ದೇವನಹಳ್ಳಿ, ಡಿಸೆಂಬರ್ 02: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ತಡರಾತ್ರಿಯಿಂದ ಈವರೆಗೆ ಸುಮಾರು 70ಕ್ಕೂ ಅಧಿಕ ವಿಮಾನಗಳ ಹಾರಾಟದಲ್ಲಿ ಉಂಟಾಗಿದೆ. ಒಟ್ಟು 22 ವಿಮಾನಗಳ ಹಾರಾಟ ಈವರೆಗೆ ರದ್ದಾಗಿದ್ದು, 50ಕ್ಕೂ ಅಧಿಕ ವಿಮಾನಗಳ ಸಂಚಾರ ವಿಳಂಬವಾಗಿದೆ.
ವಿಮಾನಗಳ ಸಾಪ್ಟವೇರ್ ಸಂಬಂಧಿತ ತಾಂತ್ರಿಕ ಕಾರಣಗಳಿಂದಾಗಿ ಕೋಲ್ಕತ್ತಾ, ದೆಹಲಿ, ಮುಂಬೈ, ಡೆಹ್ರಾಡೂನ್, ವಾರಣಾಸಿ, ಅಹಮದಾಬಾದ್, ಪುಣೆ, ಚೆನೈ, ಭೂಪಾಲ್ ಸೇರಿದಂತೆ ಹಲವು ಪ್ರದೇಶಗಳಿಗೆ ತೆರಳಬೇಕಿದ್ದ ವಿಮಾನಗಳು ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಸರಿಯಾದ ಸಮಯಕ್ಕೆ ವಿಮಾನಗಳು ಹಾರಾಟ ನಡೆಸದ ಕಾರಣ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಟ ಸ್ಥಳ. ನಿಗದಿತ ಸಮಯಕ್ಕೆ ಬಂದರೂ ಸರಿಯಾದ ಸಮಯಕ್ಕೆ ನಾವು ಪ್ರಯಾಣಿಸಬೇಕಿದ್ದ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ನಾಳೆಯೂ ಕೆಲ ವಿಮಾನಗಳು ಹಾರಾಟದಲ್ಲಿ ವಿಳಂಬವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ರೂಲ್ಸ್: ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ ದಂಡ ಫಿಕ್ಸ್
ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದ ವಿಪರೀತ ಚಳಿಯ ಪರಿಣಾಮ ಪ್ರತಿಕೂಲ ವಾತಾವರಣದಿಂದ ಬೆಂಗಳೂರು ವಿಮಾನದಿಂದ ಸಂಚಾರ ನಡೆಸಬೇಕಾದರೆ ಸುಮಾರು 81 ವಿಮಾನಗಳ ಹಾರಾಟ ವಿಳಂಬವಾಗಿತ್ತು.ಕೆಲ ವಿಮಾನಗಳು ಕಡಿಮೆ ಅವಧಿಯಷ್ಟು ವಿಳಂಬವಾದರೆ ಈ ಕೆಲ ವಿಮಾನಗಳು ಗರಿಷ್ಠ 69 ನಿಮಿಷ ತಡವಾಗಿ ಹಾರಾಟ ಆರಂಭಿಸಿತ್ತು. ನಾಗರಿಕ ವಿಮಾನಯಾನ ನಿರ್ದೇಶನಾಲಯದ(DGCA) ಈ ಪ್ರಕಾರದ ವಿಮಾನ ವಿಳಂಬಕ್ಕೆ 15 ನಿಮಿಷಗಳ ಮಿತಿಯಿದ್ದು, ಹಾರಾಟ ನಡೆಸಬೇಕಾಗಿತ್ತು 81 ವಿಮಾನಗಳ ಮೇಲಿನ 33 ವಿಮಾನಗಳು ಮಾತ್ರ ಈ ಮಿತಿಯನ್ನು ದಾಟಿದ್ದವು. ದಟ್ಟ ಮಂಜಿನ ಕಾರಣಕ್ಕೆ ಮಂಗಳೂರು ಮತ್ತು ದೆಹಲಿಯಿಂದ ಬರುತ್ತಿದ್ದ ವಿಮಾನಗಳ ಸಂಚಾರ ಮಾರ್ಗ ಬದಲಾವಣೆ ಕೂಡ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 7:36 pm, ಮಂಗಳವಾರ, 2 ಡಿಸೆಂಬರ್ 25