Headlines

ಸಣ್ಣ ಕಂಪನಿ ಎನಿಸಿಕೊಳ್ಳಲು ಟರ್ನೋವರ್ ಮಿತಿ 100 ಕೋಟಿ ರೂಗೆ ಹೆಚ್ಚಳ; ಉದ್ದಿಮೆಗಳಿಗೆ ಏನು ಉಪಯೋಗ?

ಸಣ್ಣ ಕಂಪನಿ ಎನಿಸಿಕೊಳ್ಳಲು ಟರ್ನೋವರ್ ಮಿತಿ 100 ಕೋಟಿ ರೂಗೆ ಹೆಚ್ಚಳ; ಉದ್ದಿಮೆಗಳಿಗೆ ಏನು ಉಪಯೋಗ?


ನವೆಂಬರ್ 2: ಕಾನೂನು ಕಾಯ್ದೆಯಡಿ (ಕಂಪನೀಸ್ ಆಕ್ಟ್) ಸಣ್ಣ ಕಂಪನಿಗಳ ಹೆಸರಿನಲ್ಲಿ (ಸಣ್ಣ ಕಂಪನಿಯ ವ್ಯಾಖ್ಯಾನ) ಮತ್ತೆ ಮಾರ್ಪಾಡು ತರಲಾಗಿದೆ. ಸಣ್ಣ ಕಂಪನಿ ಎನಿಸಿಕೊಳ್ಳಲು ಇದ್ದ ಕೆಲ ಮಿತಿಗಳನ್ನು ಈಗ ಹಿಗ್ಗಿಸಲಾಗಿದೆ. ಕಂಪನಿಯ ಫಂಡ್ 10 ಕೋಟಿ ರೂ, ಹಾಗೂ ಟರ್ನೋವರ್ ಮಿತಿ 100 ಕೋಟಿ ರೂಗೆ ಏರಿಸಲಾಗಿದೆ. ಪ್ರಸಕ್ತ ಉದ್ಯಮ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಲಾಗಿದೆ.

ಈ ಮೊದಲು ಪೇಯ್ಡ್ ಅಪ್ ಕ್ಯಾಪಿಟಲ್ ಅಥವಾ ಷೇರುದಾರರ ಫಂಡ್‌ಗೆ 4 ಕೋಟಿ ರೂ ಮಿತಿ ಇತ್ತು. ಬ್ಯುಸಿನೆಸ್ ಟರ್ನೋವರ್ ಮಿತಿ 40 ಕೋಟಿ ರೂ ಇತ್ತು. ಈ ದಾಟಿದರೆ ಅದನ್ನು ಸಣ್ಣ ಕಂಪನಿ ಎಂದು ಪರಿಗಣಿಸಬಹುದು. ಈಗ ಮಿತಿಯನ್ನು ಏರಿಸಲಾಗದ ಸಣ್ಣ ಕಂಪನಿಗಳಿಗೆ ಅನುಕೂಲ.

ಇದನ್ನೂ ಓದಿ: ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಅಪಾಯದ ಮುನ್ಸೂಚನೆ ಕೊಡುವ ಎಚ್ಚರಿಕೆ ಸಿಸ್ಟಂ; ರಿಲಯನ್ಸ್ ಜಿಯೋ ಜೊತೆ ಹೆದ್ದಾರಿ ಪ್ರಾಧಿಕಾರ ಒಪ್ಪಂದ

ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನಿನ್ನೆ ಸೋಮವಾರ (ಡಿ. 1) ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಸಣ್ಣ ಕಂಪನಿಯ ಪೇಯ್ಡ್ ಅಪ್ ಕ್ಯಾಪಿಟಲ್ ಮತ್ತು ಟರ್ನೋವರ್ ಕ್ರಮವಾಗಿ 10 ಕೋಟಿ ರೂ ಹಾಗೂ 100 ಕೋಟಿ ರೂ ಮೀರಿದೆ ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪ್ರಧಾನ ಮಂತ್ರಿಗಳ ಸಲಹೆಗಾರರ ​​ಮಂಡಳಿಯ ಸದಸ್ಯ ಹಾಗೂ ಆರ್ಥಿಕವಾದ ಸಂಜೀವ್ ಸಾನ್ಯಾಲ್ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಸರ್ಕಾರದ ಈ ಸುಧಾರಣಾ ಕ್ರಮವು ದೊಡ್ಡ ಸಂಖ್ಯೆಯ ಎಂಎಸ್‌ಎಂಐಗಳಿಗೆ ಅನುಕೂಲವಾಗಿದೆ ಎಂದು ಹೇಳಿದ್ದಾರೆ.

ಸಂಜೀವ್ ಸಾನ್ಯಾಲ್ ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: 22 ವರ್ಷದ ಕನ್ನಡಿಗ ಆದರ್ಶ ಹಿರೇಮಠ ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್

ಸಣ್ಣ ಉದ್ದಿಮೆಗಳಿಗೆ ಏನು ಅನುಕೂಲ?

ದೊಡ್ಡ ಕಂಪನಿಗಳಿಗೆ ನಾಡಿನ ಕಾನೂನು ಕಟ್ಟಳೆಗಳು ಸಂಕೀರ್ಣವಾಗಿವೆ. ಅದಕ್ಕೆ ಸಣ್ಣ ಉದ್ದಿಮೆಗಳಿಗೆ ಕಟ್ಟಳೆಗಳು, ನಿರ್ಬಂಧಗಳು ಕಡಿಮೆ. ಸಣ್ಣ ಉದ್ದಿಮೆಗಳಿಗೆ ಸರ್ಕಾರದಿಂದಲೂ ವಿವಿಧ ಉತ್ತೇಜನಗಳು ಸಿಗುತ್ತವೆ. ಹೀಗಾಗಿ, ಸಣ್ಣ ಕಂಪನಿಯ ಕೆಟಗರಿಯಲ್ಲಿ ಉಳಿಯಲು ಬಹಳ ಸಂಸ್ಥೆಗಳು ಪ್ರಯತ್ನಿಸುತ್ತಿವೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *