ತುಮಕೂರು, ಡಿಸೆಂಬರ್ 01: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಎಸ್ ಬಿಐ ಎಟಿಎಂ ಧ್ವಂಸಗೊಳಿಸಿರುವ ಘಟನೆ ತುಮಕೂರಿನ ತುರುವೇಕೆರೆಯಲ್ಲಿ ನಡೆದಿದೆ. ನಶೆಯ ಅಮಲಿನಲ್ಲಿದ್ದ ವಡಿವೇಲು ಸ್ವಾಮಿ ಎಂಬಾತ, ಎಟಿಎಂಗೆ ತೆರಳಿದ್ದ. ಈ ವೇಳೆ ಆತ ಹಣ ಡ್ರಾ ಮಾಡಲು ಯತ್ನಿಸಿದಾಗ, ದುಡ್ಡು ಬಂದಿರಲಿಲ್ಲ. ಹೀಗಾಗಿ ರೊಚ್ಚಿಗೆದ್ದ ವಡಿವೇಲು ಸ್ವಾಮಿ, ಕಲ್ಲಿನಿಂದ ಹೊಡೆದು ಎಟಿಎಂ ಧ್ವಂಸಗೊಳಿಸಿದ್ದ. ನವೆಂಬರ್ 27 ರಾತ್ರಿ ಘಟನೆ ನಡೆದಿತ್ತು. ಸ್ಥಳೀಯರ ದೂರಿನ ಅನ್ವಯ ಇದು ಕಳ್ಳತನ ಆಗಿರಬಹುದೆಂದು ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಕುಡುಕ ಮಹಾಶಯನ ಕೃತ್ಯ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ಕುಡುಕನ ಹುಚ್ಚಾಟ ಬಯಲಾಗಿದ್ದರೆ, ಆರೋಪಿಯನ್ನು ಬಂಧಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.