Headlines

“ನಾನು ಶಿಮ್ಲಾದಲ್ಲಿ ಇಲ್ಲ, ಕೋರಮಂಗಲದಲ್ಲಿ ಇದ್ದೇನೆ”: ಮತ್ತೆ ವೈರಲ್​​​​​ ಆಯಿತು ಬೆಂಗಳೂರಿನ ಹವಾಮಾನ

“ನಾನು ಶಿಮ್ಲಾದಲ್ಲಿ ಇಲ್ಲ, ಕೋರಮಂಗಲದಲ್ಲಿ ಇದ್ದೇನೆ”: ಮತ್ತೆ ವೈರಲ್​​​​​ ಆಯಿತು ಬೆಂಗಳೂರಿನ ಹವಾಮಾನ


ಬೆಂಗಳೂರು, ಡಿ.2: ಬೆಂಗಳೂರಿನಲ್ಲಿ (ಬೆಂಗಳೂರು) ಚಳಿ ಶುರುವಾಗಿದೆ. ಮನೆಯಿಂದ ಜನ ಹೊರೆಗೆ ಬರಲು ಮನಸ್ಸು ಮಾಡಿಲ್ಲ. ರಾಜಧಾನಿಯ ಜನ ಮಂಜಿನ ಜೊತೆಗೆ ಬದುಕುತ್ತಿದ್ದಾರೆ. ಇನ್ನು ಈ ಚಳಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಇಂತಹ ವಾತಾವರಣವನ್ನು ಯಾವತ್ತು ನೋಡಿ ಎಂಬ ಮಿಮ್ಸ್ ಕೂಡ ವೈರಲ್ ಆಗಿದೆ. ಇದೀಗ ಇಲ್ಲೊಂದು ವಿಡಿಯೋ ತುಂಬಾ ಸೋಶಿಯಲ್ ಮೀಡಿಯಾ ತಮಾಷೆಯಾಗಿ ವೈರಲ್ ಆಗಿದೆ. ಪೂರವ್ ಎಂಬ ಯುವಕ ಚಳಿಯ ಬಗ್ಗೆ ಹಾಸ್ಯಮಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಸಾವಿರಾರು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಈ ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ. “ಹಾಯ್, ನಾನು ಶಿಮ್ಲಾ ಅಥವಾ ಹಿಮಾಚಲ ಪ್ರದೇಶದಲ್ಲಿ ಇಲ್ಲ, ಬೆಂಗಳೂರಿನ ಕೋರಮಂಗಲದಲ್ಲಿ ಇದ್ದೇನೆ. ನನಗೆ ಸಾಯುವಷ್ಟು ಚಳಿಯಾಗುತ್ತಿದೆ. ನಾನು ಸ್ವೆಟರ್, ಮೇಲೆ ಸ್ವೆಟರ್, ಜಾಕೆಟ್ ಮತ್ತು ತಲೆಯ ಮೇಲೆ ಹೂಡಿ ಧರಿಸಿದ್ದೇನೆ. ಬೆಂಗಳೂರಿನ ಹವಾಮಾನ ಯಾಕಿಷ್ಟು ಬದಲಾವಣೆಯಾಗಿದೆ. ನನಗೆ ಅರ್ಥವಾಗುತ್ತಿಲ್ಲ. ನನಗೆ ಬರಬಾರದು ಎಂದು ಅವರ ಹತ್ತಿರ ಕೂಡ ಹೋಗುತ್ತಿಲ್ಲ ನಾನು ಕೆಮ್ಮಿನ ಸಿರಪ್ ಕುಡಿಯುತ್ತಿದ್ದೇನೆ ಮತ್ತು ಡೋಲೋ 650 ತೆಗೆದುಕೊಳ್ಳುತ್ತಿದ್ದೇನೆ” ಎಂದು ತಮಾಷೆಯಾಗಿ ಹೇಳಿದ್ದಾರೆ.

ಇದನ್ನೂ ಓದಿ: ನಾಲ್ಕು ಗಂಟೆಯ ಮದ್ವೆಗೆ ಲಕ್ಷ ಲಕ್ಷ ಹಣ ಖರ್ಚು ಮಾಡಲು ಏನಿದೆ? ಇದು ವಾಸ್ತವಿಕ ಸತ್ಯ

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ 8 ಲಕ್ಷಕ್ಕೂ ಹೆಚ್ಚು ವಿಕ್ಷಣೆಯನ್ನು ಹೊಂದಿದೆ. ಒಬ್ಬರು ಇದೊಂದು ಬೆಂಗಳೂರಿನ ಅತ್ಯಂತ ಜನಪ್ರಿಯ ವಿಷಯ ಎಂದು ಹೇಳಿದ್ದಾರೆ. ಇತರರು ಈ ಚಳಿಗೆ ಬುರ್ರಿಟೋದಂತೆ ಸುತ್ತಿಕೊಂಡು ಹೊರಗೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಇತರ ವೀಕ್ಷಕರು ಕಚೇರಿಯಿಂದ ಚಳಿಗಾಲದ ಭತ್ಯೆ ಬೇಕು ಎಂದು ಹೇಳಿದರು.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:07 am, ಮಂಗಳವಾರ, 2 ಡಿಸೆಂಬರ್ 25





Source link

Leave a Reply

Your email address will not be published. Required fields are marked *