ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಅಪಾಯದ ಮುನ್ಸೂಚನೆ ಕೊಡುವ ಅಲರ್ಟ್ ಸಿಸ್ಟಂ; ರಿಲಾಯನ್ಸ್ ಜಿಯೋ ಜೊತೆ ಹೆದ್ದಾರಿ ಪ್ರಾಧಿಕಾರ ಒಪ್ಪಂದ

ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಅಪಾಯದ ಮುನ್ಸೂಚನೆ ಕೊಡುವ ಅಲರ್ಟ್ ಸಿಸ್ಟಂ; ರಿಲಾಯನ್ಸ್ ಜಿಯೋ ಜೊತೆ ಹೆದ್ದಾರಿ ಪ್ರಾಧಿಕಾರ ಒಪ್ಪಂದ


ನವೆಂಬರ್ 2: ದೇಶಾದ್ಯಂತ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ವಿವಿಧ ಅಪಾಯಗಳ ಮುನ್ಸೂಚನೆ ನೀಡುವಂತಹ ಅಟ್ ಸಿಸ್ಟಂ (ಹೈವೇ ಅಲರ್ಟ್ ಸಿಸ್ಟಮ್) ಅನ್ನು ಜಾರಿಗೆ ತರಲು ರಿಲಯನ್ಸ್ ಜಿಯೋ (ರಿಲಯನ್ಸ್ ಜಿಯೋ) ಸಂಸ್ಥೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI- ನ್ಯಾಷನಲ್ ಹೈವೇಸ್ ಅಥಾರಿಟಿ ಆಫ್ ಇಂಡಿಯಾ) ಎಂಒಯು ಒಪ್ಪಂದವನ್ನು ಮಾಡಿಕೊಂಡಿದೆ. ಈ ಯೋಜನೆ ಪ್ರಕಾರ, ಮೊಬೈಲ್ ಮೂಲಕ ಈ ಎಚ್ಚರಿಕೆ ಮೆಸೇಜ್‌ಗಳು ಪ್ರಯಾಣಿಕರಿಗೆ ಮುಂಚಿತವಾಗಿ ಹೋಗುತ್ತವೆ.

ರಸ್ತೆಗಳಲ್ಲಿ ಹೋಗುವಾಗ ಮುಂದೆ ಆಕ್ಸಿಡೆಂಟ್ ಜೋನ್ ಇದ್ದರೆ, ಅಥವಾ ಬೀಡಾಡಿ ದನಗಳ ಸಂಚಾರ ಇರಬಹುದು, ದಟ್ಟ ಮಂಜು ಕವಿದ ಪ್ರದೇಶವಿದ್ದರೆ, ಅಥವಾ ತುರ್ತು ತಿರುವು ಇದ್ದರೆ ಅಂತಹ ಪ್ರಯಾಣಿಕರಿಗೆ ಮುಂಚಿತವಾಗಿ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುವ ಉದ್ದೇಶ ಈ ಯೋಜನೆಯಲ್ಲಿದೆ.

ಇದನ್ನೂ ಓದಿ: 22 ವರ್ಷದ ಕನ್ನಡಿಗ ಆದರ್ಶ ಹಿರೇಮಠ ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್

ಮುನ್ನೆಚ್ಚರಿಕೆಯ ಸಂದೇಶಗಳನ್ನು ವಿವಿಧ ರೀತಿಯಲ್ಲಿ ಕಳುಹಿಸಬಹುದು. ಎಸ್ಸೆಮ್ಮೆಸ್ ಮೂಲಕ ಹೋಗಬಹುದು, ವಾಟ್ಸಾಪ್ ಮೂಲಕ ಹೋಗಬಹುದು. ಅಥವಾ ಹೈ ಪ್ರಯಾರಿಟಿ ಕಾಲ್ಗಳ ಮೂಲಕ ಅಲರ್ಟ್ ಕಳುಹಿಸಬಹುದು. ಈ ಮೆಸೇಜುಗಳನ್ನು ನೋಡಿ ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಲಾಯಿಸಲು ಸಾಧ್ಯ.

ರಾಜಮಾರ್ಗ ಯಾತ್ರಾ ಮೊಬೈಲ್ ಆಪ್, ಎಮರ್ಜೆನ್ಸಿ ಸಹಾಯವಾಣಿ 1022 ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ವಿವಿಧ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕ್ರಮೇಣವಾಗಿ ಈ ಅಲರ್ಟ್ ಸಿಸ್ಟಂ ಅನ್ನು ಜೋಡಿಸುವ ಉದ್ದೇಶವಿದೆ.

ಇದನ್ನೂ ಓದಿ: ಗಿಫ್ಟ್ ಡೀಡ್ ಮಾಡಿದ ಆಸ್ತಿಯನ್ನು ಹಿಂಪಡೆಯಲು ಸಾಧ್ಯವಾ? ಕೋರ್ಟ್ ನೀಡಿದ ಮಹತ್ವದ ತೀರ್ಪಿದು

ಸದ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಎಲ್ಲಾ ಜಿಯೋ ಬಳಕೆದಾರರ ಮೊಬೈಲ್‌ಗಳಲ್ಲಿ ಈ ಆಟೋಮೇಟೆಡ್ ಸಿಸ್ಟಂ ಕೆಲಸ ಮಾಡುತ್ತದೆ. ದೇಶಾದ್ಯಂತ ಇರುವ ಜಿಯೋದ 4ಜಿ ಮತ್ತು 5ಜಿ ನೆಟ್ವರ್ಕ್ಗಳು ​​ಈ ಅಡ್ವಾನ್ಸ್ಡ್ ಸಿಸ್ಟಂ ಜಾರಿಗೆ ಸಹಾಯಕವಾಗಿದೆ. ಇದೇ ವೇಳೆ, ಎನ್‌ಎಚ್‌ಎಐ ಇತರ ಟೆಲಿಕಾಂ ಕಂಪನಿಗಳಿಗೂ ಇದೇ ರೀತಿ ಒಪ್ಪಂದಕ್ಕೆ ಮುಂದಾಗಲಿದೆ. ಏರ್ಟೆಲ್ ಮತ್ತು ಇತರ ಟೆಲಿಕಾಂ ಬಳಕೆದಾರರಿಗೂ ಈ ಸೇವೆ ಮುಂದಿನ ದಿನಗಳಲ್ಲಿ ಲಭ್ಯವಿರುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *