‘ಬಾಹುಬಲಿ’ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿಯೇ ಇರುತ್ತೀರಿ. ಇದರಲ್ಲಿ ಕಟ್ಟಪ್ಪನು ಬಾಹುಬಲಿಗೆ ಖಡ್ಗದಿಂದ ಚುಚ್ಚುತ್ತಾನೆ. ಬಾಹುಬಲಿಯ ಆಪ್ತನಾಗಿರೋ ಕಟ್ಟಪ್ಪ ಹೀಗೇಕೆ ಮಾಡಿದ, ಇವರ ನಡುವಿನ ಗೆಳೆತನಕ್ಕೆ ಬೆಲೆಯೇ ಇಲ್ಲದಂತೆ ಆಯಿತೇ ಎಂಬ ಪ್ರಶ್ನೆಗಳು ಮೂಡುವಂತೆ ಆದವು. ಇದಕ್ಕೆ ಎರಡನೇ ಪಾರ್ಟಿಯಲ್ಲಿ ಉತ್ತರ ಸಿಗುತ್ತದೆ ಎಂಬುದು ಬೇರೆ ವಿಷಯ. ಈಗ ಬಿಗ್ ಬಾಸ್ (ಬಿಗ್ ಬಾಸ್) ಅಲ್ಲಿ ಗಿಲ್ಲಿ ಬೆನ್ನಿಗ್ಗೆ ರಘು ಅವರು ಚಾಕು ಹಾಕಿದ್ದನ್ನು ಹೀಗೆಯೇ ಬಿಂಬಿಸಲಾಗದು. ಈ ವಿಡಿಯೋ ವೈರಲ್ ಆಗಿದೆ.
ಬಿಗ್ ಬಾಸ್ ಅಲ್ಲಿ ರಘು ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಗೆಳತಿ ಮೂಡಿದೆ. ಆದರೆ ಕಳೆದ ವಾರದಿಂದ ಇವರ ಮಧ್ಯೆ ಬಿರುಕು ಮೂಡಿರುವುದನ್ನು ನೀವು ಕಾಣಬಹುದಾಗಿದೆ. ಗಿಲ್ಲಿ ಬಟ್ಟೆಯನ್ನು ಸಿಟ್ಟಿನಿಂದ ರಘು ಅವರು ಎಸೆದಿದ್ದರು. ಇದು ಚರ್ಚೆಗೆ ಕಾರಣವಾಗಿದೆ. ಗಿಲ್ಲಿಯನ್ನು ನಂಬಬಾರದು, ಆತನಿಗೆ ಕಿವಿಮಾತು ಹೇಳಬಾರದು ಎಂಬ ನಿರ್ಧಾರಕ್ಕೆ ರಘು ಬಂದಿದ್ದಾನೆ. ಆದರೆ, ಗಿಲ್ಲಿ ಮಾತ್ರ ರಘು ಗೆಳತನ ಬಿಡುತ್ತಿಲ್ಲ.
ಇದನ್ನೂ ಓದಿ: ‘ಆ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ’; ಬಿಗ್ ಬಾಸ್ ನಿಂದ ಹೊರ ಬಂದ ಜಾನ್ವಿ ಬೇಸರ
ನವೆಂಬರ್ 1 ರ ಎಪಿಸೋಡ್‌ನಲ್ಲಿ ನಾಮನಿರ್ದೇಶನ ಮಾಡಲು ಬಿಗ್ ಬಾಸ್ ಒಂದು ಚಟುವಟಿಕೆಯಾಗಿದೆ. ಬೆನ್ನಿಗೆ ಬೆಂಡಿನ ವಸ್ತು ಇರುತ್ತದೆ. ಇದಕ್ಕೆ ಚಾಕು ಹಾಕುವ ಮೂಲಕ ನಾಮನಿರ್ದೇಶನ ಮಾಡಬೇಕು. ರಘು ಅವರು ಒಂದು ಚಾಕುವನ್ನು ಗಿಲ್ಲಿಗೆ ಹಾಕಿದ್ದು, ಅವರನ್ನು ನಾಮಿನೇಟ್ ಮಾಡಿದರು. ಗಿಲ್ಲಿಯನ್ನು ರಘು ನಾಮಿನೇಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ರಘು ನಾಮಿನೇಟ್ ಮಾಡಿದ್ದನ್ನು ಅನೇಕರು ಕಟ್ಟಪ್ಪನು ಬಾಹುಬಲಿಗೆ ಚಾಕು ಹಾಕಿದಕ್ಕೆ ಹೋಲಿಕೆ ಮಾಡಿದ್ದಾರೆ.
ಗಿಲ್ಲಿ ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಅತಿರೇಕದಿಂದ ಆಡಿದ ಉದಾಹರಣೆ ಇದೆ. ಗಿಲ್ಲಿ ಬಳಿ ಸಾಕಷ್ಟು ಬಟ್ಟೆ ಇದೆ. ಆದರೆ, ಇದನ್ನು ಅವರು ಧರಿಸೋದಿಲ್ಲ ಎಂಬುದು ರಘು ಆರೋಪ. ಇದು ಸಿಂಪತಿ ಗಿಟ್ಟಿಸಿಕೊಳ್ಳುವ ಟ್ರಿಕ್ ಎಂಬ ರೀತಿಯಲ್ಲೂ ಬಿಂಬಿತವಾಗಿದೆ. ಈ ವಿಷಯವನ್ನು ಗಿಲ್ಲಿ ಹಾಗೂ ಕಾವ್ಯ ಒಪ್ಪಿಲ್ಲ. ಅಶ್ವಿನಿ ಕೂಡ ಗಿಲ್ಲಿ ಪರವಾಗಿ ಇಬ್ಬರು. ರಘು ಹಾಗೂ ಗಿಲ್ಲಿ ಎಷ್ಟು ಕಿತ್ತಾಡಿಕೊಂಡರೂ ಕೊನೆಯಲ್ಲಿ ಒಂದಾಗುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.