PMO office shift ಪ್ರಧಾನ ಮಂತ್ರಿ ಕಾರ್ಯಾಲಯ ಹೊಸ ಕಟ್ಟಡಕ್ಕೆ ಶಿಫ್ಟ್, ಸೇವಾ ತೀರ್ಥ್ ಆಫೀಸ್‌ನಿಂದ ಕೆಲಸ | Prime Minister Office Set To Shift New Sewa Theerth 1 Building

PMO office shift ಪ್ರಧಾನ ಮಂತ್ರಿ ಕಾರ್ಯಾಲಯ ಹೊಸ ಕಟ್ಟಡಕ್ಕೆ ಶಿಫ್ಟ್, ಸೇವಾ ತೀರ್ಥ್ ಆಫೀಸ್‌ನಿಂದ ಕೆಲಸ | Prime Minister Office Set To Shift New Sewa Theerth 1 Building



PMO office shift ಪ್ರಧಾನ ಮಂತ್ರಿ ಕಾರ್ಯಾಲಯ ಹೊಸ ಕಟ್ಟಡಕ್ಕೆ ಶಿಫ್ಟ್, ಸೇವಾ ತೀರ್ಥ್ ಆಫೀಸ್‌ನಿಂದ ಕೆಲಸ | Prime Minister Office Set To Shift New Sewa Theerth 1 Building

ಪ್ರಧಾನ ಮಂತ್ರಿ ಕಾರ್ಯಾಲಯ ಹೊಸ ಕಟ್ಟಡಕ್ಕೆ ಶಿಫ್ಟ್, ಸೇವಾ ತೀರ್ಥ್ ಆಫೀಸ್‌ನಿಂದ ಕೆಲಸ, ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರ ಮಾತ್ರವಲ್ಲ ಪ್ರಧಾನಿ, ರಾಜ್ಯಪಾಲರು ಸೇರಿದಂತೆ ಹಲವು ಪ್ರಮುಖ ಕಚೇರಿಗಳ ಹೆಸರು ಮರುನಾಮಕರಣ ಮಾಡಲಾಗಿದೆ.

ನವದೆಹಲಿ (ಡಿ.02) ಭಾರತದ ಪ್ರಧಾನ ಮಂತ್ರಿಗಳ ಕಾರ್ಯಾಲಯದ ವಿಳಾಸ ಹೆಚ್ಚು ಹುಡುಕಬೇಕಿಲ್ಲ. ಕಾರಣ ಕಳೆದ 78 ವರ್ಷಗಳಿಂದ ಸೌತ್ ಬ್ಲಾಕ್‌ನಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಇದೀಗ ಹೊಸ ಕಟ್ಟಡಕ್ಕೆ ಪ್ರಧಾನ ಮಂತ್ರಿಗಳ ಕಾರ್ಯಾಲಯ ಸ್ಥಳಾಂತರಗೊಳ್ಳುತ್ತಿದೆ. ಸೆಂಟ್ರಲ್ ವಿಸ್ತಾ ಯೋಜನೆಯಡಿ ಹೊಸದಾಗಿ ನಿರ್ಮಿಸಲಾದ ಹೊಸ ಕಟ್ಟಡಕ್ಕೆ ಪಿಎಂಒ ಶೀಘ್ರದಲ್ಲೇ ಶಿಫ್ಟ್ ಆಗಲಿದೆ. ಹೊಸ ಕಟ್ಟದ ಸೇವಾ ತೀರ್ಥ 1ರಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯ ಕೆಲಸ ನಿರ್ವಹಿಸಲಿದೆ.

ಒಟ್ಟು ಸೇವಾ ತೀರ್ಥ್ ಕಚೇರಿ

ವಾಯುಭವನದ ಪಕ್ಕದಲ್ಲೇ ನಿರ್ಮಾಣಗೊಂಡಿರುವ ಎಕ್ಯಿಕ್ಯೂಟೀವ್ ಕಾಂಕ್ಲೇವ್1 ಕಟ್ಟದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯ ಇರಲಿದೆ. ಒಟ್ಟು ಮೂರು ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಪೈಕಿ ಸೇವಾ ತೀರ್ಥ 1ರಲ್ಲಿ ಪ್ರಧಾನಿಗಳ ಕಾರ್ಯಾಲಯ ಇರಲಿದೆ. ಇನ್ನು ಸೇವಾ ತೀರ್ಥ 2ರಲ್ಲಿ ಕ್ಯಾಬಿನೆಟ್ ಸೆಕ್ರಟರಿಯೇಟ್ ಹಾಗೂ ಸೇವಾ ತೀರ್ಥ3ರಲ್ಲಿ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ (ರಾಷ್ಟ್ರೀಯ ಭದ್ರತಾ ಸಲಹಾಗಾರ) ಅಜಿತ್ ದೋವಲ್ ಕಚೇರಿ ಇರಲಿದೆ.

ಹಲವು ಹೆಸರು ಮರುನಾಮಕರಣ

ಇತ್ತೀಚೆಗೆ ಕೇಂದ್ರ ಸರ್ಕಾರ ಸರ್ಕಾರದ ಸೇವೆ, ಕಚೇರಿ, ಮಾರ್ಗ ಸೇರಿದಂತೆ ಹಲವು ಹೆಸರುಗಳನ್ನು ಮರುನಾಮಕರಣ ಮಾಡಿದೆ. ಪ್ರಮುಖವಾಗಿ ರಾಜಪಥವನ್ನು ಕರ್ತವ್ಯಪಥ ಎಂದು ಮರುನಾಮಕರಣ ಮಾಡಲಾಗಿತ್ತು. ಇದೀಗ ದೆಹಲಿಯ ರಾಜ್ಯಪಾಲರ ರಾಜ ಭವನವನ್ನು ಲೋಕಭವನ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ರೀತಿ ಕಾರ್ಯಾಗಳನ್ನು ಸೇವಾ ತೀರ್ಥ ಸೇರಿದಂತೆ ಹಲವು ಹೆಸರುಗಳಿಂದ ಮರುನಾಮಕರಣ ಮಾಡಲಾಗಿದೆ. ಸೆಂಟ್ರಲ್ ಸೆಕ್ರಟರಿಯೇಟ್‌ನ್ನು ಕರ್ತವ್ಯ ಭವನ ಎಂದು ಮರುನಾಮಕರಣ ಮಾಡಲಾಗಿದೆ.

ಸಚಿವಾಲಯಗಳ ಕಚೇರಿ ಹೊಸ ಕಟ್ಟಡಕ್ಕೆ

ಹಲವು ಸಚಿವಾಲಯಗಳ ಕಚೇರಿಗಳು ಈಗಾಗಲೇ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಪ್ರಮುಖವಾಗಿ ಶಾಸ್ತ್ರಿ ಭವನ, ನಿರ್ಮಾನ್ ಭವನ್, ಕೃಷಿ ಭವನ್ ಸೇರಿದಂತೆ ಹಲವು ಸಚಿವಾಲಯಗಳು ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೆಕ್ರಟರಿಯೇಟ್ ಕಟ್ಟಡವನ್ನು ಕರ್ತವ್ಯ ಭವನ ಎಂದು ಮರುನಾಮಕರಣ ಮಾಡುವ ಮೂಲಕ ಬ್ರಿಟಿಷರ ಕಾಲದ ವಸಾತುಶಾಹಿ ಆಡಳಿತದ ನೆರಳಿನಿಂದ ಹೊರಬರುವ ಪ್ರಯತ್ನ ಮಾಡಲಾಗಿದೆ.

ಸೆಂಟ್ರಲ್ ವಿಸ್ತಾ ಯೋಜನೆಯಿಂದ ಐತಿಹಾಸಿಕ ಸೌತ್ ಬ್ಲಾಕ್ ಹಾಗೂ ನಾರ್ತ್ ಬ್ಲಾಕ್ ಕಟ್ಟಡಗಳನ್ನು ಭಾರತ್ ಸಂಗ್ರಹಾಲಯವಾಗಿ ಮಾರ್ಪಡು ಮಾಡಲಾಗುತ್ತಿದೆ.



Source link

Leave a Reply

Your email address will not be published. Required fields are marked *