Headlines

GST collections: ಜಿಎಸ್​ಟಿ ದರ ಕಡಿತದ ಪರಿಣಾಮ, ನವೆಂಬರ್​ನಲ್ಲಿ ತೆರಿಗೆ ಸಂಗ್ರಹ ಕುಂಠಿತ

GST collections: ಜಿಎಸ್​ಟಿ ದರ ಕಡಿತದ ಪರಿಣಾಮ, ನವೆಂಬರ್​ನಲ್ಲಿ ತೆರಿಗೆ ಸಂಗ್ರಹ ಕುಂಠಿತ


ನವೆಂಬರ್ 1: ಜಿಎಸ್ಟಿ ತೆರಿಗೆ ಕಡಿತದ ಪರಿಣಾಮವಾಗಿ ಸರ್ಕಾರಕ್ಕೆ ಟ್ಯಾಕ್ಸ್ ಆದಾಯದ ನಿರೀಕ್ಷೆಯಂತೆ. ನವೆಂಬರ್ ತಿಂಗಳಿನಲ್ಲಿ ಸರ್ಕಾರಕ್ಕೆ ಸಿಕ್ಕಿದ ಜಿಎಸ್ಟಿ ಆದಾಯ (ಜಿಎಸ್ಟಿ) 1,70,276 ಕೋಟಿ ರೂ ಆಗಿದೆ. ಕಳೆದ ವರ್ಷ (2024) ನವೆಂಬರ್ ತಿಂಗಳಿಗೆ ಜಿಎಸ್ ಟಿ ಕಲೆಕ್ಷನ್ಸ್ ಶೇ. 0.7 ಮಾತ್ರವೇ ಏರಿಕೆ ಆಗಿರುವುದು. 2024ರ ನವೆಂಬರ್‌ನಲ್ಲಿ 1.69 ಲಕ್ಷ ಕೋಟಿ ರೂ ಮೊತ್ತದಷ್ಟು ಜಿಎಸ್ಟಿ ಪ್ರಾಪ್ತವಾಗಿತ್ತು.

ಹಿಂದಿನ ತಿಂಗಳಿಗೆ ಜಿಎಸ್ಟಿ ಸಂಗ್ರಹದಲ್ಲಿ ಬರೋಬ್ಬರಿ 25,000 ಕೋಟಿ ರೂ ಆದಾಯ ಕಡಿಮೆಯಾಗಿದೆ. 2025ರ ಅಕ್ಟೋಬರ್ ತಿಂಗಳಿನಲ್ಲಿ 1.96 ಲಕ್ಷ ಕೋಟಿ ರೂ ತೆರಿಗೆ ಸಂಗ್ರಹವಾಗಿತ್ತು. ಈ ಆರ್ಥಿಕ ವರ್ಷದ ಏಪ್ರಿಲ್‌ನಿಂದ ನವೆಂಬರ್‌ವರೆಗೆ 14,75,488 ಕೋಟಿ ರೂ. ಜಿಎಸ್‌ಟಿ ಸಿಕ್ಕಿದೆ. ಹಿಂದಿನ ವರ್ಷದ ಅವಧಿಯಲ್ಲಿ ಸಂಗ್ರಹವಾದ ಜಿಎಸ್ಟಿ 13,55,242 ಕೋಟಿ ರೂ. ಈ ಆರ್ಥಿಕ ಶಿಕ್ಷಣ ಇಲ್ಲಿಯವರೆಗೆ ಶೇ. 8.9ರಷ್ಟು ಹೆಚ್ಚಳ.

ಇದನ್ನೂ ಓದಿ: 19 ಕಿಲೋ ಎಲ್ಪಿಜಿ ಬೆಲೆ 10.50 ರೂ ಇಳಿಕೆ; ಇಲ್ಲಿದೆ ದರಪಟ್ಟಿ

ಜಿಎಸ್ಟಿ ದರ ಕಡಿತದ ಪರಿಣಾಮ

ಕೇಂದ್ರ ಸರ್ಕಾರ ಇತ್ತೀಚೆಗೆ ಹಲವಾರು ಸರಕುಗಳ ಮೇಲಿನ ಜಿಎಸ್ ಟಿ ದರವನ್ನು ಇಳಿಸಿತ್ತು. ಶೇ. 12 ಮತ್ತು ಶೇ. 28ರಷ್ಟಿದ್ದ ಜಿಎಸ್ಟಿ ದರಗಳನ್ನು ಶೇ. 5 ಮತ್ತು ಶೇ. 18ಕ್ಕೆ ಇಳಿಸಲಾಗಿದೆ. ಹೆಚ್ಚಿನ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ದೇಶೀಯ ಜಿಎಸ್ಟಿ ಆದಾಯ ನವೆಂಬರ್ನಲ್ಲಿ ಶೇ. 2.3ರಷ್ಟು ಕಡಿಮೆ ಆಗಿ 1.24 ಲಕ್ಷ ಕೋಟಿ ರೂ ಸಿಕ್ಕಿದೆ. ಆಮದುಗಳಿಂದ ಬಂದಿರುವ ಟ್ಯಾಕ್ಸ್ ಸಂಗ್ರಹ 45,976 ಕೋಟಿ ರೂ. ಇದರಲ್ಲಿ ಶೇ. 10.2ರಷ್ಟು ಹೆಚ್ಚು.

ಜಿಎಸ್ಟಿ ರೀಫಂಡ್ಗಳು ನವೆಂಬರ್ನಲ್ಲಿ 18,196 ಕೋಟಿ ರೂ ಆಗಿವೆ. ಹಿಂದಿನ ವರ್ಷಕ್ಕೆ ರೀಫಂಡ್ ಪ್ರಮಾಣ ಶೇ. 3.5ರಷ್ಟು ಕಡಿಮೆ ಆಗಿದೆ. ರೀಫಂಡ್ ಕಳೆದು ಉಳಿಯುವ ನಿವ್ವಳ ಜಿಎಸ್ಟಿ ಸಂಗ್ರಹ 1.52 ಲಕ್ಷ ಕೋಟಿ ರೂ ಇದ್ದು, ಹಿಂದಿನ ವರ್ಷಕ್ಕಿಂತ ಶೇ. 1.3ರಷ್ಟು ಹೆಚ್ಚು.

ಇದನ್ನೂ ಓದಿ: ಅಚ್ಚರಿ ಹುಟ್ಟಿಸಿದ ಭಾರತದ ಆರ್ಥಿಕತೆ; 2ನೇ ಕ್ವಾರ್ಟರ್‌ನಲ್ಲಿ ಜಿಡಿಪಿ ಶೇ. 8.2 ಬೆಳವಣಿಗೆ

ವಿವಿಧ ರಾಜ್ಯಗಳಲ್ಲಿ ನವೆಂಬರ್ ನಲ್ಲಿ ಜಿಎಸ್ ಟಿ ಕಲೆಕ್ಷನ್ಸ್

  • ಮಹಾರಾಷ್ಟ್ರ: 16,122 ಕೋಟಿ ರೂ
  • ಉತ್ತರಪ್ರದೇಶ: 7,669 ಕೋಟಿ ರೂ
  • ಕರ್ನಾಟಕ: 7,574 ಕೋಟಿ ರೂ
  • ತಮಿಳುನಾಡು: 6,800 ಕೋಟಿ ರೂ
  • ಗುಜರಾತ್: 6,723 ಕೋಟಿ ರೂ
  • ತೆಲಂಗಾಣ: 3,910 ಕೋಟಿ ರೂ

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *