ಬೆಳಗಾವಿ, (ಡಿಸೆಂಬರ್ 01): ಎಂಥೆಂಥಾ ಜನ ಇದ್ದಾರೆ ನೋಡಿ. ಮಾಜಿ ಮುಖ್ಯಮಂತ್ರಿ, ಸಂಸದರಿಗೆ ಯುವಕನೋರ್ವ ಕರೆ ಮಾಡಿ ಐಫೋನ್-17 ಪ್ರೋ ಮ್ಯಾಕ್ಸ್ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಹೌದು ಅಚ್ಚರಿ ಅನ್ನಿಸಿದರೂ ಸತ್ಯ. ಯುವಕನೋರ್ವ, ಸಂಸದ ಜಗದೀಶ್ ಶೆಟ್ಟರ್ ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾನೆ. ಬಳಿಕ ಸರ್ ನನಗೊಂದು ಸಹಾಯ ಆಗಬೇಕು ನಿಮ್ಮಿಂದ ಎಂದಿದ್ದಾನೆ. ಅದಕ್ಕೆ ಏನು ಹೇಳಪ್ಪ ಎಂದು ಶೆಟ್ಟರ್ ಅವರು ಹೇಳಿದ್ದಾರೆ. ಆಗ ಯುವಕ ಏನಿಲ್ಲ ಸರ್ ಹೊಸದಾಗಿ ಐಫೋನ್-17 ಪ್ರೋ ಮ್ಯಾಕ್ಸ್ ಲಾಂಚ್ ಆಗಿದೆ. ನನಗೆ ಐಫೋನ್-17 ಪ್ರೋ ಮ್ಯಾಕ್ಸ್ ಕೊಡಿ ಎಂದಿದ್ದಾನೆ. ಆಗ ಶೆಟ್ಟರ್,ಇನ್ನೂ ಎಂಪಿಯವರಿಗೆ ಕೇಳ್ತಿರಲಪ್ಪ ಆರೋಗ್ಯ. ಸದ್ಯ ಈ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ನೀವು ಒಮ್ಮೆ ಯುವಕನ ಆಡಿಯೋವನ್ನು ಕೇಳಿ.