17

Image Credit : Instagram
ನಮಸ್ಕಾರ ದೇವ್ರು
ನಮಸ್ಕಾರ ದೇವ್ರು ಎನ್ನುವ ಮೂಲಕ ವೀಕ್ಷಕರಿಗೆ ಸ್ವಾಗತ ಕೋರಿ ವಿಡಿಯೋ ಮಾಡುತ್ತಿದ್ದ ಕನ್ನಡದ ಖ್ಯಾತ ಟ್ರಾವೆಲ್ ಬ್ಲಾಗರ್, ಯೂಟ್ಯೂಬರ್ ಡಾ. ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ (Gagan Srinivas). ಇವರ ಅಚ್ಚಕನ್ನಡದ ಸ್ವಚ್ಚ ಮಾಹಿತಿಗಳನ್ನು ಕೇಳೊದೇ ಜನರಿಗೆ ಇಷ್ಟ. ದೇಶ ವಿದೇಶಗಳನ್ನು ಸುತ್ತಿ, ಮಾಹಿತಿ ನೀಡುತ್ತಿದ್ದ ಡಾ. ಬ್ರೋ ಅಂದ್ರೆ ಜನರಿಗೆ ಸಿಕ್ಕಾಪಟ್ಟೆ ಇಷ್ಟ.
27
Image Credit : Instagram
ಕನ್ನಡದ ಮೂಲಕ ಪರಿಚಯ
ಪ್ರತಿ ಬಾರಿಯೂ ಒಂದೊಂದು ದೇಶದ ಮೂಲೆ ಮೂಲೆಗೆ ಭೇಟಿ ನೀಡಿ, ಅಲ್ಲಿ ಯಾರೂ ಹೋಗದ ಜಾಗಕ್ಕೆ ಹೋಗಿ, ಅವರೊಂದಿಗೆ ಬೆರೆತು ಕಲೆತು, ಅವರ ಸಂಸ್ಕೃತಿ, ಆಚರಣೆ ವಿಚಾರಗಳನ್ನು ಕನ್ನಡಿಗರಿಗೆ ಕನ್ನಡದಲ್ಲೇ ಪರಿಚಯಿಸುತ್ತಿದ್ದ ಹುಡುಗ ಡಾ. ಬ್ರೋ. (Dr. Bro) ಆದರೆ ಇವರು ಕೆಲವು ದಿನಗಳಿಂದ ಪತ್ತೆಯೇ ಇರಲಿಲ್ಲ.
37
Image Credit : Youtube
ಕಮ್ಬ್ಯಾಕ್
ಆದರೆ ಈಗ ಡಾ.ಬ್ರೋ ಮತ್ತೆ ಅದೇ ಜೋಶ್ನಲ್ಲಿ ಕಮ್ಬ್ಯಾಕ್ ಆಗಿದ್ದಾರೆ. ಸ್ವಂತ ಪ್ರವಾಸದ ಉದ್ಯಮ ಶುರು ಮಾಡಿದ ಬಳಿಕ ದೇಶ-ವಿದೇಶಗಳ ಪ್ರವಾಸ ಮಾಡಿ ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡದೇ ಕಣ್ಮರೆಯಾಗಿದ್ದ ಗಗನ್ ಅವರು ಮತ್ತೆ ಕಾಣಿಸಿಕೊಂಡಿದ್ದಾರೆ.
47
Image Credit : Instagram
ಸೂಸೂ ಮಾಡಿದ್ದ ಸಿಂಹ
ಇದೀಗ ಅದೇ ಜೋಶ್ನಲ್ಲಿ, ತಮ್ಮದೇ ಆದ ರೀತಿಯ ಹಾಸ್ಯದ ಮೂಲಕ ಜನರನ್ನು ರಂಜಿಸುತ್ತಿದ್ದಾರೆ. ಹಿಂದೊಮ್ಮೆ ಜೂ ಒಂದಕ್ಕೆ ಹೋದ ಸಂದರ್ಭದಲ್ಲಿ ಡಾ.ಬ್ರೋ ವಿಡಿಯೋ ಮಾಡುತ್ತಿದ್ದಾಗ, ಹಿಂದಿನಿಂದ ಸಿಂಹವೊಂದು ಅವರ ಮೈಮೇಲೆ ಸೂಸೂ ಮಾಡಿದಂತೆ ತೋರಿಸಿ ತಮಾಷೆ ಮಾಡಿದ್ದರು. ಇದೀಗ ಸಿಂಹಗಳ ಮೇಲೆ ಸೇಡು ತೀರಿಸಿಕೊಂಡಿರುವುದಾಗಿ ಮತ್ತೊಂದು ವಿಡಿಯೋ ಮಾಡಿದ್ದಾರೆ.
57
Image Credit : Instagram
ಸೇಡು ತೀರಿಸಿಕೊಂಡೆ
ಅದೇ ಸಿಂಹವನ್ನು ನಾಯಿ ರೀತಿಯಲ್ಲಿ ವಾಕಿಂಗ್ ಮಾಡಿಸುವುದಾಗಿ ಹೇಳಿ ಸಿಂಹಗಳ ಜೊತೆ ವಾಕಿಂಗ್ ಮಾಡಿದ್ದಾರೆ, ಅದರ ಜೊತೆ ಒಂದಿಷ್ಟು ಮೋಜು ಮಸ್ತಿಯನ್ನೂ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಸಿಂಹಾದ್ರಿಯ ಸಿಂಹ ಪಾರ್ಟ್-2 ಎಂದು ತಮಾಷೆ ಮಾಡುತ್ತಿದ್ದಾರೆ.
67
Image Credit : Instagram
ಸಿಂಹ ಪಳಗಿಸುವೆ
ಆನೆ ಪಳಗಿಸಲು ಮಾವುತ ಬರಬೇಕು, ಈ ರೀತಿಯ ಸಿಂಹ ಪಳಗಿಸಲು ನಾನೇ ಬರಬೇಕು ಎಂದು ಸಿಂಹಗಳ ಮರಿಯನ್ನು ಹಿಡಿದುಕೊಂಡು ಅವುಗಳ ಜೊತೆ ಆಟವಾಡಿದ್ದಾರೆ.
77
Image Credit : Instagram
ಸಿಂಹದ ಮರಿಗಳ ಮುದ್ದು
ಇದರ ಮುಖ ನೋಡಿದ್ರೆ ದ್ವೇಷ ಮಾಡಲು ಮನಸೇ ಬರುವುದಿಲ್ಲ. ಇನ್ಮುಂದಿದ ನಾನು ಮತ್ತು ಇವೆಲ್ಲಾ ಫ್ರೆಂಡ್ಸು ಎಂದು ಮರಿಗಳನ್ನು ಹಿಡಿದುಕೊಂಡು ಮುದ್ದು ಮಾಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.