ಹಿಂದಿನ ಕಾಲದ ಮದುವೆಗಳೇ ಚಂದ, ಯಾವ ಆಡಂಬರನೂ ಇಲ್ಲ (ದುಬಾರಿ ಆಧುನಿಕ ವಿವಾಹಗಳು) ಲಕ್ಷ… ಲಕ್ಷ.. ಖರ್ಚೂ ಇಲ್ಲ. ಆದರೆ ಇಂದಿನ ಕಾಲದಲ್ಲಿ ಮದುವೆಯೆಂದರೆ ದುಬಾರಿ, ಲಕ್ಷ..ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಳ್ಳುತ್ತಾರೆ. ಇದು ಇಂದಿನ ಕಾಲದಲ್ಲಿ ಘನತೆಯ ಪ್ರಶ್ನೆ. ಆದರೆ ಕೊನೆಗೆ ಸಣ್ಣ ಸಣ್ಣ ವಿಚಾರಗಳಿಗೆ ಜಗಳ ಮಾಡಿಕೊಂಡು ವಿಚ್ಛೇದನ ಪಡೆಯುತ್ತಾರೆ. ಮಾಡಿದ ಖರ್ಚೆಲ್ಲ ನೀರಿನಲ್ಲಿ ಹೋಮ. ಇದು ಇಂದಿನ ಕಾಲದ ಮದುವೆ. ಆದರೆ ನಮ್ಮ ಹಿರಿಯರು ಕಾಲದ ಮದುವೆ ಒಂಥರ ಅದ್ಭುತ. ಹುಡುಗನ ಮನೆಯಲ್ಲೇ ಮದುವೆ, ಯಾವುದೇ ದೊಡ್ಡ ಮದುವೆ ಮಂಟಪ ಇರಲಿಲ್ಲ. ಎಲ್ಲವು, ಆ ಮನೆಗೆ ಬರುವುದು. ಮದುವೆ ಮನೆಯ ಕೆಲಸದಲ್ಲಿ ಭಾಗವಹಿಸುತ್ತಾರೆ. ಹೀಗೆ ಅಂದಿನ ಕಾಲದ ಮದುವೆ ತುಂಬಾ ಸಂಭ್ರಮದಿಂದ ಇತ್ತು. ಆದರೆ ಇಂದು ಅದೆಲ್ಲ ಬದಲಾವಣೆ ಆಗಿದೆ. ಇದೀಗ ಆಡಂಬರ ಮದುವೆಗೆ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿ ಎಲ್ಲರೂ ಒಮ್ಮೆ ದುಬಾರಿ ಮದುವೆಯ ಬಗ್ಗೆ ಯೋಚನೆ ಮಾಡುವಂತೆ ಮಾಡಿದೆ.
ವೀಡಿಯೊವನ್ನು @sarvind ಎಂಬ ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಈ ವೀಡಿಯೊ ಪೋಸ್ಟ್ ಕೆಲವೇ ಸೆಕೆಂಡುಗಳಲ್ಲಿ ಸಾವಿರಾರು ಲೈಕ್ಗಳು, ಶೇರ್ಗಳು ಮತ್ತು ಕಾಮೆಂಟ್ಗಳನ್ನು ಗಳಿಸಿದೆ. ಇದು ಮದುವೆಯ ವಾಸ್ತವ ವಿಚಾರಗಳನ್ನು ಹೇಳುತ್ತದೆ. ವಿಡಿಯೋದಲ್ಲಿ ವ್ಯಕ್ತಿ ಹಂಚಿಕೊಂಡಿರುವ ಮದುವೆ ಅನುಭವ ಎಲ್ಲರಿಗೂ ಮನಮುಟ್ಟಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಏನಿದೆ? ಯಾವ ಕಾರಣಕ್ಕೆ ಇಷ್ಟೊಂದು ವೈರಲ್ ಆಗುತ್ತಿದೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಈ ವ್ಯಕ್ತಿ ವಿಡಿಯೋದಲ್ಲಿ ಹೀಗೆ ಹೇಳುತ್ತಾರೆ. “ನಾಲ್ಕು ಗಂಟೆಯ ಮದುವೆಗೆ ಇಷ್ಟೊಂದು ಖರ್ಚು ಮಾಡಬೇಕಾ? ಇದರ ಅಗತ್ಯವೇನಿದೆ? ನಾಲ್ಕು ಗಂಟೆಗಳ ಕಾರ್ಯಕ್ರಮಕ್ಕೆ ಬಿಲ್ 37.40 ಲಕ್ಷ ರೂ., ಒಂದು ಪ್ಲೇಟ್ ಊಟಕ್ಕೆ 3040 ರೂ. ವೆಚ್ಚ. ಇಷ್ಟೊಂದು ಖರ್ಚು ಮಾಡಿ, ಮಾಡಿದ ಮದುವೆ ಎಷ್ಟು ವರ್ಷ. 4 ಗಂಟೆಯ ಮದುವೆಗೆ ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೆ, ಈ ಹಣವನ್ನು ನಿಮ್ಮ ಮಗಳಿಗೆ ನೀಡಿ” ಎಂದು ಹೇಳುತ್ತಾರೆ.
ಇದನ್ನೂ ಓದಿ: ಈ ದೇವಸ್ಥಾನದಲ್ಲಿ ಪಿಜ್ಜಾ, ಪಾನಿಪುರಿಯೇ ಪ್ರಸಾದ, ಇದರ ಹಿಂದಿದೆ ಪ್ರಮುಖ ಕಾರಣ
ವೈರಲ್ ವಿಡಿಯೋ
ಯಹ ಬಾತ್ ದಿಲ್ ಛೂ ಜಾಗೀ. ಜಯಪುರ ಒಂದು ಹೋಟೆಲ್ನಲ್ಲಿ ಶಾದಿ. 4 ಘಂಟೆಗೆ ಇವುಗಳ ಬಿಲ್ 37.40 ಲಕ್ಷ. ಒಂದು ಪ್ಲೇಟ್ ಕಾ ಖರ್ಚಾ 3040 ರೂ. ಯಃ ಶಾದಿ ಕಿತನೆ ಘಂಟೆ, ಕಿತನೆ ಸಾಲ ಚಲೇಗಿ? ಶಾದಿ 4 ಘಂಟೆ ಕಿ ಶಾನೋ ಸೌಕತ್ ನಹೀಂ…ಹರ ದಿನ ಕಾ ಇವೆಂಟ್ ಬನಾಓ. ಯಹ ಪೈಸಾ ಅಪಾನಿ ಬೇಟಿ ಕೊ ದೇ ದೋ. ಕ್ಯಾ ಫರ್ಕ್ ಪಡತಾ ಹೈ ಕಿ ಶಾದಿ ಮೆಂ ಕೌನ್ ಆಯಾ, ಕೌನ್ ನಹೀಂ.. pic.twitter.com/g2CNEaIbJS
– ಅರವಿಂದ್ ಶರ್ಮಾ (@sarviind) ನವೆಂಬರ್ 29, 2025
ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸಾಲು ಸಾಲು ಕಮೆಂಟ್ ಮಾಡಿದ್ದಾರೆ. ಒಬ್ಬರು ಇದೊಂದು ಕಠೋರ ಸತ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು ಕೆಲವು ಮದುವೆಗಳಿಗೆ ಅನಗತ್ಯವಾಗಿ ಖರ್ಚು ಮಾಡುವುದು ಸಾಮಾಜಿಕ ಒತ್ತಡ ಎಂದು ಹೇಳಿದ್ದಾರೆ. ಮದುವೆಯನ್ನು ಕಡಿಮೆ ಇಟ್ಟುಕೊಂಡು ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇದು ಮದುವೆಯಲ್ಲ, ನಾಲ್ಕು ಗಂಟೆಗಳ ಆರ್ಥಿಕ ವಿಪತ್ತು ಎಂದು ಇತರರು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ