದೆ. ಈ ದೃಶ್ಯವನ್ನು ಬೆಂಗಳೂರಿನಲ್ಲಿ ನೋಡಿದಾಗ ನೈಸರ್ಗಿಕ ಹವಾನಿಯಂತ್ರಣ ಅಳವಡಿಸಿದಂತೆ ಕಂಡುಬಂದಿದೆ. ಈ ಮಂಜು ಇಡಿ ನಗರವನ್ನು ಆವರಿಸಿ, ಜನರ ಕಣ್ಣಿಗೆ ಆನಂದವನ್ನು ನೀಡಿತ್ತು. ಈ ಪೋಸ್ಟ್ ನೋಡಿ ಹಲವು ನೆಟ್ಟಿಗರು ಬೆಂಗಳೂರು ಕೂಲ್.. ಕೂಲ್ ಎಂದು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಕಾರ್ತಿಕ್ ಸೂರ್ಯ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ (ನ.29)ದಂದು ತಾಪಮಾನ 21.6 ಡಿಗ್ರಿ ಸೆಲ್ಸಿಯಸ್ಗೆ ಇಳಿದಿತ್ತು. ಇದರಿಂದ ಮೋಡ ಕವಿದ ವಾತಾವರಣ ಇತ್ತು. ಜನರು ಕೂಡ ಈ ವಾತಾವರಣವನ್ನು ತುಂಬಾ ಆನಂದಿಸಿದ್ದಾರೆ ಎಂದು ಈ ಪೋಸ್ಟ್ನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರು ಫ್ರಿಡ್ಜ್ ಒಳಗಿದೆ: ಮಂಜಿನಲ್ಲಿ ಮುಳುಗಿದ ಬೆಂಗಳೂರು, ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ಪೋಸ್ಟ್ ಗೆ ನೆಟ್ಟಿಗರು ಕಮೆಂಟ್ ಮಾಡಿದ್ದು ಹೀಗೆ:
ಒಬ್ಬರು ಈ ಮಂಜುಗಳನ್ನು ನೋಡಿದ ನಂತರ ಒಂದು ಬಾರಿ ಸ್ಪರ್ಶಿಸಬೇಕು ಎಂದು ಅನ್ನಿಸುತ್ತದೆ. ತಂಪಾದ ಗಾಳಿ, ಸೂರ್ಯನ ಬೆಳಕು ಮತ್ತು ಬೆಳಗಿನ ಮಂಜು ನಗರವನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿದೆ ಎಂದು ಹೇಳಿದರು. ಬೆಂಗಳೂರು ನಿಧಾನವಾಗಿ ಊಟ, ಕೂರ್ಗ್ನಂತೆ ಬದಲಾಗುತ್ತಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ಇದು 4.2 ಮಿಲಿಯನ್ ವೀಕ್ಷಣೆಗಳು ಮತ್ತು 3.9 ಲಕ್ಷಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ