Headlines

ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಗಮನ ಸೆಳೆದ ಇಡ್ಲಿ, ನಾಟಿಕೋಳಿ ಸಾರು

ಸಿಎಂ-ಡಿಸಿಎಂ ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಗಮನ ಸೆಳೆದ ಇಡ್ಲಿ, ನಾಟಿಕೋಳಿ ಸಾರು


ರಾಜ್ಯ ಕಾಂಗ್ರೆಸ್‌ನಲ್ಲಿ ಪವರ್‌ ಶೇರಿಂಗ್‌ ಪಾಲಿಟಿಕ್ಸ್‌ ಜೋರಾಗದಂತೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ಗಳು ಸಹ ಬಹಳ ಜೋರಾಗಿಯೇ ನಡೆಯುತ್ತಿವೆ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆದಿದೆ. ಇಂದು ಡಿಸಿಎಂ ಡಿಕೆ ಶಿವಕುಮಾರ್ ನಿವಾಸದಲ್ಲಿ ಪವರ್ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆದಿದ್ದು, ಈ ಉಪಹಾರ ಕೂಟದಲ್ಲಿ ಭಾಗಿಯಾದ ಸಿದ್ದರಾಮಯ್ಯ ನಾಟಿ ಕೋಳಿ ಸಾರು (ನಾಟಿ ಕೋಳಿ ಕರಿ), ಇಡ್ಲಿ ಸವಿದರು. ನಮ್ಮ ಕರ್ನಾಟಕದ ಈ ನಾಟಿ ಕೋಳಿ ಸಾರಿನ ವಿಶೇಷತೆಗಳ ಬಗ್ಗೆ ತಿಳಿಯೋಣ.

ನಾಟಿಕೋಳಿ ಸಾರಿನ ವಿಶೇಷತೆಗಳೇನು?

ನಾಟಿಕೋಳಿ ಸಾರು ನಾನ್‌ವೆಜ್‌ ಪ್ರಿಯರ ಫೇವರೆಟ್‌ ರೆಸಿಪಿ. ಸಿಎಂ ಸಿದ್ದರಾಮಯ್ಯ ಅವರಿಗೂ ನಾಟಿಕೋಳಿ ಸಾರು ಎಂದರೆ ಸಖತ್ ಇಷ್ಟವಂತೆ. ವಾಣಿಜ್ಯಿಕವಾಗಿ ಬೆಳೆಯುವ ಬ್ರಾಯ್ಲರ್ ಕೋಳಿಗೆ ನಾಟಿ ಕೋಳಿ ತಿನ್ನಲು ತುಂಬಾ ರುಚಿಕರವಾಗಿದೆ. ಇವುಗಳನ್ನು ವಿಶೇಷವಾಗಿ ಹಳ್ಳಿಕಡೆಗಳಲ್ಲಿ ನೈಸರ್ಗಿಕ ವಿಧಾನಗಳ ಮೂಲಕವೇ ಸಾಕಣೆ ಮಾಡಲಾಗುವುದು. ಅವು ಅಲ್ಲಿ ಅಕ್ಕಿ, ಗೋಧಿ, ಹುಲ್ಲು, ಕೀಟಗಳನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಅಧಿಕ ಪ್ರೋಟಿನ್, ಕಡಿಮೆ ಕೊಬ್ಬು ಹೊಂದಿರುವ ಶಕ್ತಿವರ್ಧಕ ಆಹಾರವಾಗಿರುವ ನಾಟಿಕೋಳಿ ಸಖತ್ ರುಚಿಕರವಾಗಿದೆ. ನಮ್ಮ ಕರ್ನಾಟಕದಲ್ಲಿ ಇಡ್ಲಿ, ಮುದ್ದೆ ಜೊತೆ ನಾಟಿ ಕೋಳಿ ಸಾರನ್ನು ಉಣಬಡಿಸುತ್ತಾರೆ. ನಾಟಿಕೋಳಿ ಸಾರಿನ ಟೇಸ್ಟ್ ತಿಂದವರಿಗಷ್ಟೇ ಗೊತ್ತು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *