ಬೆಂಗಳೂರು, ಡಿಸೆಂಬರ್ 2: ಕರ್ನಾಟಕ ಕಾಂಗ್ರೆಸ್ ನಲ್ಲಿ ಎದ್ದ ನಾಯಕತ್ವ ಬದಲಾವಣೆ, ಅಧಿಕಾರ ಹಂಚಿಕೆ ಚರ್ಚೆಗಳಿಗೆ ತೆರೆ ಎಳೆಯುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಣ ‘ಬ್ರೇಕ್ ಫಾಸ್ಟ್ ಮೀಟಿಂಗ್’ ಮುಂದುವರಿದಿದೆ. ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ, ನಾಟಿಕೋಳಿ ಸಾರು, ಬಿಸಿ ಬಿಸಿ ಇಡ್ಲಿ ಸವಿದರು. ಜೊತೆಗೆ ಮಾತುಕತೆ. ಆದರೆ, ಡಿಕೆ ಶಿವಕುಮಾರ್ ಮಾತ್ರ ಉಪಹಾರ ಕೂಟದಲ್ಲಿ ನಾನ್ ವೆಜ್ ಸೇವಿಸಲಿಲ್ಲ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ