ಬೆಂಗಳೂರು, ಡಿ.2: ಇಂದಿನ ಯುವ ಜನರಿಗೆ ಉದ್ಯೋಗದಲ್ಲಿ ನೆಮ್ಮದಿ ಇಲ್ಲ. ಏಕೆಂದರೆ ಕಂಪನಿಗಳಲ್ಲಿ ಹೆಚ್ಚುತ್ತಿರುವ ಕೆಲಸದ ಒತ್ತಡ. ಈ ಕಾಪೋರೇಟ್ ಕಂಪನಿಗಳಲ್ಲಿ (ಕಾರ್ಪೊರೇಟ್ ಒತ್ತಡ) ಸ್ಯಾಲರಿಗೆ ತಕ್ಕಂತೆ ಕೆಲಸ ಇಲ್ಲ. ಕೆಲಸ ಹೆಚ್ಚು, ಸಂಬಳ ಕಡಿಮೆ ಎಂಬ ಆರೋಪಗಳಿವೆ. ಕೆಲಸದಿಂದ ಯುವಕರ ಜೀವನ ಹಾಳಾಗುತ್ತಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೋ ಮೀಮ್ಸ್ ವೈರಲ್ ಆಗುತ್ತಿದೆ. ಇದರ ನಡುವೆ ಈ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಬೆಂಗಳೂರಿನ ಉದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನಸ್ಸು ಗೆದ್ದಿದ್ದಾರೆ. 22 ವರ್ಷದ ಅನ್ಶುಲ್ ಉತ್ತಯ್ಯ ಸೋಮವಾರದಂದು ಈ ವಿಡಿಯೋವನ್ನು ಹಂಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ. ತಾನು ಮಾಡುತ್ತಿರುವ ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ಇನ್ಸ್ಟಾಗ್ರಾಮ್ನಲ್ಲಿ ಹೇಳಲಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಹೀಗೆ ಬರೆದಿದ್ದಾರೆ. “ನಾನು ನಾಳೆ ನನ್ನ ಕೆಲಸವನ್ನು ಬಿಡುತ್ತೇನೆ. ಕೆಲಸ ಬಿಟ್ಟ ನಂತರ ಏನು ಮಾಡಬೇಕು ಎಂದು ತಿಳಿದಿಲ್ಲ. ನಾನು ಮಾಡುವ ಕೆಲಸವನ್ನು ನಾನು ದ್ವೇಷಿಸುತ್ತೇನೆ. ನನ್ನ ಜೀವನದಲ್ಲಿ ಈ ಕೆಟ್ಟ ಕ್ಷಣವನ್ನು ದೂರು ಮಾಡುತ್ತೇನೆ. ಆಸ್ಟ್ರೇಲಿಯಾದ ಎರಡು ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದೇನೆ. ಆದರೆ ಅದನ್ನು ಬಿಟ್ಟು ಈ ಕೆಲಸಕ್ಕೆ ಬಂದೆ. ಬೆಳಿಗ್ಗೆ 7:45 ಕ್ಕೆ, 10.00 ಗಂಟೆಯೊಳಗೆ ನನಗೆ ಹಿಂಸೆ ನೀಡುತ್ತಿದೆ.
ಇದನ್ನೂ ಓದಿ: ಈ ದೇವಸ್ಥಾನದಲ್ಲಿ ಪಿಜ್ಜಾ, ಪಾನಿಪುರಿಯೇ ಪ್ರಸಾದ, ಇದರ ಹಿಂದಿದೆ ಪ್ರಮುಖ ಕಾರಣ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ಇನ್ನು ಮಗನ ಈ ನಿರ್ಧಾರದ ಬಗ್ಗೆ ಅನ್ಶುಲ್ ಉತ್ತಯ್ಯ ಅವರ ತಂದೆ -ತಾಯಿಗೆ ಖುಷಿ ತಂದಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಅನ್ಶುಲ್ ಉತ್ತಯ್ಯ ಅವರು ಈ ವಿಡಿಯೋವನ್ನು ಹಂಚಿಕೊಳ್ಳುವ ಮೊದಲು 10,000 ಫಾಲರ್‌ಗಳನ್ನು ಹೊಂದಿದ್ದಾರೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ 20 ಸಾವಿರ ಫಾಲೋರ್ಸ್‌ಗಳನ್ನು ಗಳಿಸಿದ್ದಾರೆ. ಈ ವಿಡಿಯೋ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಅವರು ಮೂರು ತಿಂಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿನ ವಿಷಯಗಳ ಬಗ್ಗೆ ವೀಡಿಯೊವನ್ನು ಹಂಚಿಕೊಳ್ಳುತ್ತಿದ್ದರು. ಯಾವುದೇ ಕೆಲಸವನ್ನು ಬಿಟ್ಟು ತಮ್ಮ ಪೂರ್ತಿ ಸಮಯವನ್ನು ಇನ್ಸ್ಟಾಗ್ರಾಮ್ಗೆ ನೀಡಲು ಬಯಸಿದ್ದಾರೆ. ಇದೀಗ ಅನ್ಶುಲ್ ಉತ್ತಯ್ಯ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಕಮೆಂಟ್ ಬಂದಿದೆ. ಒಬ್ಬರು ಬೆಂಗಳೂರಿನಲ್ಲಿ ಶೀತ ಹಾಗೂ ಹವಾಮಾನ ವಾತಾವರಣ ಇದೆ.ಇದರ ಮಧ್ಯೆ ಇದೊಂದು ವಿಚಾರ ಎಂದು ತಮಾಷೆಯಾಗಿ ಹೇಳಿದ್ದಾರೆ. ಅರ್ಪಿತಾ ಶರ್ಮಾ ಎಂಬುವವರು, ನನ್ನ ಕಡೆಯಿಂದ ಸಂಪೂರ್ಣ ಮತ್ತು ನಿಮಗೆ ದೊಡ್ಡ ಅಭಿನಂದನೆಗಳು ಎಂದು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ