ಡಿಕೆಶಿ ಮನೆಯಲ್ಲಿ ಸಿಎಂ ಉಪಹಾರ, ಕನಕಪುರದ ಫಾರ್ಮ್ ನಲ್ಲಿ ಸಾಕಿದ ನಾಟಿ ಕೋಳಿ ಗಮ್ಮತ್ತು, ಮೆನು ರೆಡಿ! | Breakfast Meeting Dk Shivakumar Serve Siddaramaiah Favorite Nati Koli Food Gow

ಡಿಕೆಶಿ ಮನೆಯಲ್ಲಿ ಸಿಎಂ ಉಪಹಾರ, ಕನಕಪುರದ ಫಾರ್ಮ್ ನಲ್ಲಿ ಸಾಕಿದ ನಾಟಿ ಕೋಳಿ ಗಮ್ಮತ್ತು, ಮೆನು ರೆಡಿ! | Breakfast Meeting Dk Shivakumar Serve Siddaramaiah Favorite Nati Koli Food Gow



ಡಿಕೆಶಿ ಮನೆಯಲ್ಲಿ ಸಿಎಂ ಉಪಹಾರ, ಕನಕಪುರದ ಫಾರ್ಮ್ ನಲ್ಲಿ ಸಾಕಿದ ನಾಟಿ ಕೋಳಿ ಗಮ್ಮತ್ತು, ಮೆನು ರೆಡಿ! | Breakfast Meeting Dk Shivakumar Serve Siddaramaiah Favorite Nati Koli Food Gow

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಭೆಗಾಗಿ ಸಿಎಂಗೆ ಇಷ್ಟವಾದ ಕನಕಪುರದ ನಾಟಿ ಕೋಳಿ ಸಾರು ಸೇರಿದಂತೆ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಲಾಗಿದೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ನಾಳೆ ನಡೆಯಲಿರುವ ವಿಶೇಷ ಬ್ರೇಕ್‌ಫಾಸ್ಟ್‌ ಮೀಟಿಂಗ್ ಕುತೂಹಲ ಮೂಡಿಸಿದೆ. ಬ್ಯಾಂಕ್ವೆಟ್ ಹಾಲ್‌ನಲ್ಲಿ ವೇದಿಕೆ ಹತ್ತುವ ವೇಳೆ ಸಿಎಂ ಮತ್ತು ಡಿಸಿಎಂ ನಡುವೆ ಸಂಕ್ಷಿಪ್ತ ಸಂಭಾಷಣೆ ನಡೆಯಿತು. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ನಿವಾಸಕ್ಕೆ ಬ್ರೇಕ್‌ಫಾಸ್ಟ್‌ಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಆಹ್ವಾನ ನೀಡಿದರು. ಆಹ್ವಾನಕ್ಕೆ ಸಿಎಂ ನಗುಮುಖದಿಂದ ಸಮ್ಮತಿ ಸೂಚಿಸಿದರು. ಏನಯ್ಯ ನಾಳೆ ಏನು ತಿಂಡಿ ಮಾಡಿಸುತ್ತಿದ್ದೀಯಾ ಎಂದು ಸಿಎಂ ಈ ವೇಳೆ ಕೇಳಿದರು. ಇದಕ್ಕೆ ಉತ್ತರಿಸಿದ ಡಿಸಿಎಂ ನಿಮಗೆ ಇಷ್ಟವಾದದ್ದನ್ನೇ ಮಾಡಿಸುತ್ತೇನೆ ಎಂದು ಡಿಸಿಎಂ ಡಿಕೆಶಿ ನಕ್ಕರು. ಆಗಲಿ ಎಂದು ಸಿಎಂ ನಗುಮುಖ ತೋರಿದರು. ಇನ್ನು ಡಿಸಿಎಂ ಡಿಕೆಶಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ವಿಚಾರದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಹೌದು ಹೋಗ್ತೀನಿ, ನಾಳೆ 9.30 ಕ್ಕೆ ಹೋಗ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಎಂಗೆ ಇಷ್ಟವಾದ ನಾಟಿ ಕೋಳಿ ಸಾಂಬಾರ್ ಸಿದ್ಧ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಳೆಯ ಬ್ರೇಕ್‌ಫಾಸ್ಟ್‌ಗಾಗಿ ವಿಶೇಷ ಮೆನು ಸಿದ್ಧಪಡಿಸಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಸಿಎಂಗೆ ಅತ್ಯಂತ ಇಷ್ಟವಾದ ನಾಟಿ ಕೋಳಿ ಸಾಂಬಾರ್, ಇಡ್ಲಿ, ಮತ್ತು ನಾಟಿ ಕೋಳಿ ಪ್ರೈ ಮೆನುಪಟ್ಟಿಯಲ್ಲಿ ಸೇರಿಸಲ್ಪಟ್ಟಿವೆ.

ಕನಕಪುರದ ನಾಟಿ ಕೋಳಿಗಳು ಮೆನುದ ವಿಶೇಷತೆ

ಡಿಸಿಎಂ ತಮ್ಮ ಕನಕಪುರದ ಫಾರ್ಮ್‌ನಿಂದ ತಂದಿಟ್ಟಿರುವ ನಾಟಿ ಕೋಳಿಗಳನ್ನು ಕನಕಪುರದಿಂದ ತಂದು ಸರ್ಕಾರಿ ಕ್ವಾರ್ಟರ್ಸ್ ಸಾಕಿದ್ದರು. ಅದೇ ಕೋಳಿಗಳಿಂದ ಸಿಎಂಗೆ ವಿಶೇಷವಾಗಿ ಆಹಾರ ತಯಾರಿಸಲಾಗುತ್ತಿದೆ ಎಂಬುದು ತಿಳಿದುಬಂದಿದೆ. ಇದರಿಂದ ಉಪ ಮುಖ್ಯಮಂತ್ರಿ ತಮ್ಮ ಅತಿಥ್ಯದಲ್ಲಿ ತೋರಿಸುತ್ತಿರುವ ಆತ್ಮೀಯತೆ ಸ್ಪಷ್ಟವಾಗುತ್ತದೆ.

ರಾಜಕೀಯ ಸಂದೇಶವೋ? ಸ್ನೇಹದ ಸಂಕೇತವೋ?

ಈ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ಅನ್ನು ಕೇವಲ ಆಹಾರಕ್ಕಾಗಿ ಮಾತ್ರವಲ್ಲ, ರಾಜಕೀಯ ತಂತ್ರ, ಆಡಳಿತದ ಚರ್ಚೆ ಮತ್ತು ಪರಸ್ಪರ ನಂಬಿಕೆಯ ಬಲವರ್ಧನೆಗೆ ವೇದಿಕೆಯಾಗಿ ಕೂಡ ಬಳಸಲಾಗಬಹುದು ಎಂಬ ಊಹಾಪೋಹಗಳು ಸಹಜವಾಗಿವೆ.

ಸದಾನಂದ ಗೌಡ ವ್ಯಂಗ್ಯ

ಮಾಜಿ ಸಿಎಂ ಸದಾನಂದ ಗೌಡ ಹೇಳಿಕೆ ನೀಡಿ, ಜನರನ್ನೆ ಬಲಿಕೊಟ್ಟವರು ಜನರ ಹಿತಾಸಕ್ತಿಯನ್ನೆ ಬಲಿಕೊಟ್ಟವರು. ನಾಳೆ ನಾಲ್ಕು ಕೋಳಿ ಬಲಿ ಕೊಡೋದು ದೊಡ್ಡ ವಿಷಯ ಅಲ್ಲ. ಎಂದು ಡಿಸಿಎಂ ಮನೆಯಲ್ಲಿ ಸಿಎಂ ಡಿನ್ನರ್ ಗೆ ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ.



Source link

Leave a Reply

Your email address will not be published. Required fields are marked *