ಬೆಳಗಾವಿ ಎಟಿಎಂ ಯಂತ್ರ ಕದ್ದೊಯ್ದರೂ ಕಳ್ಳರ ಕೈಗೆ ಸಿಗಲಿಲ್ಲ ಹಣ! ಲಾಕರ್ ತೆಗೆಲಾಗದೇ ಬೀಸಾಡಿ ಹೋದ ಗ್ಯಾಂಗ್! | Belagavi Atm Theft Failed To Get Money Trolley Gang Absconding Sat

ಬೆಳಗಾವಿ ಎಟಿಎಂ ಯಂತ್ರ ಕದ್ದೊಯ್ದರೂ ಕಳ್ಳರ ಕೈಗೆ ಸಿಗಲಿಲ್ಲ ಹಣ! ಲಾಕರ್ ತೆಗೆಲಾಗದೇ ಬೀಸಾಡಿ ಹೋದ ಗ್ಯಾಂಗ್! | Belagavi Atm Theft Failed To Get Money Trolley Gang Absconding Sat


16

ಎಟಿಎಂ ಕದ್ದರೂ, ಹಣ ಕದಿಯಲು ವಿಫಲರಾದ ಕಳ್ಳರು

Image Credit : Asianet News

ಎಟಿಎಂ ಕದ್ದರೂ, ಹಣ ಕದಿಯಲು ವಿಫಲರಾದ ಕಳ್ಳರು

ಬೆಳಗಾವಿಯಲ್ಲಿ ನಿನ್ನೆ ರಾತ್ರಿ ವೇಳೆ ‘ತಳ್ಳುಗಾಡಿ ಬಳಸಿ ಎಟಿಎಂ ಮಷಿನ್ ಹೊತ್ತೊಯ್ದ’ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. 

ಕಳ್ಳರು ಎಟಿಎಂ ಯಂತ್ರವನ್ನು ಕದ್ದು ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೆ ಎಳೆದೊಯ್ದರೂ, ಅದನ್ನು ತೆರೆಯಲು ಸಾಧ್ಯವಾಗದೆ, ಹಣವನ್ನೂ ದೋಚಲು ವಿಫಲರಾಗಿ ಮಷಿನ್ ಅನ್ನು ರಸ್ತೆಯಲ್ಲಿಯೇ ಎಸೆದು ಪರಾರಿಯಾಗಿದ್ದಾರೆ. ಈ ಕುರಿತು ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಮಾಹಿತಿ ನೀಡಿದ್ದಾರೆ.

26

ಕಳ್ಳತನದ ವಿಫಲ ಯತ್ನದ ವಿವರ

Image Credit : Asianet News

ಕಳ್ಳತನದ ವಿಫಲ ಯತ್ನದ ವಿವರ

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಹೊಂದಿಕೊಂಡಿರುವ ಇಂಡಿಕ್ಯಾಶ್ (Indicash) ಎಟಿಎಂನಲ್ಲಿ ನವೆಂಬರ್ 30ರಂದು ತಡರಾತ್ರಿ 3 ಗಂಟೆ ಸುಮಾರಿಗೆ ಈ ಕಳ್ಳತನದ ಯತ್ನ ನಡೆದಿತ್ತು.

36

ಬ್ಲ್ಯಾಕ್ ಸ್ಪ್ರೇ ಐಡಿಯಾ

Image Credit : Asianet News

ಬ್ಲ್ಯಾಕ್ ಸ್ಪ್ರೇ ಐಡಿಯಾ

ಮೂವರು ಖದೀಮರು ಎಟಿಎಂ ಕೇಂದ್ರಕ್ಕೆ ನುಗ್ಗಿ, ಶಬ್ದವಾದರೆ ಅಲಾರಾಂ ಟ್ರಿಗರ್ ಆಗದಂತೆ ಸೆನ್ಸಾರ್‌ಗಳ ಮೇಲೆ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೇಲೆ ಬ್ಲ್ಯಾಕ್ ಸ್ಪ್ರೇ ಬಳಸಿ ಮಷಿನ್ ಅನ್ನು ಬೇರ್ಪಡಿಸಿದ್ದಾರೆ.

46

ತಳ್ಳುಗಾಡಿಯಲ್ಲಿ ಕಳವು

Image Credit : Asianet News

ತಳ್ಳುಗಾಡಿಯಲ್ಲಿ ಕಳವು

ಯಾವುದೇ ಸಂಶಯ ಬಾರದಂತೆ, ಅವರು ಮಷಿನ್ ಅನ್ನು ತಳ್ಳುಗಾಡಿ (ಟ್ರಾಲಿಯಲ್ಲಿ) ಇಟ್ಟುಕೊಂಡು ಸುಮಾರು 200 ಮೀಟರ್ ದೂರದವರೆಗೆ ತಳ್ಳಿಕೊಂಡು ಹೋಗಿ, ನಂತರ ತಮ್ಮ ವಾಹನದಲ್ಲಿ ಅರ್ಧ ಕಿಲೋಮೀಟರ್ ದೂರದವರೆಗೆ ಕೊಂಡೊಯ್ದಿದ್ದಾರೆ. ಎಟಿಎಂ ಮಷಿನ್‌ನಲ್ಲಿ 1 ಲಕ್ಷ ರೂಪಾಯಿಗೂ ಅಧಿಕ ಹಣವಿತ್ತು ಎಂದು ತಿಳಿದುಬಂದಿದೆ. ಕಳ್ಳರು ಅದನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ ನಂತರ ಹಣ ಪಡೆಯಲು ಯತ್ನಿಸಿದ್ದಾರೆ.

56

ಗ್ಯಾಸ್ ಕಟ್ಟರ್‌ನಿಂದ ಓಪನ್ ಮಾಡಲು ಪ್ರಯತ್ನ

Image Credit : Asianet News

ಗ್ಯಾಸ್ ಕಟ್ಟರ್‌ನಿಂದ ಓಪನ್ ಮಾಡಲು ಪ್ರಯತ್ನ

ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹೇಳಿಕೆಯ ಪ್ರಕಾರ, ‘ಕಳ್ಳರು ಎಟಿಎಂ ಮಷಿನ್ ಅನ್ನು ಗ್ಯಾಸ್ ಕಟ್ಟರ್‌ನಿಂದ ಓಪನ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಎಟಿಎಂ ಬಲವಾದ ಭದ್ರತೆ ಹೊಂದಿದ್ದ ಕಾರಣ ಅದನ್ನು ತೆರೆಯಲು ಅವರಿಗೆ ಸಾಧ್ಯವಾಗಿಲ್ಲ. ಯಶಸ್ಸು ಸಿಗದ ಕಾರಣ ಕಳ್ಳರು ಕೋಪದಲ್ಲಿ ಮಷಿನ್ ಅನ್ನು ಅರ್ಧ ಕಿಲೋಮೀಟರ್ ದೂರದಲ್ಲಿ ಎಸೆದು ಪರಾರಿಯಾಗಿದ್ದಾರೆ.

66

ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡ

Image Credit : Asianet News

ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡ

ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದ್ದು, ಕಳ್ಳತನಕ್ಕೆ ಯತ್ನಿಸಿದ ಖದೀಮರ ಐಡಿಯಾ ಕಂಡು ಪೊಲೀಸರು ದಂಗಾಗಿದ್ದರು. ಕಳ್ಳತನದ ವಿಫಲ ಯತ್ನದ ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

ತಲೆಮರೆಸಿಕೊಂಡಿರುವ ಕಳ್ಳರನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಕಮಿಷನರ್ ಭರವಸೆ ನೀಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ



Source link

Leave a Reply

Your email address will not be published. Required fields are marked *