ಬೀದಿ ನಾಯಿ ಸಮೀಕ್ಷೆಗೆ ಶಿಕ್ಷಣ ಸಂಸ್ಥೆಗಳ ವಿರೋಧ; ನಾವೇನು ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದ ಶಿಕ್ಷಕರು

ಬೀದಿ ನಾಯಿ ಸಮೀಕ್ಷೆಗೆ ಶಿಕ್ಷಣ ಸಂಸ್ಥೆಗಳ ವಿರೋಧ; ನಾವೇನು ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದ ಶಿಕ್ಷಕರು


ಬೆಂಗಳೂರು, ಡಿಸೆಂಬರ್ 1: ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಾಜ್ಯ ಸರ್ಕಾರ ಬೀದಿ ನಾಯಿಗಳ ನಿಯಂತ್ರಣ ಕುರಿತು ಹೊಸ ನೋಟಿಸ್ ಜಾರಿಗೊಳಿಸಿದ್ದು, ಇದು ಶಿಕ್ಷಣ ಸಂಸ್ಥೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಶಿಕ್ಷಕರ ಶಾಲಾ ಆವರಣದಲ್ಲಿರುವ ಮತ್ತು ಸುತ್ತಮುತ್ತಲಿನ ಬೀದಿ ನಾಯಿಗಳ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಅವುಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಶಿಕ್ಷಣ ಸಂಸ್ಥೆಗಳು ತೀವ್ರವಾಗಿ ಖಂಡಿಸಿದ್ದು, ನಾವೇನು ​​ಪಾಠ ಮಾಡಬೇಕಾ, ನಾಯಿಗಳನ್ನು ಹಿಡಿಯಬೇಕಾ? ಎಂದು ಪ್ರಶ್ನಿಸಿವೆ.

ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶ ಮಕ್ಕಳಿಗೆ ಶಿಕ್ಷಣ ನೀಡುವುದು. ಬೀದಿ ನಾಯಿಗಳ ನಿರ್ವಹಣೆ ಮತ್ತು ಮಾಹಿತಿ ಸಂಗ್ರಹಣೆ ತಮ್ಮ ಜವಾಬ್ದಾರಿಯಲ್ಲ, ಬದಲಾಗಿ ಬಿಬಿಎಂಪಿ ಅಥವಾ ಸಂಬಂಧಪಟ್ಟ ಇಲಾಖೆಗಳ ಕೆಲಸ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನೋಟಿಸ್‌ಗೆ ಶಿಕ್ಷಣ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಆದೇಶವನ್ನು ಹಿಂಪಡೆಯುವಂತೆ ಕಾಣುತ್ತಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *