Headlines

ಪುತ್ತೂರು: ಇಎನ್​ಟಿ ಕ್ಲಿನಿಕ್​ಗೆ ನುಗ್ಗಿ ಸಿಬ್ಬಂದಿ ಮೇಲೆ ಮನಸೋ ಇಚ್ಛೆ ಹಲ್ಲೆ

ಪುತ್ತೂರು: ಇಎನ್​ಟಿ ಕ್ಲಿನಿಕ್​ಗೆ ನುಗ್ಗಿ ಸಿಬ್ಬಂದಿ ಮೇಲೆ ಮನಸೋ ಇಚ್ಛೆ ಹಲ್ಲೆ


ಮಂಗಳೂರು, ಡಿಸೆಂಬರ್ 02: ಪರಿಚಯಸ್ಥರ ತಪಾಸಣೆಗೆ ಬೇಗ ಒಳಗೆ ಬಿಟ್ಟಿಲ್ಲವೆಂದು ಇನ್‌ಟಿ ಕ್ಲಿನಿಕ್‌ಗೆ ನುಗ್ಗಿ ಸಿಬ್ಬಂದಿ ಮೇಲೆ ದುಷ್ಕರ್ಮಿಯೋರ್ವ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ದರ್ಬೆಯಲ್ಲಿ ನಡೆದಿದೆ. ಡಾ.ರಾಮಮೋಹನ ರಾವ್‌ ಕ್ಲಿನಿಕ್‌ಗೆ ನುಗ್ಗಿದ ಬಪ್ಪಳಿಗೆ ನಿವಾಸಿ ಇಬ್ರಾಹಿಂ, ಸಿಬ್ಬಂದಿ ಶ್ರೀಕಾಂತ್‌ ಮೇಲೆ ಹಲ್ಲೆ ನಡೆಸಿ ಗ್ಲಾಸ್‌ ಪುಡಿಪುಡಿಗೈದಿದ್ದಾರೆ. ಜೊತೆಗೆ ಕ್ಲಿನಿಕ್ ಗೆ ಬಂದಿದ್ದವರನ್ನು ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ನವೆಂಬರ್ 29ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ಲಿನಿಕ್‌ಗೆ ನುಗ್ಗಿ ದಾಂಧಲೆ ನಡೆಸಿದ ಇಬ್ರಾಹಿಂ ವಿರುದ್ಧ ಕೇಸ್ ದಾಖಲಾಗಿದ್ದು, ಸಿಸಿಕ್ಯಾಮರಾ ದೃಶ್ಯ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *