ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ: ಗೊಂದಲಗಳಿಗೆ ಪ್ರಮೋದ್​​ ಮಧ್ವರಾಜ್​​ ತೆರೆ

ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ: ಗೊಂದಲಗಳಿಗೆ ಪ್ರಮೋದ್​​ ಮಧ್ವರಾಜ್​​ ತೆರೆ


ಪ್ರಮೋದ್ ಮಧ್ವರಾಜ್ ಸ್ಪಷ್ಟನೆ

ಉಡುಪಿ, ಡಿಸೆಂಬರ್ 01: ಶ್ರೀಕೃಷ್ಣ ಮಠಕ್ಕೆ ಭೇಟಿ ವೇಳೆ ಪ್ರಧಾನಿ ಮೋದಿ ಅವರು ಪ್ರಮೋದ್ ಮಧ್ವರಾಜ್ ಕೊಡುಗೆ ನೀಡಿದ್ದ ಕನಕನ ಕಿಂಡಿಯ ಸ್ವರ್ಣ ಕವಚವನ್ನು ಉದ್ಘಾಟಿಸಿದರು. ಆದರೆ ಕಾರ್ಯಕ್ರಮಕ್ಕೆ ಮಾಜಿ ಸಚಿವರಿಗೆ ಆಹ್ವಾನ ಇರಲಿಲ್ಲ. ಇದೇ ವಿಚಾರವೀಗ ರಾಜಕೀಯವಾಗಿ ಒಂದಿಷ್ಟು ಚರ್ಚೆಗಳಿಗೆ ಒಳ್ಳೆಯದು. ಕೊಡುಗೆ ನೀಡಿದ್ದು ಬಿಜೆಪಿ ಮುಖಂಡರೇ ಆದರೂ ಅವರಿಗೆ ಸೈಡ್ ಲೈನ್ ಮಾಡಲಾಯ್ತಾ ಎಂಬ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾದ ಕಾರಣ ಪ್ರಮೋದ್ ಮಧ್ವರಾಜ್ ಅವರೇ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾರೆ.

‘ನನ್ನ ಕಡೆಗಣಿಸಿದ್ದು ಅನಿಸುತ್ತಿಲ್ಲ’

ಜಿಲ್ಲಾ ಬಿಜೆಪಿ ನಾಯಕರು ಪ್ರಮೋದ್ ಮಧ್ವರಾಜ್ ಅವರ ಜೊತೆ ಇಂದು ಸುದ್ದಿಗೋಷ್ಠಿ ನಡೆಸಿದ್ದು, ಈ ವೇಳೆ ಎಲ್ಲ ಊಹಾಪೋಹಗಳಿಗೆ ಮಾಜಿ ಸಚಿವರು ಉತ್ತರ ನೀಡಿದ್ದಾರೆ.ತಮ್ಮ ಹಿಂದಿನ ಹೇಳಿಕೆಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ಸೇವೆಯನ್ನು ಪ್ರಧಾನಿ ಉದ್ಘಾಟಿಸಿರುವುದು ನನಗೆ ಅಪಾರ ಸಂತೋಷ ಎಂದು ಅವರು ಪುನರುಚ್ಛರಿಸಿದ್ದಾರೆ. ಮಠದವರಾಗಲಿ, ಜಿಲ್ಲಾ ಬಿಜೆಪಿ ನಾಯಕರಾಗಲಿ ಯಾರೂ ಕೂಡ ನನ್ನ ಕಡೆಗಣಿಸಿದ್ದಾರೆ ಎನಿಸುತ್ತಿಲ್ಲ. ಅದನ್ನು ಹುಡುಕುವ ಪ್ರಯತ್ನವನ್ನೂ ನಾನು ಮಾಡಿಲ್ಲ. ಕನಕನ ಕಿಂಡಿಗೆ ಸ್ವರ್ಣ ಕವಚ ದಾನ ಮಾಡಿದ ವ್ಯಕ್ತಿಯಾಗಿ ಪ್ರಧಾನಿಯ ಉದ್ಘಾಟನಾ ಕ್ಷಣವನ್ನು ಸ್ಥಳದಲ್ಲೇ ನಿಂತು ನೋಡುವ ಆಸೆ ಇದ್ದರೂ ಸಾಧ್ಯವಾಗಿಲ್ಲ. ಈ ಬಗ್ಗೆ ನನ್ನ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡವರಿಗೆ ಧನ್ಯವಾದ ತಿಳಿಸೋದಾಗಿಯೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಶ್ರೀಕೃಷ್ಣ ಮಠದಲ್ಲಿ ಕನಕನ ಕಿಂಡಿ ಸ್ವರ್ಣ ಕವಚ ಲೋಕಾರ್ಪಣೆ ಮಾಡಿದ ನಮೋ

ಇನ್ನು ಈ ಕುರಿತು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕೂಡ ಸ್ಪಷ್ಟನೆ ನೀಡಿದ್ದಾರೆ. ಮಠ ಮತ್ತು ನಮ್ಮಿಂದ ಕಳುಹಿಸಿದ ಅತಿಥಿಗಳ ಪಟ್ಟಿಯಲ್ಲಿ ಪ್ರಮೋದ್ ಮಧ್ವರಾಜ್ ಅವರ ಹೆಸರನ್ನು ಸೇರಿಸಲಾಗಿದೆ. ಆದರೆ ಪ್ರಧಾನಿ ಕಚೇರಿಯಿಂದ ಪರಿಷ್ಕೃತ ಪಟ್ಟಿಯನ್ನು ಕಳುಹಿಸಿದಾಗ ಅವರು ಸೇರಿದಂತೆ ಹಲವು ಹೆಸರುಗಳು ಇರಲಿಲ್ಲ. ಇದರಲ್ಲಿ ಜಿಲ್ಲಾ ಬಿಜೆಪಿ ಯಾವುದೇ ರೀತಿಯಲ್ಲೂ ಪಾತ್ರವಹಿಸಿಲ್ಲ. ಪ್ರಮೋದ್ ಮಧ್ವರಾಜ್ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಹಾಲು–ಸಕ್ಕರೆ ಬೆರೆತಂತೆ ಬಿಜೆಪಿ ಮತ್ತು ಪ್ರಮೋದ್ ಮಧ್ವರಾಜ್ ಒಟ್ಟಿಗಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *