ಬೆಳಗಾವಿ, ಡಿಸೆಂಬರ್ 02: ತಳ್ಳುಗಾಡಿ ತಂದು ಎಟಿಎಂ ಯಂತ್ರವನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ಬೆಳಗಾವಿ ತಾಲೂಕು ಹೊಸ ವಂಟಮೂರಿ ಗ್ರಾಮದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಇಂಡಿಯಾ ಬ್ಯಾಂಕ್ ಎಂಟಿಎಂಗೆ ಮೂವರ ಗ್ಯಾಂಗ್ ಕನ್ನಹಾಕಿದೆ. ಎಟಿಎಂ ಯಂತ್ರ ಹೊರ ತೆಗೆದು ತಳ್ಳುವ ಗಾಡಿಯಲ್ಲಿಟ್ಟುಕೊಂಡು, ಸುಮಾರು 200 ಮೀಟರ್ ಗ್ಯಾಂಗ್ ಕ್ರಮಿಸಿದೆ. ಅಲ್ಲಿಂದ ತಮ್ಮ ವಾಹನಕ್ಕೆ ಎಟಿಎಂ ಯಂತ್ರ ಸಾಗಿಸಿ, ಎಸ್ಕೇಪ್ ಆಗಿದೆ. ಖದೀಮರ ಕೈ ಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆ ಹಿಡಿದ, ಒಂದು ಲಕ್ಷ ಅಧಿಕ ಹಣ ಎಟಿಎಂನಲ್ಲಿದೆ. ಸ್ಥಳಕ್ಕೆ ಕಾಕತಿ ಪೊಲೀಸರ ಭೇಟಿ ನೀಡಿ ಪರಿಶೀಲನೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.