ಆದರೆ 2 ಕೋಟಿ ರೂ. ಮೂಲ ಬೆಲೆ ಘೋಷಿಸಿರುವ 45 ಆಟಗಾರರ ಹೆಸರುಗಳು ಡಿಸೆಂಬರ್ 16 ರಂದು ನಡೆಯಲಿರುವ ಹರಾಜಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಏಕೆಂದರೆ 1355 ಆಟಗಾರರ ಪಟ್ಟಿಯನ್ನು ಶಾರ್ಟ್ ಲಿಸ್ಟ್ ಮಾಡಲಿದೆ, ಇದಾದ ಬಳಿಕ ಅಂತಿಮ ಹರಾಜು ಪಟ್ಟಿ ಸಿದ್ಧ ವಸ್ತು. ಅದರಂತೆ ಕೋಟಿ ಬೆಲೆಯ ಎಷ್ಟು ಆಟಗಾರರು ಫೈನಲ್ ಲಿಸ್ಟ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.